ಟ್ರಾವೆಲ್ ಮಾಡುವಾಗ ನೀವು ಮಾಡೋ ಈ ಕೆಲಸಗಳಿಂದ ಇತರರಿಗೆ ಕಿರಿಕಿರಿಯಾದೀತು! ಸಿವಿಕ್ ಸೆನ್ಸ್ ಮರೆಯಬೇಡಿ

Picture of Savistara

Savistara

Bureau Report

ಎಷ್ಟೋ ಜನರಿಗೆ ಟ್ರಾವೆಲ್ ಮಾಡೋದು ಇಷ್ಟ. ಕೆಲವರಿಗೆ ಅನಿವಾರ್ಯ. ನೀವು ಯಾವಾಗ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಹತ್ತುತ್ತೀರೋ ಆಗ ಸಿವಿಕ್ ಸೆನ್ಸ್ ಮರೆಯಬೇಡಿ. ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ನಿಮ್ಮಿಂದ ತಪ್ಪಾಗಿರುತ್ತದೆ. ಬಸ್, ರೈಲು, ವಿಮಾನ, ಕ್ಯಾಬ್, ಟ್ಯಾಕ್ಸಿ ಮೆಟ್ರೋ ಯಾವುದೇ ಸಾರ್ವಜನಿಕ ಸಂಪರ್ಕ ಬಳಕೆ ಮಾಡುವಾಗ ಕೆಲವೊಂದಿಷ್ಟು ರೂಲ್ಸ್ ಫಾಲೋ ಮಾಡಿ. ನೀವು ರೂಲ್ಸ್ ಫಾಲೋ ಮಾಡಿ ನಾಲೈದು ಜನಕ್ಕೆ ಹೇಳಿಕೊಡಿ. ಯಾವೆಲ್ಲಾ ರೂಲ್ಸ್ ಫಾಲೋ ಮಾಡೋಕು ಗೊತ್ತಾ?ಮೊದಲನೆಯದು ಹಾಗೂ ತುಂಬಾ ಮುಖ್ಯವಾದ್ದು ಫೋನ್‌ನಲ್ಲಿ ಜೋರಾಗಿ ಸದ್ದು ಹಾಕಿಕೊಂಡು ರೀಲ್ಸ್ ನೋಡಬೇಡಿ. ನೀವು ಯಾವ ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ನಲ್ಲಿ ಟ್ರಾವೆಲ್ ಮಾಡಿದ್ರೂ ಪ್ರಯಾಣದ ಸಮಯದಲ್ಲಿ ಒಬ್ಬರಾದ್ರೂ ಊರಿಗೆಲ್ಲ ಕೇಳುವಷ್ಟು ಸದ್ದು ಇಟ್ಟುಕೊಂಡು ರೀಲ್ಸ್ ನೋಡೋದು, ವಿಡಿಯೋ ನೋಡೋದನ್ನು ಗಮನಿಸಿರುತ್ತೀರಿ. ಇದು ಕಾಮನ್ ಸೆನ್ಸ್ ಇಲ್ಲದವರು ಮಾಡುವ ಕೆಲಸ.

ಅಕ್ಕಪಕ್ಕದವರಿಗೆ ಕೇಳಿಸುವಂತೆ ಜೋರಾಗಿ ಫೋನ್‌ನಲ್ಲಿ ಮಾತನಾಡಬೇಡಿ. ಸ್ಪೀಕರ್ ಹಾಕಿಕೊಳ್ಳಬೇಡಿ. ಇದು ಇತರರಿಗೆ ಕಿರಿಕಿರಿ ಮಾಡುತ್ತದೆ.ಪಕ್ಕ ಸೀಟ್ ಉಳಿದಿದೆ ಎಂದೋ ಅಥವಾ ಪಕ್ಕದಲ್ಲಿ ಕುಳಿತಿರುವ ವ್ಯಕ್ತಿ ಸಣ್ಣಗಿದ್ದಾರೆ ಎಂದೋ ಹೆಚ್ಚುವರಿ ಸೀಟ್‌ನಲ್ಲಿ ಅಗಲವಾಗಿ ಕಾಲು ಚಾಚಿಕೊಂಡು ಕೂರಬೇಡಿ.

