ಸಿಎನ್‌ಜಿ ದರ ಕೆ.ಜಿಗೆ ₹3.89ರಷ್ಟು ಹೆಚ್ಚಳ

Picture of Savistara

Savistara

Bureau Report

ನವದೆಹಲಿ: ಸಾಂದ್ರೀಕೃತ ನೈಸರ್ಗಿಕ ಅನಿಲದ (ಸಿಎನ್‌ಜಿ) ದರವನ್ನು ಪ್ರತಿ ಕೆ.ಜಿಗೆ ₹3.89ರಷ್ಟು ಹೆಚ್ಚಿಸಲಾಗಿದೆ. ಪರಿಷ್ಕೃತ ದರವು ಇಂದಿನಿಂದಲೇ (ಶನಿವಾರ) ಜಾರಿಗೆ ಬಂದಿದೆ.

ಇಂದ್ರಪ್ರಸ್ಥ ಗ್ಯಾಸ್‌ ಲಿಮಿಟೆಡ್‌ನ (ಐಜಿಎಲ್) ಕಾರ್ಯವ್ಯಾಪ್ತಿಯಲ್ಲಿ ಸಿಎನ್‌ಜಿ ದರ ಹೆಚ್ಚಳ ಆಗಿದೆ ಎಂದು ಕಂಪನಿ ತಿಳಿಸಿದೆ. ಇಂದ್ರಪ್ರಸ್ಥ ಕಂಪನಿಯು ಉತ್ತರ ಭಾರತದಲ್ಲಿ ಹೆಚ್ಚಿನ ಮಾರುಕಟ್ಟೆಯನ್ನು ಹೊಂದಿದೆ.ದೆಹಲಿಯಲ್ಲಿ ಪ್ರಸ್ತುತ ಸಿಎನ್‌ಜಿ ದರ ಕೆ.ಜಿ.ಗೆ ₹86.98 ಆಗಿದೆ.

ಸಿಎನ್‌ಜಿ ತಯಾರಿಕೆಗೆ ಬಳಸುವ ಹೆಚ್ಚಿನ ಪ್ರಮಾಣದ ಗ್ಯಾಸ್ ಅನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಪಶ್ಚಿಮ ಏಷ್ಯಾ ಸಂಘರ್ಷ ಆರಂಭವಾದಂದಿನಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಇದರ ದರಗಳು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ ಎಂದು ಐಜಿಎಲ್ ಹೇಳಿದೆ.

ಅಂತರರಾಷ್ಟ್ರೀಯ ಎಲ್‌ಎನ್‌ಜಿ ಬೆಲೆಗಳು ಗಣನೀಯವಾಗಿ ಏರಿಕೆಯಾಗಿದ್ದು, ವೆಚ್ಚದ ಮೇಲಿನ ಪ್ರಭಾವ ಹೆಚ್ಚುತ್ತಿರುವುದರಿಂದ ಗ್ಯಾಸ್‌ ಉತ್ಪಾದನಾ ವೆಚ್ಚದ ಹೊರೆಯ ಸಮತೋಲನಕ್ಕಾಗಿ ಪ್ರತಿ ಕೆಜಿಗೆ ₹3.89ರಷ್ಟು ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ’ ಎಂದು ಐಜಿಎಲ್ ತಿಳಿಸಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!