ಬಹುಕಾಲದ ಕರಾವಳಿಯ ರೈಲ್ವೇ ಬೇಡಿಕೆ ಈಡೇರಿಸಿದ ಸಂಸದ ಕ್ಯಾ.ಚೌಟ |ಮಂಗಳೂರು ಮೈಸೂರು ವಿಭಾಗಕ್ಕೆ ರಾಜ್ಯಕ್ಕೆ ಏನೇನು ಲಾಭವಾಗಲಿದೆ!

Picture of Savistara

Savistara

Bureau Report

ಕೇಂದ್ರ ರೈಲ್ವೆ ಮಂಡಳಿ ಆದೇಶ:ದಕ್ಷಿಣ ರೈಲ್ವೆ ಪಾಲಕ್ಕಾಡ್ ವಿಭಾಗದಲ್ಲಿದ್ದ ಮಂಗಳೂರು ರೈಲ್ವೆ ಜಾಲವನ್ನು ನೈಋತ್ಯ ರೈಲ್ವೆ (SWR) ಮೈಸೂರು ವಿಭಾಗಕ್ಕೆ ಸೇರ್ಪಡೆ ಮಾಡಿದೆ. 2026 ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ

ಮಂಗಳೂರಿಗೆ ಆಗುವ ಪ್ರಮುಖ 7 ಪ್ರಯೋಜನ:

1. ಆಡಳಿತಾತ್ಮಕ ಗೊಂದಲಕ್ಕೆ ತೆರೆ: ಇಷ್ಟು ದಿನ ಮಂಗಳೂರು ಜಾಲ 3 ವಲಯಗಳಲ್ಲಿ ಹಂಚಿ ಹೋಗಿತ್ತು – ದಕ್ಷಿಣ ರೈಲ್ವೆ, ನೈಋತ್ಯ ರೈಲ್ವೆ, ಕೊಂಕಣ ರೈಲ್ವೆ. ಪಡೀಲ್ ನಲ್ಲಿದ್ದ ಇಂಟರ್‌ಚೇಂಜ್ ಪಾಯಿಂಟ್ ಈಗ ಉಳ್ಳಾಲಕ್ಕೆ ಶಿಫ್ಟ್ ಆಗುತ್ತದೆ. ಇದರಿಂದ ಒಂದೇ ಸೂರಿನಡಿ ಆಡಳಿತ ಬರುತ್ತದೆ. fb02

2. ಆದಾಯ ಕರ್ನಾಟಕಕ್ಕೇ ಉಳಿಯುತ್ತದೆ:ಇಷ್ಟು ದಿನ ಮಂಗಳೂರಿನಿಂದ ಬರುತ್ತಿದ್ದ ಕೋಟ್ಯಂತರ ಆದಾಯ ಪಾಲಕ್ಕಾಡ್ ವಿಭಾಗಕ್ಕೆ ಹೋಗುತ್ತಿತ್ತು. ಈಗ SWR ಮೈಸೂರು ವಿಭಾಗಕ್ಕೆ ಬರುತ್ತದೆ.

3. ಹೊಸ ರೈಲುಗಳಿಗೆ ಅವಕಾಶ:ಪಾಲಕ್ಕಾಡ್ ಲಾಬಿಯಿಂದ ಮಂಗಳೂರಿಗೆ ಹೊಸ ರೈಲು, ಸವಲತ್ತುಗಳು ಸಿಗುತ್ತಿರಲಿಲ್ಲ. ಈಗ ಮೈಸೂರು-ಬೆಂಗಳೂರು-ಮಂಗಳೂರು ನಡುವೆ ಹೊಸ ರೈಲು, ಮೆಮು, ವಂದೇ ಭಾರತ್ ಸೇವೆಗಳು ಸುಲಭವಾಗಿ ಮಂಜೂರಾಗುತ್ತದೆ.

