ಈ ವರ್ಷದ ಕೊನೆಯ ಚಂದ್ರಗ್ರಹಣವು ಆಗಸ್ಟ್ 28ರಂದು ಸಂಭವಿಸಲಿದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದರೂ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇದರ ಪ್ರಭಾವ 12 ರಾಶಿಗಳ ಮೇಲೂ ಇರಲಿದೆ. ವಿಶೇಷವಾಗಿ ಗ್ರಹಣದ ಪ್ರಭಾವವು ಕೆಲವು ದಿನಗಳಿಂದ ಒಂದು ತಿಂಗಳವರೆಗೆ ಇರಲಿದ್ದು, ಈ ಕೆಳಗಿನ ಮೂರು ರಾಶಿಯವರು ತೀವ್ರ ಎಚ್ಚರಿಕೆ ವಹಿಸುವುದು ಅಗತ್ಯ.
ಅಧಿಕ ಪ್ರಭಾವಕ್ಕೊಳಗಾಗುವ ರಾಶಿಗಳು:
ಕರ್ಕ ರಾಶಿ: ಚಂದ್ರನು ಈ ರಾಶಿಯ ಅಧಿಪತಿಯಾಗಿರುವುದರಿಂದ ಗ್ರಹಣದ ಪ್ರಭಾವ ಹೆಚ್ಚಿರಲಿದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆ ಇರಲಿ. ಕುಟುಂಬ ಹಾಗೂ ದಾಂಪತ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಕೆಲಸದ ಸ್ಥಳದಲ್ಲಿ ಮೇಲಾಧಿಕಾರಿಗಳೊಂದಿಗೆ ಅನಗತ್ಯ ವಾದಕ್ಕೆ ಹೋಗಬೇಡಿ.
ಸಿಂಹ ರಾಶಿ: ಗ್ರಹಣದ ಅವಧಿಯಲ್ಲಿ ಹೊಸ ಕೆಲಸ ಅಥವಾ ಸಾಹಸಗಳಿಗೆ ಕೈಹಾಕದಿರುವುದು ಉತ್ತಮ. ಅತಿಯಾದ ಖರ್ಚು-ವೆಚ್ಚಗಳು ಆತಂಕ ತರಬಹುದು. ಕುಟುಂಬ ಮತ್ತು ಸಂಬಂಧಗಳಲ್ಲಿ ತಾಳ್ಮೆಯಿಂದ ವ್ಯವಹರಿಸುವುದು ಒಳಿತು.
ಕುಂಭ ರಾಶಿ: ಈ ಬಾರಿಯ ಚಂದ್ರಗ್ರಹಣವು ಕುಂಭ ರಾಶಿಯಲ್ಲೇ ಸಂಭವಿಸುತ್ತಿರುವುದರಿಂದ ಈ ರಾಶಿಯವರ ಮೇಲೆ ಪ್ರಭಾವ ತೀವ್ರವಾಗಿರುತ್ತದೆ. ಆರೋಗ್ಯ, ಧನ ನಷ್ಟ ಹಾಗೂ ಉದ್ಯೋಗದ ವಿಚಾರದಲ್ಲಿ ಹೆಚ್ಚಿನ ಜಾಗರೂಕತೆ ಅಗತ್ಯ.
(ಸೂಚನೆ: ಭಾರತೀಯ ಕಾಲಮಾನ ಬೆಳಿಗ್ಗೆ 6.53 ರಿಂದ ಮಧ್ಯಾಹ್ನ 12.32 ರವರೆಗೆ ಗ್ರಹಣದ ಅವಧಿಯಾಗಿದ್ದು, ಹಗಲಾದ್ದರಿಂದ ಭಾರತದಲ್ಲಿ ಚಂದ್ರಗ್ರಹಣ ಗೋಚರಿಸುವುದಿಲ್ಲ).















































