ಸುಳ್ಯ :ಸೇವಾ ಭಾರತಿ ವತಿಯಿಂದ ಅರಂತೋಡಿನಲ್ಲಿ ಬಾಲಗೋಕುಲ ಪ್ರಶಿಕ್ಷಣ ವರ್ಗ

Picture of Savistara

Savistara

Bureau Report

ಸುಳ್ಯ: ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ (ರಿ) ಸುಳ್ಯ ಮತ್ತು ನಿವೇದಿತಾ ಮಹಿಳಾ ಜಾಗೃತಿ ಸೇವಾ ಟ್ರಸ್ಟ್ (ರಿ) ಸುಳ್ಯ ಇದರ ಆಶ್ರಯದಲ್ಲಿ ಬಾಲಗೋಕುಲ ಪ್ರಶಿಕ್ಷಣ ವರ್ಗವು ಅರಂತೋಡು ಗ್ರಾಮದ ‘ಸಿರಿ ಸೌಧ’ ಸಭಾಂಗಣದಲ್ಲಿ ದಿನಾಂಕ 20/09/2026 ರಂದು ನಡೆಯಿತು.ದಕ್ಷಿಣ ಪ್ರಾಂತ ಬಾಲಗೋಕುಲ ಸಂಯೋಜಕ್ ಶ್ರೀ ಉಮೇಶ್ ಜಿ. ಇವರು ವರ್ಗವನ್ನು ನಡೆಸಿಕೊಟ್ಟರು. ಶ್ರೀಮತಿ ವೇದಾವತಿ ರೈ ಅರಂತೋಡು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಟ್ರಸ್ಟ್ ಅಧ್ಯಕ್ಷೆ ಪುಷ್ಪಾ ಮೇದಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು.

ಗೋಪಾಲ ಜಿ, ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ ಮತ್ತು ದಮಯಂತಿ ಅಡ್ಕಬಲೆ ಇವರು ವರ್ಗ ನಿರ್ವಹಣೆ ಮಾಡಿದರು. ನಿವೃತ್ತ ಶಿಕ್ಷಕರಾದ ತೀರ್ಥರಾಮ ಅಡ್ಕಬಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.ತಾಲೂಕಿನ ಬಾಲಗೋಕುಲ ನಡೆಸುವವರು, ಮಾತಾಜಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಟ್ರಸ್ಟ್‌ನ ವಿವಿಧ ಸಮಿತಿಗಳ ಸದಸ್ಯರು ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.ಬಾಲಗೋಕುಲ ಪುತ್ತೂರು ಜಿಲ್ಲಾ ಸಂಯೋಜಕ್ ಶ್ರೀ ಬುಕ್ಷಿತ್ ಐನೆಕಿದು ಕಾರ್ಯಕ್ರಮ ನಿರೂಪಿಸಿದರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಯಿತು.

[t4b-ticker]
error: Content is protected !!