ಕ್ರೀಮಿ ಲೇಯರ್ ತೀರ್ಪು ಜಾರಿಗೆ 2 ವರ್ಷ ಕಾಲಾವಕಾಶ ಕೊಡಿ: ಸುಪ್ರೀಂ ಮೆಟ್ಟಿಲೇರಿದ ಕೇಂದ್ರ ಸರ್ಕಾರ!

Picture of Savistara

Savistara

Bureau Report

ಹಿಂದುಳಿದ ವರ್ಗಗಳ ‘ಕ್ರಿಮಿಲೇಯರ್’ (Creamy Layer) ವಿಚಾರಕ್ಕೆ ಸಂಬಂಧಿಸಿದಂತೆ ಮಾರ್ಚ್ 11 ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪೂರ್ವಾನ್ವಯವಾಗಿ (Retrospectively) ಜಾರಿಗೊಳಿಸಲು ಕೇಂದ್ರ ಸರ್ಕಾರವು ನ್ಯಾಯಾಲಯದಿಂದ ಎರಡು ವರ್ಷಗಳ ಸುದೀರ್ಘ ಕಾಲಾವಕಾಶವನ್ನು ಕೋರಿದೆ.

ಈ ತೀರ್ಪಿನ ಅನುಷ್ಠಾನವು ಸರ್ಕಾರಿ ನೇಮಕಾತಿಗಳು, ಸೇವಾ ವಿಷಯಗಳು, ಕೇಡರ್ ಹಂಚಿಕೆ, ಹಿರಿತನದ ಜೇಷ್ಠತೆ (Seniority), ಉನ್ನತ ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳು ಹಾಗೂ ದೇಶದ 18 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮೇಲೆ ತೀವ್ರವಾದ ಮತ್ತು ದೂರಗಾಮಿ ಪರಿಣಾಮಗಳನ್ನು ಬೀರುತ್ತದೆ ಎಂದು ಸರ್ಕಾರ ಹೇಳಿದೆ. ಈ ತೀರ್ಪಿನಿಂದಾಗಿ ಪೋಷಕರು ಹೆಚ್ಚಿನ ಆದಾಯ ಹೊಂದಿದ್ದರೂ ಸಹ ಕೆಲವು ಅಭ್ಯರ್ಥಿಗಳು ‘ನಾನ್-ಕ್ರಿಮಿಲೇಯರ್’ ವಿಭಾಗಕ್ಕೆ ಸೇರ್ಪಡೆಯಾಗುವ ಗೊಂದಲ ಉಂಟಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸ್ಪಷ್ಟಪಡಿಸಿದೆ.

ಹೀಗಾಗಿ ತೀರ್ಪಿನ ಸ್ಪಷ್ಟೀಕರಣವನ್ನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಕೇಂದ್ರ ಸರ್ಕಾರ, ಬಾಧಿತ ಹುದ್ದೆಗಳ ಸಮಾನತೆಯನ್ನು (Equivalence of posts) ನಿರ್ಧರಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಮತ್ತು ಈ ನಿರ್ಧಾರದಿಂದ ಉದ್ಭವಿಸುವ ವಿವಿಧ ಆಡಳಿತಾತ್ಮಕ ತೊಡಕುಗಳನ್ನು ಸರಿಪಡಿಸಲು ಸೂಕ್ತ ಸಮಯದ ಅಗತ್ಯವಿದೆ. ಆದ್ದರಿಂದ ತೀರ್ಪಿನ ಜಾರಿಗೆ ಕನಿಷ್ಠ ಎರಡು ವರ್ಷಗಳ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!