ಒಂದೇ ವರ್ಕ್ ಕೋಡ್‌ಗೆ ಎರಡು ಬೋರ್ಡ್: ಇಡ್ಕಿದು ರಸ್ತೆ ಕಾಮಗಾರಿ ಬಗ್ಗೆ ಬಿಜೆಪಿ ಅನುಮಾನ

Picture of Savistara

Savistara

Bureau Report

ಪುತ್ತೂರು, ನ.18: ಇಡ್ಕಿದು ಗ್ರಾಮದ ಮಿತ್ತೂರು – ಕೋಲ್ಪೆ – ಸೂರ್ಯ ಗ್ರಾಮದ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಒಂದೇ ವರ್ಕ್ ಕೋಡ್‌ನಲ್ಲಿ ಎರಡು ವಿಭಿನ್ನ ಮಾಹಿತಿಯುಳ್ಳ ಫಲಕಗಳು ಪತ್ತೆಯಾಗಿದ್ದು, ಕಾಮಗಾರಿಯ ಪಾರದರ್ಶಕತೆ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನ ಮೂಡಿಸಿದೆ.

Advertisement

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು ವತಿಯಿಂದ ಅನುಷ್ಠಾನಗೊಂಡಿರುವ ಈ ಕಾಮಗಾರಿ 2021-22ನೇ ಸಾಲಿನ 5054 ಹೆಡ್, ಮಳೆ ಹಾನಿ ಪರಿಹಾರ ಕಾರ್ಯಕ್ರಮದಡಿ ನಡೆದಿದೆ.

Advertisement

Advertisement

ಅನುಷ್ಠಾನ ಸಂಸ್ಥೆ ಕೆ.ಆರ್.ಐ.ಡಿ.ಎಲ್, ಮಂಗಳೂರು.ಸ್ಥಳದಲ್ಲಿ ಅಳವಡಿಸಲಾಗಿರುವ ಮೊದಲ ಫಲಕದಲ್ಲಿ, “ಬಂಟ್ವಾಳ ತಾಲೂಕು ಮಿತ್ತೂರು – ಸೂರ್ಯ ರಸ್ತೆ ಸಂರಕ್ಷಣೆ, ಅಂದಾಜು ಮೊತ್ತ ರೂ. 20.00 ಲಕ್ಷ, ಪ್ರಸ್ತಾವನೆ: ಶ್ರೀ ಸಂಜೀವ ಮಟ್ಟಂದೂರು, ಪುತ್ತೂರು ವಿಧಾನಸಭಾ ಕ್ಷೇತ್ರ” ಎಂದು ನಮೂದಿಸಲಾಗಿದೆ.

Advertisement

Advertisement

ಅದೇ ರಸ್ತೆಯಲ್ಲಿ ಅಳವಡಿಸಲಾಗಿರುವ ಎರಡನೇ ಫಲಕದಲ್ಲಿ, “ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮ ಮಿತ್ತೂರು ಕೋಲ್ಪೆ – ಸೂರ್ಯ ರಸ್ತೆ ಅಭಿವೃದ್ಧಿ, ಅಂದಾಜು ಮೊತ್ತ ರೂ. 50.00 ಲಕ್ಷ, ಪ್ರಸ್ತಾವನೆ: ಶ್ರೀ ಅಶೋಕ್ ಕುಮಾರ್ ರೈ, ಪುತ್ತೂರು ವಿಧಾನಸಭಾ ಕ್ಷೇತ್ರ” ಎಂದು ನಮೂದಿಸಲಾಗಿದೆ.2021-22ನೇ ಸಾಲಿನಲ್ಲಿ ಪುತ್ತೂರು ಕ್ಷೇತ್ರದ ಶಾಸಕರಾಗಿದ್ದವರು ಸಂಜೀವ ಮಠಂದೂರು ಅವರು.

Advertisement

Advertisement

ಹೀಗಿದ್ದರೂ ಅದೇ ವರ್ಕ್ ಕೋಡ್‌ನ ಕಾಮಗಾರಿಗೆ ಪ್ರಸ್ತುತ ಶಾಸಕರ ಹೆಸರು ನಮೂದಾಗಿರುವುದು ಹಾಗೂ ಅಂದಾಜು ಮೊತ್ತದಲ್ಲಿ ರೂ. 30 ಲಕ್ಷ ವ್ಯತ್ಯಾಸ ಕಂಡುಬಂದಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಒಂದೇ ಕಾಮಗಾರಿಗೆ ಎರಡು ಬಾರಿ ಅನುದಾನ ಬಿಡುಗಡೆಯಾಗಿದೆಯೋ ಎಂಬ ಬಗ್ಗೆ ಸಂಬಂಧಪಟ್ಟ ಇಲಾಖೆ ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

[t4b-ticker]
error: Content is protected !!