ಕರ್ನಾಟಕ ಬ್ಯಾಂಕ್‌ನ ನಾನ್-ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್ ಡೈರೆಕ್ಟರ್ ಆಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಡಾ.ಅರುಣ್ ಶ್ಯಾಮ್ ಅವರು ನೇಮಕಗೊಂಡಿದ್ದಾರೆ.
ಜುಲೈ 18, 2026 ರಿಂದ 4 ವರ್ಷಗಳ ಅವಧಿಗೆ ಅವರನ್ನು ನೇಮಕ ಮಾಡಲಾಗಿದ್ದು, ಸೆ.22 ರಂದು ನಡೆದ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ (AGM) ಷೇರುದಾರರು ಅವರ ನೇಮಕಾತಿಗೆ ಭರ್ಜರಿ ಬೆಂಬಲ ಸೂಚಿಸಿದ್ದಾರೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾನೂನು ತಜ್ಞರಾಗಿ ಅಪಾರ ಅನುಭವ ಹೊಂದಿರುವ ಡಾ.ಅರುಣ್ ಶ್ಯಾಮ್ ಅವರ ನೇಮಕದಿಂದ ಬ್ಯಾಂಕ್‌ನ ಆಡಳಿತ ಮಂಡಳಿಗೆ ಮತ್ತಷ್ಟು ಬಲ ಬಂದಿದೆ.
















































