ನೇಪಾಳದಲ್ಲಿ ಮಹಾ ಪ್ರವಾಹದ ಆರ್ಭಟ! : 1,000 ಮಂದಿ ನಾಪತ್ತೆ ಶಂಕೆ

Picture of Savistara

Savistara

Bureau Report

ಕಠ್ಮಂಡು: ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ನೇಪಾಳದಲ್ಲಿ ಭೀಕರ ಪ್ರವಾಹ (Nepal Flash flood) ಸಂಭವಿಸಿದ್ದು, ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ.ನೇಪಾಳ ರಸುವಾದಲ್ಲಿ ಟಿಬೆಟ್‌ ಗಡಿಯ (Tibet Border) ಬಳಿಯಿರುವ ಇಡೀ ಗ್ರಾಮವೇ ಕೊಚ್ಚಿಹೋಗಿದ್ದು, ಅಪಾರ ಪ್ರಮಾಣದ ಜೀವಹಾನಿಯಾಗಿರುವ ಭೀತಿ ಹೆಚ್ಚಾಗಿದೆ. ಸ್ಥಳೀಯ ಕಾಲಮಾನ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು, ನದಿ ದಂಡೆಯಲ್ಲಿರುವ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಅದ್ರಲ್ಲೂ ಭೋಟೆ ಕೋಶಿ ನದಿಯ ಉದ್ದಕ್ಕೂ ವಾಸಿಸುವ ನಿವಾಸಿಗಳು ಹೆಚ್ಚಿನ ನಿಗಾ ವಹಿಸುವಂತೆ ಸಲಹೆ ನೀಡಿದ್ದಾರೆ.

1,000 ಮಂದಿ ನಾಪತ್ತೆಯಾಗಿರುವ ಶಂಕೆ

ಪ್ರಾಥಮಿಕ ಮಾಹಿತಿಯ ಪ್ರಕಾರ, ಸುಮಾರು 1,000 ಜನರು ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಆದಾಗ್ಯೂ, ಈ ಅಂಕಿ ಅಂಶವನ್ನು ಇನ್ನೂ ಅಧಿಕೃತವಾಗಿಲ್ಲ. ರಕ್ಷಣಾ ತಂಡಗಳು ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ಕಾರ್ಯಾಚರಣೆ ನಡೆಸುತ್ತಿವೆ. ಹೀಗಾಗಿ ಸಾವು ನೋವುಗಳು ಇನ್ನೂ ಸ್ಪಷ್ಟವಾಗಿ ತಿಳುಬಂದಿಲ್ಲ.

ಹಠಾತ್‌ ಪ್ರವಾಹದಿಂದ ವ್ಯಾಪಕ ಹಾನಿ

ರಸುವಾ ಜಿಲ್ಲೆಯಲ್ಲಿ ಉಂಟಾದ ಹಠಾತ್‌ ಪ್ರವಾಹವು ಇಲ್ಲಿನ ಹಲವು ಪ್ರದೇಶಗಳಲ್ಲಿ ವ್ಯಾಪಕ ಹಾನಿಯನ್ನುಂಟುಮಾಡಿದೆ. ಸಯಾಪ್ರು ಬೆಸಿ ಮತ್ತು ತಿಮುರೆ ಪರ್ವತ ಪ್ರದೇಶಗಳು ತೀವ್ರವಾಗಿ ಪರಿಣಾಮ ಬೀರಿವೆ. ಇಲ್ಲಿನ ಕೆಲವು ಹಳ್ಳಿಗಳೇ ಕೊಚ್ಚಿಹೋಗಿವೆ. ಯೋಜನಾ ಸ್ಥಳಗಳೂ ಕೊಚ್ಚಿ ಹೋಗಿವೆ ಎಂದು ವರದಿಯಾಗಿದೆ.

ರಕ್ಷಣಾ ಕಾರ್ಯಾಚರಣೆ ಶುರು

ಸದ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿವೆ. ನೀರಿನ ರಭಸಕ್ಕೆ ಸಿಕ್ಕಿ ಕೊಚ್ಚಿಹೋಗಿರುವ ಜನರ ಹುಟುಕಾಡ ನಡೆಸುತ್ತಿವೆ. ಪರಿಸ್ಥಿತಿ ತೀರ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

[t4b-ticker]
error: Content is protected !!