4. ವೇಗದ ಕಾಮಗಾರಿ:ಪ್ರಸ್ತುತ ಪಣಂಬೂರು, ಜೊಕಟ್ಟೆ, ಕುಲಶೇಖರ, ಪಡೀಲ್, ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್, ಬಂದರ್, ನೇತ್ರಾವತಿ ಮತ್ತು ಉಳ್ಳಾಲ ನಿಲ್ದಾಣಗಳು ಮೈಸೂರು ವಿಭಾಗಕ್ಕೆ ಬರಲಿವೆ. ಮೂಲಸೌಕರ್ಯ, ಪ್ಲಾಟ್‌ಫಾರ್ಮ್ ವಿಸ್ತರಣೆ, ಅಮೃತ್ ಭಾರತ್ ಯೋಜನೆ ಕೆಲಸಗಳು ವೇಗವಾಗುತ್ತವೆ.

5. ಸರಕು ಸಾಗಣೆ ಮತ್ತು ಬಂದರಿಗೆ ಲಾಭ:ಮಂಗಳೂರು ಬಂದರಿನಿಂದ ಉತ್ತರ ಮತ್ತು ದಕ್ಷಿಣ ಕರ್ನಾಟಕದ ವಿದ್ಯುತ್ ಮತ್ತು ಉಕ್ಕಿನ ಸ್ಥಾವರಗಳಿಗೆ ಸರಕು ಸಾಗಣೆ ಸುಗಮವಾಗಲಿದೆ. *6. ಪ್ರಯಾಣಿಕರ ಸಮಸ್ಯೆಗೆ ತ್ವರಿತ ಪರಿಹಾರ:

ಮಂಗಳೂರು – ಪಾಲಕ್ಕಾಡ್ 350 ಕಿ.ಮೀ ದೂರವಿತ್ತು. ಈಗ ಮೈಸೂರು ವಿಭಾಗದಿಂದ ನಿರ್ಧಾರಗಳು ಬೇಗನೆ ಆಗುತ್ತವೆ, ಕನ್ನಡದಲ್ಲೇ ವ್ಯವಹಾರ ಸಾಧ್ಯ.

7. ಕರ್ನಾಟಕ ಏಕೀಕರಣ:1907ರಲ್ಲಿ ಬಂದ ಮಂಗಳೂರು ರೈಲ್ವೆ 119 ವರ್ಷದಿಂದ ಚೆನ್ನೈ/ಕೇರಳ ಕೇಂದ್ರದಲ್ಲಿತ್ತು. ಈಗ ಹುಬ್ಬಳ್ಳಿ ಕೇಂದ್ರದ SWR ನಲ್ಲಿ ಕರ್ನಾಟಕದ 84% ಜಾಲ ಒಂದಾಗಿದೆ.

ತೋಕೂರು ಮಾತ್ರ ಕೊಂಕಣ ರೈಲ್ವೆಯಲ್ಲೇ ಇರುತ್ತದೆ – ಅದು KRCL ಮತ್ತು SWR ನಡುವಿನ ಇಂಟರ್‌ಚೇಂಜ್ ಆಗಿ ಮುಂದುವರಿಯಲಿದೆ.

ಪಣಂಬೂರು, ಜೊಕಟ್ಟೆ, ಕುಲಶೇಖರ, ಪಡೀಲ್, ಮಂಗಳೂರು ಜಂಕ್ಷನ್, ಮಂಗಳೂರು ಸೆಂಟ್ರಲ್, ಬಂದರ್, ನೇತ್ರಾವತಿ ಮತ್ತು ಉಳ್ಳಾಲ ವರೆಗಿನ ಎಲ್ಲಾ ನಿಲ್ದಾಣಗಳು ಪಾಲಕ್ಕಾಡ್ ವಿಭಾಗದಿಂದ ಮೈಸೂರು ವಿಭಾಗಕ್ಕೆ ಹಸ್ತಾಂತರ.- ಪಡೀಲ್ ನಲ್ಲಿದ್ದ SWR ಮತ್ತು SR ನಡುವಿನ ಇಂಟರ್‌ಚೇಂಜ್ ಪಾಯಿಂಟ್ ಈಗ

