BREAKING NEWS: 7 ತಿಂಗಳಾದ್ರೂ ಸಿಗದ ಸುಳಿವು: ಮಿಸ್ಸಿಂಗ್ ಕೇಸ್‌ನಲ್ಲಿ ಬಯಲಾಯ್ತು ಶಾಕಿಂಗ್ ಅನುಮಾನ!

Picture of Savistara

Savistara

Bureau Report

ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ಪಿಯುಸಿ ಓದುತ್ತಿದ್ದ ಇಬ್ಬರು ಯುವತಿಯರು ನಾಪತ್ತೆಯಾಗಿ ಬರೋಬ್ಬರಿ ಏಳು ತಿಂಗಳು ಕಳೆದರೂ ಪತ್ತೆಯಾಗದಿರುವುದು ತನಿಖಾ ಸಂಸ್ಥೆಗಳು ಹಾಗೂ ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ.​

ಪ್ರಕರಣ ಮುಖ್ಯಾಂಶಗಳು:

​ನಾಪತ್ತೆಯಾದ ಹಿನ್ನೆಲೆ: ಜನವರಿ 31 ರಂದು ಪರೀಕ್ಷೆಯ ಭಯದಿಂದ ತಪ್ಪಿಸಿಕೊಳ್ಳಲು ಕೇವಲ ₹3,000 ಹಣದೊಂದಿಗೆ ಇಬ್ಬರೂ ಮನೆ ಬಿಟ್ಟು ತೆರಳಿದ್ದರು.​

ಡಿಜಿಟಲ್ ಸುಳಿವೇ ಇಲ್ಲ: ಯುವತಿಯರು ಯಾವುದೇ ಮೊಬೈಲ್ ಫೋನ್ ಅಥವಾ ಎಟಿಎಂ ಕಾರ್ಡ್ ಬಳಸುತ್ತಿಲ್ಲ. ಆಧಾರ್ ಕಾರ್ಡ್ ಬಳಸಿ ಉಚಿತ ಬಸ್‌ನಲ್ಲಿ ಪ್ರಯಾಣಿಸಿದ ಸುಳಿವು ಬಿಟ್ಟರೆ ಬೇರೆ ಯಾವುದೇ ಸುಳಿವು ಸಿಕ್ಕಿಲ್ಲ.

​ಕೊನೆಯ ಸುಳಿವು: ಇಬ್ಬರೂ ಕೊನೆಯದಾಗಿ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದರೆಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿಂದ ಮುಂದೆ ಏನಾದರು ಎಂಬುದು ನಿಗೂಢವಾಗಿದೆ.

​ಸಿಐಡಿ ತನಿಖೆ: ಪೊಲೀಸರಿಗೆ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೋಷಕರು ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಕೋರ್ಟ್ ಸೂಚನೆಯಂತೆ ಕಳೆದ 3 ತಿಂಗಳ ಹಿಂದೆ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.​

ಮಾನವ ಕಳ್ಳಸಾಗಣೆ ಶಂಕೆ: ಇಷ್ಟೊಂದು ಸುದೀರ್ಘ ಅವಧಿಯವರೆಗೆ ಯಾವುದೇ ಮಾಹಿತಿ ಸಿಗದ ಹಿನ್ನೆಲೆಯಲ್ಲಿ, ಯುವತಿಯರು ಮಾನವ ಕಳ್ಳಸಾಗಣೆ (Human Trafficking) ಜಾಲಕ್ಕೆ ಸಿಲುಕಿರಬಹುದೇ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!