ನವದೆಹಲಿ: ಉತ್ತರ ಪ್ರದೇಶ, ಪಂಜಾಬ್ ಮತ್ತು ಗುಜರಾತ್ರಾಜ್ಯಗಳಿಗೆ ನೂತನ ರಾಜ್ಯ ಉಸ್ತುವಾರಿ ಹಾಗೂ ಸಹ-ಉಸ್ತುವಾರಿಗಳನ್ನು ನೇಮಕ ಮಾಡಿ ಭಾರತೀಯ ಜನತಾ ಪಾರ್ಟಿಯ(ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.
2027ರಲ್ಲಿ ಈ ಮೂರು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.ಉತ್ತರ ಪ್ರದೇಶದ ರಾಜ್ಯ ಉಸ್ತುವಾರಿ ಹೊಣೆಯನ್ನು ರಾಜ್ಯಸಭಾ ಸಂಸದ ವಿನೋದ್ ತಾವೆ ಅವರಿಗೆ ನೀಡಲಾಗಿದೆ. ಜಗದೀಶ್ ಈಶ್ವರಭಾಯಿ ಪಟೇಲ್ ಅವರಿಗೆ ಸಹ-ಉಸ್ತುವಾರಿ ಹೊಣೆ ನೀಡಲಾಗಿದೆ.ರಾಜ್ಯಸಭಾ ಸಂಸದ ಸತೀಶ್ ಪೂನಿಯಾ ಅವರು ಪಂಜಾಬ್ ಹಾಗೂ ರಾಜ್ಯಸಭಾ ಸಂಸದ ತರುಣ್ ಚುಗ್ ಅವರು ಗುಜರಾತ್‌ನ ಉಸ್ತುವಾರಿಯಾಗಿ ನೇಮಕಗೊಂಡಿದ್ದಾರೆ.
ಈ ಹೊಸ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.ಇತರ ರಾಜ್ಯಗಳ ಉಸ್ತುವಾರಿಗಳ ನೇಮಕವನ್ನು ಶೀಘ್ರದಲ್ಲೇ ಮಾಡಲಾಗುವುದು ಎಂದು ಬಿಜೆಪಿ ತಿಳಿಸಿದೆ.













