ಉಳ್ಳಾಲಕ್ಕೆ ಶಿಫ್ಟ್.- ತೋಕೂರು ನಿಲ್ದಾಣ ಮಾತ್ರ ಕೊಂಕಣ ರೈಲ್ವೆ ನಿಗಮದಲ್ಲೇ (KRCL ಮತ್ತು SWR ನಡುವಿನ ಇಂಟರ್‌ಚೇಂಜ್ ಆಗಿರುತ್ತದೆ.- ಸಿಬ್ಬಂದಿ: ಗೆಜೆಟೆಡ್ ಅಧಿಕಾರಿಗಳು ನಿಯಮದಂತೆ ವರ್ಗಾವಣೆ. ನಾನ್-ಗೆಜೆಟೆಡ್ ಸಿಬ್ಬಂದಿಗೆ ಪಾಲಕ್ಕಾಡ್ ನಲ್ಲೇ ಉಳಿಯಲು ಅಥವಾ ಮೈಸೂರಿಗೆ ಬರಲು ಆಯ್ಕೆ.

20 ವರ್ಷದ ಹೋರಾಟ ಯಾಕೆ?ಮಂಗಳೂರು ರೈಲ್ವೆ 1907 ರಲ್ಲಿ ಶುರುವಾಯಿತು. 119 ವರ್ಷದಿಂದ ಮಂಗಳೂರಿನ ರೈಲುಗಳು ಚೆನ್ನೈ ಕೇಂದ್ರದ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದಲ್ಲಿದ್ದವು.- ಮಂಗಳೂರು – ಪಾಲಕ್ಕಾಡ್ ಅಂತರ 350 ಕಿ.ಮೀ- ಮಂಗಳೂರು ಗಳಿಸುವ ಆದಾಯವೆಲ್ಲ ಪಾಲಕ್ಕಾಡ್ ಗೆ ಹೋಗುತ್ತಿತ್ತು- ಮಂಗಳೂರಿಗೆ ಬೇಕಾದ ಹೊಸ ರೈಲು, ಪ್ಲಾಟ್‌ಫಾರ್ಮ್, ಸವಲತ್ತು ಕೇರಳ ಲಾಬಿಯಿಂದ ತಡೆ ಆಗುತ್ತಿತ್ತು- ಕನ್ನಡದಲ್ಲಿ ಮನವಿ ಕೊಟ್ಟರೂ ಕೇಳುವವರಿಲ್ಲದ ಸ್ಥಿತಿ ಇತ್ತು ಈ ಹಿಂದೆ ರೈಲ್ವೇ ಮಂತ್ರಿ ನಿತೀಶ್ ಕುಮಾರ್ ಮಂಗಳೂರು ವಿಭಾಗ ಬಗ್ಗೆ ಘೋಷಣೆ ಮಾಡಿದ್ದರು ಜಾರಿಯಾಗಿರಲಿಲ್ಲ ನಮಗೆ ನಮ್ಮದೇ ಆಡಳಿತ: ಇನ್ನು ಮೈಸೂರು ವಿಭಾಗವೇ ಎಲ್ಲಾ ನಿರ್ಧಾರ ತೆಗೆದುಕೊಳ್ಳುತ್ತದೆ. ಹುಬ್ಬಳ್ಳಿಯ SWR ಕೇಂದ್ರದಿಂದ ನೇರ ಅನುದಾನ ಬರುತ್ತದೆ.

2. ಹೊಸ ರೈಲುಗಳು: ಬೆಂಗಳೂರು – ಮಂಗಳೂರು ನಡುವೆ ರಾತ್ರಿ ರೈಲು, ಸುಬ್ರಹ್ಮಣ್ಯ – ಮಂಗಳೂರು ಮೆಮು, ಮಂಗಳೂರು – ಕಾರವಾರ – ಗೋವಾ ಹೊಸ ರೈಲುಗಳಿಗೆ ದಾರಿ ಸುಗಮ.

