ದೀದಿಗೆ ಪಾಲಿಗೆ ಖಾರವಾಯ್ತು ಮೋದಿ ತಿಂದ ಝಲ್ಕುರಿ!..ಜಾಗ್ರ್ರಾಮ್‌ನ ಎಲ್ಲಾ ಕ್ಷೇತ್ರಗಳಲ್ಲೂ ಕೇಸರಿ ಸುನಾಮಿ

Picture of Savistara

Savistara

Bureau Report

ಕೊಲ್ಕತ್ತಾ: ಪಶ್ಚಿಮ ಬಂಗಾಳದ ರಾಜಕೀಯ (ಬಂಗಾಳElections Result)ಇತಿಹಾಸದಲ್ಲಿ ಒಂದು ಸ್ಮರಣೀಯ ಕ್ಷಣ ದಾಖಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಿಶಿಷ್ಟ ಶೈಲಿಯ ವ್ಯಂಗ್ಯ ಮತ್ತು ಬಂಗಾಳದ ಜನಪ್ರಿಯ ಬೀದಿ ತಿಂಡಿ ‘ಝಲ್ಮುರಿ’ ಈಗ ರಾಜ್ಯದ ಚುನಾವಣಾ ಫಲಿತಾಂಶದ ಸಂಕೇತವಾಗಿ ಮಾರ್ಪಟ್ಟಿದೆ.

ಝಲ್ಮುರಿ ರಾಜಕೀಯ: ಮೋದಿಯವರ ಟಾಂಗ್, ಟಿಎಂಸಿಗೆ ‘ಝಲ್’ ಬಿಸಿ!

ಬಂಗಾಳದಲ್ಲಿ ನಡೆದ ಚುನಾವಣಾ ರ್ಯಾಲಿಯೊಂದರಲ್ಲಿ ಪ್ರಧಾನಿ ಮೋದಿ ಮಾತನಾಡಿ, ನಾನು ಝಲ್ಮುರಿ ತಿಂದೆ, ಆದರೆ ಅದರ ‘ಝಲ್’ (ಖಾರ) ತೃಣಮೂಲ ಕಾಂಗ್ರೆಸ್‌ಗೆ ತಟ್ಟಿತು ಎಂದು ಆಡಳಿತಾರೂಢ ಟಿಎಂಸಿ ಪಕ್ಷಕ್ಕೆ ನೇರ ಪಂಚ್ ನೀಡಿದ್ದರು. ಬಿಜೆಪಿಯ ಈ ನಡೆಯನ್ನು ತೃಣಮೂಲ ಕಾಂಗ್ರೆಸ್ ವ್ಯಂಗ್ಯವಾಡಿತ್ತಾದರೂ, ಸಾಮಾನ್ಯ ಜನರ ನೆಚ್ಚಿನ ಈ ತಿನಿಸು ರಾಜಕೀಯ ಚರ್ಚೆಯ ಕೇಂದ್ರಬಿಂದುವಾಯಿತು.

ಇದೀಗ ಝಲ್ಮುರಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಸದ್ಯ ಭರ್ಜರಿ ಮುನ್ನಡೆ ಸಾಧಿಸಿದ್ದು, ಗೆಲುವಿನ ಹಾದಿಯಲ್ಲಿದೆ. ಆದಾಗ್ಯೂ, ಬಿಜೆಪಿ ತನ್ನ ರಾಜಕೀಯ ಸಿದ್ಧಾಂತದ ‘ಅಂತಿಮ ಗಡಿ’ ಎಂದು ಕರೆದಿದ್ದ ಬಂಗಾಳದಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಲು ಈಗ ಸಂಪೂರ್ಣವಾಗಿ ಸಜ್ಜಾಗಿದೆ.

