ಮೈಸೂರು ರೈಲ್ವೆ ವಿಭಾಗಕ್ಕೆ ಮಂಗಳೂರು ಜಾಲ: ವೈಷ್ಣವ್‌ ಸಮರ್ಥನೆ

Picture of Savistara

Savistara

Bureau Report

ನವದೆಹಲಿ: ‘ಕಾರ್ಯಾಚರಣೆಯ ದಕ್ಷತೆ ಸುಧಾರಿಸುವಉದ್ದೇಶದಿಂದಲೇ ಮಂಗಳೂರು ರೈಲು ಜಾಲವನ್ನು ದಕ್ಷಿಣ ರೈಲ್ವೆ ವಲಯದ ಪಾಲಕ್ಕಾಡ್ ವಿಭಾಗದಿಂದ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ವರ್ಗಾಯಿಸಲಾಗಿದೆ’ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ಸಮರ್ಥಿಸಿಕೊಂಡರು.

ಅಕ್ಟೋಬರ್ 1ರಿಂದ ಮಂಗಳೂರು ರೈಲು ಜಾಲವು ಮೈಸೂರು ವಿಭಾಗಕ್ಕೆ ವರ್ಗಾವಣೆ ಆಗಲಿದೆ. ಈ ನಿರ್ಧಾರದ ವಿರುದ್ಧ ಕೇರಳಂನಲ್ಲಿ ಪ್ರತಿಭಟನೆ ನಡೆದಿದೆ. ಈ ವಿಷಯವನ್ನು ಮರುಪರಿಶೀಲಿಸುವಂತೆ ಕೋರಿ ಕೇರಳಂನ ಸಂಸದರ ತಂಡವೊಂದು ಸಚಿವರನ್ನು ಇಲ್ಲಿ ಭೇಟಿಯಾಯಿತು.’ಮಂಗಳೂರು ಪ್ರದೇಶಕ್ಕೆ ಪ್ರಸ್ತುತ ದಕ್ಷಿಣ ರೈಲ್ವೆ, ನೈರುತ್ಯ ರೈಲ್ವೆ ಮತ್ತು ಕೊಂಕಣ ರೈಲ್ವೆ ಕಾರ್ಪೊರೇಷನ್‌ ಲಿಮಿಟೆಡ್ ಎಂಬ ಮೂರು ಸಂಸ್ಥೆಗಳು ಸೇವೆ ಒದಗಿಸುತ್ತಿವೆ. ಗೋವಾ ಅಥವಾ ಹಾಸನ ಕಡೆಯಿಂದ ಬರುವ ರೈಲುಗಳು ನಿಲ್ದಾಣ ತಲುಪುವ ಮೊದಲು ಅನೇಕ ಕಾರ್ಯಾಚರಣಾ ಗಡಿಗಳು ಮತ್ತು ಇಂಟರ್‌ಚೇಂಜ್ ಪಾಯಿಂಟ್‌ಗಳನ್ನು ದಾಟಬೇಕಾಗುತ್ತದೆ. ಇದರಿಂದ ಅನಗತ್ಯ ವಿಳಂಬ ಮತ್ತು ದಟ್ಟಣೆ ಉಂಟಾಗುತ್ತದೆ’ ಎಂದು ವೈಷ್ಣವ್ ಅವರು ಸಂಸದರ ನಿಯೋಗಕ್ಕೆ ತಿಳಿಸಿದರು.’ಇಂಟರ್‌ಚೇಂಜ್ ಪ್ರಕ್ರಿಯೆಯಿಂದ ಉಂಟಾಗುವ ತೊಡಕುಗಳನ್ನು ನಿವಾರಿಸಲು ಮತ್ತು ಕಾರ್ಯಾಚರಣೆ ಸುಗಮಗೊಳಿಸಲು ಇಡೀ ಮಂಗಳೂರು ಪ್ರದೇಶವನ್ನು ಒಂದೇ ವಲಯದ ಅಡಿಯಲ್ಲಿ (ಅಂದರೆ, ನೈರುತ್ಯ ರೈಲ್ವೆ ವ್ಯಾಪ್ತಿಗೆ ತರುವ ಮೂಲಕ ಈ ವ್ಯವಸ್ಥೆಯನ್ನು ತರ್ಕಬದ್ಧಗೊಳಿಸಲಾಗುತ್ತಿದೆ’ ಎಂದು ಅವರು ಸ್ಪಷ್ಟಪಡಿಸಿದರು.

ಕಾರ್ಯಾಚರಣೆಯ ಅಡಚಣೆಗಳನ್ನು ಕಡಿಮೆ ಮಾಡಲು ರೈಲ್ವೆ ಜಾಲದಾದ್ಯಂತ ಕಾಲಕಾಲಕ್ಕೆ ಕೈಗೊಳ್ಳಲಾಗುವ ಸಾಮಾನ್ಯ ಗಡಿ ಮರುಹೊಂದಾಣಿಕೆ ಪ್ರಕ್ರಿಯೆಯ ಭಾಗವಾಗಿಯೇ ಈ ಬದಲಾವಣೆ ಮಾಡಲಾಗುತ್ತಿದೆ ಎಂದು ವಿವರಿಸಿದರು.

[t4b-ticker]
error: Content is protected !!