ಸೀಟಿನ ಮೇಲೆ ಕಾಲಿಟ್ಟುಕೊಂಡು ಕೂರುವುದು, ಚಕ್ಕಲುಬಕ್ಕಲು ಹಾಕಿಕೊಂಡು ಕೂರುವುದು, ಚಪ್ಪಲಿಯನ್ನು ಸೀಟಿಗೆ ತಾಗಿಸುವುದು ನೋಡಿದವರಿಗೆ ಮುಜುಗರ ತರಿಸುತ್ತದೆ.ಒಂದು ರಾಶಿ ಲಗೇಜ್ ತಂದು ಕೂರುವ ಜಾಗದಲ್ಲಿ ಇಟ್ಟುಕೊಳ್ಳುವುದು ಬ್ಯಾಡ್ ಮ್ಯಾನರ್ಸ್. ಜನರ ಓಡಾಟಕ್ಕೆ ತೊಂದರೆಯಾಗುವಂತೆ ನಡೆದುಕೊಳ್ಳಬೇಡಿ.ಮುಂದಿನ ಸೀಟ್‌ನಲ್ಲಿರುವ ವ್ಯಕ್ತಿಗೆ ತಾಗುವಂತೆ ಕೈಕಾಲು ಆಡಿಸುವುದು, ಅವರ ಸೀಟ್‌ಗೆ ಕಾಲಿನಲ್ಲಿ ಒದೆಯುವುದು ಉತ್ತಮವಲ್ಲ.ಬಸ್ ಅಥವಾ ರೈಲಿನಲ್ಲಿ ನಮ್ಮದೇನು ಹೋಗುತ್ತದೆ ಎನ್ನುವ ಮನೋಭಾವದಿಂದ ವಸ್ತುಗಳನ್ನು ಡ್ಯಾಮೇಜ್ ಮಾಡುವುದು, ತಿಂದ ಚಿಪ್ಸ್ ಬಿಸ್ಕೆಟ್ ಕವರ್‌ಗಳನ್ನು ಅಲ್ಲೇ ಎಸೆದು ಹೋಗುವುದು ಕಾಮನ್ ಸೆನ್ಸ್‌ಗೆ ವಿರೋಧವಾಗಿದೆ.

ಮಕ್ಕಳನ್ನು ಜೋರಾಗಿ ಕೂಗಲು, ಗಲಾಟೆ ಮಾಡಲು ಬಿಡುವುದು, ಮಕ್ಕಳ ವಿಡಿಯೋಗಳ ವಾಲ್ಯೂಮ್ ಕಡಿಮೆ ಇರಲಿಇದೆಲ್ಲವೂ ತುಂಬಾ ಕಾಮನ್ ಆದ ಅಂಶಗಳಾಗಿದ್ದು, ಪ್ರತಿಯೊಬ್ಬರಿಗೂ ಈಗಾಗಲೇ ತಿಳಿದಿರಬೇಕಿತ್ತು. ಆದರೆ ಇನ್ನೂ ಬಸ್ ಅಥವಾ ರೈಲುಗಳಲ್ಲಿ ಜನ ಸಿವಿಕ್ ಸೆನ್ಸ್ ಇಲ್ಲದಂತೆ ಬಿಹೇವ್ ಮಾಡುವುದನ್ನು ಕಂಡಿದ್ದೇವೆ. ಈ ಆರ್ಟಿಕಲ್ ಇಷ್ಟವಾದಲ್ಲಿ ಇದನ್ನು ನಿಮ್ಮ ಸ್ನೇಹಿತರಿಗೆ ಶೇ‌ರ್ ಮಾಡಿ. ಪ್ರತಿಯೊಬ್ಬರಲ್ಲಿಯೂ ಸಿವಿಕ್ ಸೆನ್ಸ್ ಜಾಗೃತಿ ಮೂಡಿಸುವಲ್ಲಿ ಸಹಕಾರ ನೀಡಿ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!