​ಮಧ್ಯ ಏಷ್ಯಾದತ್ತ ಪ್ರಧಾನಿ ಮೋದಿ ಪ್ರವಾಸ: SCO ಶೃಂಗಸಭೆ, ಪುಟಿನ್ ಜತೆ ಮಹತ್ವದ ಮಾತುಕತೆ!

Picture of Savistara

Savistara

Bureau Report

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಗಸ್ಟ್ 29ರಿಂದ ನಾಲ್ಕು ದಿನಗಳ ಕಾಲ ಮಧ್ಯ ಏಷ್ಯಾ ಪ್ರವಾಸವನ್ನು ಆರಂಭಿಸಿದ್ದು, ಉಜ್ಬೇಕಿಸ್ತಾನ್ ಮತ್ತು ಕಿರ್ಗಿಜ್ ಗಣರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಸುದೀರ್ಘ ಪ್ರವಾಸದ ವೇಳೆ ಅವರು ಶಾಂಫೈ ಸಹಕಾರ ಸಂಘಟನೆಯ (SCO) 26ನೇ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸೇರಿದಂತೆ ಹಲವು ಜಾಗತಿಕ ನಾಯಕರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ​ಪ್ರವಾಸದ ಮೊದಲ ಭಾಗವಾಗಿ ತಾಷ್ಕೆಂಟ್‌ಗೆ ತೆರಳಲಿರುವ ಪ್ರಧಾನಿ ಮೋದಿ, ಉಜ್ಬೇಕಿಸ್ತಾನ್ ಅಧ್ಯಕ್ಷ ಶವ್ಕತ್ ಮಿರ್ಜಿಯೋಯೆವ್ ಅವರೊಂದಿಗೆ ವ್ಯಾಪಾರ, ಇಂಧನ, ರಕ್ಷಣೆ ಮತ್ತು ಡಿಜಿಟಲ್ ಸಂಪರ್ಕ ಕ್ಷೇತ್ರಗಳ ಕುರಿತು ಚರ್ಚಿಸಲಿದ್ದಾರೆ. ತದನಂತರ ಬಿಶ್ಕೆಕ್‌ನಲ್ಲಿ ನಡೆಯಲಿರುವ SCO ಶೃಂಗಸಭೆಯಲ್ಲಿ ಭಾಗವಹಿಸಿ, ಭಯೋತ್ಪಾದನೆ ಮತ್ತು ಉಗ್ರವಾದದ ವಿರುದ್ಧ ಭಾರತದ ಖಡಕ್ ನಿಲುವನ್ನು ಪ್ರತಿಪಾದಿಸಲಿದ್ದಾರೆ. ಇದರ ಜೊತೆಗೆ ಸಾಂಪ್ರದಾಯಿಕ ಕ್ರೀಡಾಕೂಟವಾದ 6ನೇ ‘ವರ್ಲ್ಡ್ ನೋಮಾಡ್ ಗೇಮ್ಸ್’ ಉದ್ಘಾಟನಾ ಸಮಾರಂಭದಲ್ಲೂ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!