ಬಂಗಾಳದ ಜಾಗ್ರ್ರಾಮ್ ಜಿಲ್ಲೆಯ ನಾಲ್ಕು ವಿಧಾನಸಭಾ ಸ್ಥಾನಗಳಾದ ನಯಗ್ರಾಮ್, ಗೋಪಿಬಲ್ಲವ್‌ಪುರ, ಜಾಗ್ರ್ರಾಮ್ ಮತ್ತು ಬಿನ್‌ಪುರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.ಜಾಗ್ರ್ರಾಮ್ ರಾಜ್ಯದ ಜಂಗಲ್‌ ಮಹಲ್ ಪ್ರದೇಶದ ಭಾಗವಾಗಿದ್ದು, ಬಂಗಾಳದ ಅತ್ಯಂತ ಕಡಿಮೆ ಅಭಿವೃದ್ಧಿ ಹೊಂದಿದ ಪ್ರದೇಶವಾಗಿದೆ. ಇಲ್ಲಿ ಎಸ್‌ಸಿ ಮತ್ತು ಎಸ್‌ಟಿ ಜನಸಂಖ್ಯೆ ಸುಮಾರು ಶೇ. 49 ರಷ್ಟಿದೆ. ಅಭಿವೃದ್ಧಿಯ ನಿರೀಕ್ಷೆಯಲ್ಲಿರುವ ಈ ಸಮುದಾಯಗಳು ಈ ಬಾರಿ ಬಿಜೆಪಿಯನ್ನು ದೃಢವಾಗಿ ಬೆಂಬಲಿಸಿರುವುದು ಫಲಿತಾಂಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ.

ಝಲ್ಮುರಿ ಸವಿದ ಮೋದಿ

ಪಶ್ಚಿಮ ಬಂಗಾಳದ ಜಾಗ್ರ್ರಾಮ್‌ನಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಚುನಾವಣಾ ಪ್ರಚಾರ ಸಭೆಯನ್ನು ಮುಗಿಸಿ ವಾಪಸಾಗುತ್ತಿದ್ದ ಪ್ರಧಾನಿ ನರೇಂದ್ರ ಮೋದಿ, ಹಠಾತ್ ಆಗಿ ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿ ರಸ್ತೆಬದಿಯ ಸಣ್ಣ ಅಂಗಡಿಯೊಂದಕ್ಕೆ ಭೇಟಿ ನೀಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬಂಗಾಳದ ಅತ್ಯಂತ ಜನಪ್ರಿಯ ತಿಂಡಿಯಾದ ಝಲ್ಮುರಿ ಅಂಗಡಿಯ ಮುಂದೆ ನಿಂತ ಪ್ರಧಾನಿ, ಅಲ್ಲಿನ ಸ್ಥಳೀಯ ಸಂಸ್ಕೃತಿಯೊಂದಿಗೆ ಬೆರೆತರು. ಅಂಗಡಿಯ ಮಾಲೀಕರು ಮೋದಿ ಸಮ್ಮುಖದಲ್ಲೇ ತಾಜಾ ಝಲ್ಮುರಿಯನ್ನು ಸಿದ್ಧಪಡಿಸಿದರು. ಇದನ್ನು ಕುತೂಹಲದಿಂದ ಗಮನಿಸಿದ ಪ್ರಧಾನಿ ಮೋದಿ ತಿಂಡಿಯ ರುಚಿ ನೋಡಿದರು.

ಇದು ಕೇವಲ ತಿಂಡಿ ಸವಿಯುವುದಕ್ಕೆ ಸೀಮಿತವಾಗದೆ, ಅಂಗಡಿಯ ಮಾಲೀಕರು ಮತ್ತು ಸುತ್ತಮುತ್ತಲ ನಿವಾಸಿಗಳೊಂದಿಗೆ ಅತ್ಯಂತ ಸಹಜವಾಗಿ ಸಂವಹನ ನಡೆಸಿದರು. ಅವರ ದೈನಂದಿನ ಜೀವನೋಪಾಯ ಮತ್ತು ಕೆಲಸದ ಬಗ್ಗೆ ವಿಚಾರಿಸಿದರು. ಈ ಅನಿರೀಕ್ಷಿತ ಭೇಟಿಯಿಂದ ಉತ್ತೇಜಿತರಾದ ಸ್ಥಳೀಯರು ಮೋದಿ, ಮೋದಿ ಮತ್ತು ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುವ ಮೂಲಕ ಆ ಪ್ರದೇಶದಲ್ಲಿ ಹಬ್ಬದ ವಾತಾವರಣ ನಿರ್ಮಿಸಿದರು. ಬಂಗಾಳದಲ್ಲಿ ಏಪ್ರಿಲ್ 23 ಮತ್ತು ಏಪ್ರಿಲ್ 29 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮೇ 4 ರಂದು ಫಲಿತಾಂಶ ಹೊರಬೀಳಲಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!