ಪ್ರಧಾನಿ ಮೋದಿಗೆ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ನೇಮಕ

Picture of Savistara

Savistara

Bureau Report

ನವದೆಹಲಿ: ಆರ್‌ಬಿಐ ಮಾಜಿ ಗವರ್ನರ್ ಶಕ್ತಿಕಾಂತದಾಸ್‌ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ ಎಂದು ಕೇಂದ್ರ ಸರ್ಕಾರದ ಅಧಿಸೂಚನೆಯ ಪ್ರಕಾರ ತಿಳಿದು ಬಂದಿದೆ.ಶಕ್ತಿಕಾಂತ ದಾಸ್‌ ಅವರ ಆಯ್ಕೆಯನ್ನು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅನುಮೋದಿಸಿದೆ, ಈ ಕುರಿತು ಆದೇಶವನ್ನು ಸಿಬಂದಿ ತರಬೇತಿ ಇಲಾಖೆ (DoPT) ಹೊರಡಿಸಿದೆ.

ಶಕ್ತಿಕಾಂತ ದಾಸ್ ಅವರು ಪ್ರಧಾನಿಯವರ 2 ನೇ ಪ್ರಧಾನ ಕಾರ್ಯದರ್ಶಿಆಗಲಿದ್ದಾರೆ. ಪಿಕೆ ಮಿಶ್ರಾ ಅವರು 2019, ಸೆಪ್ಟೆಂಬರ್ 11 ರಿಂದ ಪ್ರಧಾನಿಯವರ ಪ್ರಧಾನ ಕಾರ್ಯದರ್ಶಿಯಾಗಿದ್ದರು.

[t4b-ticker]
error: Content is protected !!