ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ 8 ಜಿಲ್ಲೆಗಳ ವಿವಿಧ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಭರ್ಜರಿ ದಾಳಿ ನಡೆಸಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕಲಬುರಗಿ, ಬೆಂಗಳೂರು ದಕ್ಷಿಣ, ಮಂಡ್ಯ, ಕೊಡಗು, ಧಾರವಾಡ ಹಾಗೂ ಬೀದರ್ ಜಿಲ್ಲೆಗಳ ಒಟ್ಟು 33ಕ್ಕೂ ಹೆಚ್ಚು ಸ್ಥಳಗಳಲ್ಲಿ ಈ ಶೋಧ ಕಾರ್ಯಾಚರಣೆ ನಡೆದಿದೆ.ದಾಳಿಗೊಳಗಾದ ಅಧಿಕಾರಿಗಳಲ್ಲಿ ಬಸವನಗುಡಿಯ ಜಿಲ್ಲಾ ನೋಂದಣಾಧಿಕಾರಿ ಶ್ರೀದೇವಿ ಅವರ ಬಳಿ ಅತಿ ಹೆಚ್ಚು, ಅಂದರೆ ಸುಮಾರು ₹6.80 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 2 ನಿವೇಶನಗಳು, 2 ಮನೆಗಳು, ಗಾರ್ಮೆಂಟ್ ಫ್ಯಾಕ್ಟರಿ, ಕೃಷಿ ಭೂಮಿ ಹಾಗೂ ₹30.87 ಲಕ್ಷ ನಗದು ಸೇರಿದಂತೆ ಭಾರಿ ಪ್ರಮಾಣದ ಆಭರಣಗಳು ಸೇರಿವೆ.ಇನ್ನುಳಿದಂತೆ ಮಂಡ್ಯದ ಬಿಸಿಎಂ ಹಾಸ್ಟೆಲ್ ಸೂಪರಿಂಟೆಂಡೆಂಟ್ ಎಂ. ಶಿವರಾಜು ಬಳಿ ₹2.71 ಕೋಟಿ, ಬೆಂಗಳೂರಿನ ನಿವೃತ್ತ ಜಿಬಿಎ ಸಹಾಯಕ ಎಂಜಿನಿಯರ್ ಎಚ್.ಎಂ. ರಂಗನಾಥ್ ಬಳಿ ₹3.84 ಕೋಟಿ, ಕಲಬುರಗಿ ಜೆಸ್ಕಾಂ ಎಇಇ ರಾಜೇಶ್ವರಿ ಬಳಿ ₹1.91 ಕೋಟಿ, ಕೊಡಗು ಪುರಸಭೆ ಆಯುಕ್ತ ಎಚ್.ಆರ್. ರಮೇಶ್ ಬಳಿ ₹1.78 ಕೋಟಿ, ಧಾರವಾಡ ಹೆಸ್ಕಾಂ ಎಇಇ ಕಿರಣ್ ಬೈಂದೂರ್ ಬಳಿ ₹1.79 ಕೋಟಿ, ಚಿಕ್ಕಬಳ್ಳಾಪುರ ಡಿಸಿ ಕಚೇರಿ ಎಫ್‌ಡಿಎ ದರ್ಶನ್ ಗೌಡ ಜಿ. ಬಳಿ ₹1.86 ಕೋಟಿ ಹಾಗೂ ಬೀದರ್‌ನ ನಿವೃತ್ತ ಕೃಷಿ ಅಧಿಕಾರಿ ಮಾಣಿಕ್ ರಾವ್ ಬಳಿ ₹2.51 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.ಅಕ್ರಮ ಆಸ್ತಿ ಗಳಿಕೆ ಪ್ರಕರಣಗಳ ಅಡಿಯಲ್ಲಿ ದಾಖಲಾಗಿದ್ದ ದೂರುಗಳ ಆಧಾರದ ಮೇಲೆ ಈ ದಾಳಿ ನಡೆದಿದ್ದು, ಪತ್ತೆಯಾದ ದಾಖಲೆಗಳು ಹಾಗೂ ನಗದಿನ ಕುರಿತು ಲೋಕಾಯುಕ್ತ ಅಧಿಕಾರಿಗಳ ತನಿಖೆ ಮುಂದುವರಿದಿದೆ.
ಕೋಟಿ ಕೋಟಿ ಕೊಳ್ಳೆ ಹೊಡೆದ ಸರ್ಕಾರಿ ಅಧಿಕಾರಿಗಳು: 8 ಜಿಲ್ಲೆಗಳಲ್ಲಿ ಲೋಕಾಯುಕ್ತ ಬಿಗ್ ಶಾಕ್!
Savistara
Bureau Report
[t4b-ticker]
















































