ರಾಷ್ಟ್ರಪತಿ ದೌಪದಿ ಮುರ್ಮು ಆಂಧ್ರ ಪ್ರವಾಸ: ಕನಕದುರ್ಗಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

Picture of Savistara

Savistara

Bureau Report

ರಾಷ್ಟ್ರಪತಿ ದೌಪದಿ ಮುರ್ಮು ಅವರು ಬುಧವಾರದಿಂದ ತಮ್ಮ ಆಂಧ್ರಪ್ರದೇಶದ ಅಧಿಕೃತ ಪ್ರವಾಸವನ್ನು ಆರಂಭಿಸಿದ್ದಾರೆ. ಆಂಧ್ರಪ್ರದೇಶಕ್ಕೆ ಆಗಮಿಸಿದ ರಾಷ್ಟ್ರಪತಿಗಳು ತಮ್ಮ ಪ್ರವಾಸದ ಮೊದಲ ಭಾಗವಾಗಿ ವಿಜಯವಾಡದ ಕೃಷ್ಣಾನದಿ ತೀರದ ಇಂದ್ರಕೀಲಾದ್ರಿ ಬೆಟ್ಟದ ಮೇಲೆ ನೆಲೆಸಿರುವ ