ಅಪರಿಚಿತ ಸಂಖ್ಯೆಯಿಂದ ಕಾಲ್ ಬಂದ್ರೆ ‘ಹಲೋ’ ಅನ್ನಬೇಡಿ!: ನಿಮ್ಮ ಸಣ್ಣ ದನಿಯನ್ನೂ ಬಳಸಿ ಬ್ಯಾಂಕ್ ಖಾತೆ ಖಾಲಿ ಮಾಡ್ತಾರೆ ಎಐ ವಂಚಕರು!

Picture of Savistara

Savistara

Bureau Report

​ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಛಾಗುತ್ತಿದ್ದು, ನಕಲಿ ಕರೆಗಳ ಮೂಲಕ ಸಾರ್ವಜನಿಕರನ್ನು ವಂಚಿಸುವ ಜಾಲ ಸಕ್ರಿಯವಾಗಿದೆ. ಅಪರಿಚಿತರು ಕರೆ ಮಾಡಿದ ತಕ್ಷಣ “ಹಲೋ” ಎನ್ನಬೇಡಿ, ಏಕೆಂದರೆ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ನಿಮಿಷಾರ್ಧದಲ್ಲೇ ನಿಮ್ಮ ಧ್ವನಿಯನ್ನು ತದ್ರೂಪಿಯಾಗಿ (Voice Cloning) ಸೃಷ್ಟಿಸಿ ಹಣ ದೋಚುವ ಅಪಾಯವಿರುತ್ತದೆ.​ರೋಬೋಟ್ ಕರೆಗಳು, ಬ್ಯಾಂಕ್ ಅಧಿಕಾರಿಗಳ ನೆಪದಲ್ಲಿ ಮಾಹಿತಿ ಕೇಳುವುದು ಅಥವಾ ‘ಪ್ರೆಸ್ 1, ಪ್ರೆಸ್ 2’ ಎಂದು ಸೂಚನೆ ನೀಡುವ ಕಂಪನಿ ಕರೆಗಳ ಬಗ್ಗೆ ಅತ್ಯಂತ ಎಚ್ಚರಿಕೆಯಿಂದಿರಬೇಕು. ಅಪರಿಚಿತ ಕರೆ ಬಂದಾಗ ಮೊದಲು ಎದುರಿನವರ ಮಾತುಗಳನ್ನು ಆಲಿಸಿ, ಸ್ಕ್ಯಾಮ್ ಎಂಬ ಅನುಮಾನ ಬಂದ ತಕ್ಷಣ ಕರೆಯನ್ನು ಕಡಿತಗೊಳಿಸಿ ಸಂಖ್ಯೆಯನ್ನು ಬ್ಲಾಕ್ ಮಾಡುವುದು ಸೂಕ್ತ. ಮೊಬೈಲ್‌ನಲ್ಲಿ ಸ್ಪಾಮ್ ಫಿಲ್ಟರ್‌ಗಳನ್ನು ಆನ್ ಇಟ್ಟುಕೊಳ್ಳುವುದು ಹಾಗೂ ಯಾವುದೇ ಕಾರಣಕ್ಕೂ ಖಾಸಗಿ ಮಾಹಿತಿ ಅಥವಾ ಒಟಿಪಿ ಹಂಚಿಕೊಳ್ಳದಿರುವುದು ಸೈಬರ್ ವಂಚನೆಯಿಂದ ಬಚಾವ್ ಆಗಲು ಪ್ರಮುಖ ಮುನ್ನೆಚ್ಚರಿಕೆಗಳಾಗಿವೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!