ಹಾಸನ – ಸಕಲೇಶಪುರ – ಸುಬ್ರಹ್ಮಣ್ಯ ಘಾಟ್ ಸೆಕ್ಷನ್ ಈಗಾಗಲೇ SWR ನಲ್ಲಿದೆ. ಮಂಗಳೂರು SWR ಗೆ ಬಂದರೆ ಸುಬ್ರಹ್ಮಣ್ಯದಿಂದ ಮಂಗಳೂರಿನವರೆಗೆ ಒಂದೇ ವಲಯ. ಹಾಗಾಗಿ ಸುಳ್ಯದಿಂದ ಬೆಂಗಳೂರಿಗೆ ನೇರ ರೈಲು, ಘಾಟಿ ರೈಲುಗಳ ವೇಗ ಹೆಚ್ಚಳ ಸಾಧ್ಯ.

4. ಉದ್ಯೋಗ: ರೈಲ್ವೆ ನೇಮಕಾತಿಯಲ್ಲಿ ಕನ್ನಡಿಗರಿಗೆ, ಕರಾವಳಿಗರಿಗೆ ಹೆಚ್ಚು ಆದ್ಯತೆ ಸಿಗುತ್ತದೆ.

5. ಬಂದರು ಮತ್ತು ಕೈಗಾರಿಕೆ: ಪಣಂಬೂರು ಬಂದರು, ಮಂಗಳೂರು ಕೈಗಾರಿಕೆಗಳಿಂದ ಬಳ್ಳಾರಿ, ಹೊಸಪೇಟೆಗೆ ಕಬ್ಬಿಣ, ಕಲ್ಲಿದ್ದಲು ಸಾಗಣೆ ವೇಗವಾಗುತ್ತದೆ.

6. ಪ್ರವಾಸೋದ್ಯಮ: ಕರಾವಳಿ – ಮಲೆನಾಡು – ಮೈಸೂರು ಪ್ರವಾಸಿ ಸರ್ಕ್ಯೂಟ್ ರೈಲುಗಳು ಬರಬಹುದು.

7. ಸಮಸ್ಯೆ ಪರಿಹಾರ ವೇಗ: ಟಿಕೆಟ್, ಸ್ವಚ್ಛತೆ, ಕುಡಿಯುವ ನೀರು ಸಮಸ್ಯೆಗೆ ಮೈಸೂರಿಗೆ ದೂರು ಕೊಟ್ಟರೆ ಸಾಕು, ಪಾಲಕ್ಕಾಡ್ ಗೆ ಅಲೆದಾಡಬೇಕಿಲ್ಲ.

8. ಕರ್ನಾಟಕ ಏಕೀಕರಣ: ಕರ್ನಾಟಕದ ರೈಲ್ವೆ ಜಾಲದ 84% ಈಗ SWR ಅಡಿಗೆ ಬಂದಿದೆ. ಇದು ಕರ್ನಾಟಕ ರೈಲ್ವೆ ಇತಿಹಾಸದಲ್ಲಿ ಮೈಲಿಗಲ್ಲು.ಕೇರಳ ಮುಖ್ಯಮಂತ್ರಿ,ಸಂಸದರು ಈಗಾಗಲೇ ವಿರೋದ ವ್ಯಕ್ತಪಡಿಸಿದ್ದಾರೆ ಆದರೆ ಸಂಸದ ಕ್ಯಾ ಚೌಟರು ರೈಲ್ವೇ ಮಂತ್ರಿ ಅಶ್ವಿನ್ ವೈಷ್ಣವ ಮತ್ತು ಸೋಮಣ್ಣ ನಿರಂತರ ಸಂಪರ್ಕ ಪಟ್ಟು ಹಿಡಿದ ಕಾರಣ ಈ ಕಾರ್ಯ ಸಾಧ್ಯವಾಗಿದ್ದು ರೈಲ್ವೇ ಪ್ರಯಾಣಿಕರು, ಯಾತ್ರಿಗಳು ಸಂತಸ ವ್ಯಕ್ತಪಡಿಸಿದ್ದಾರೆ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!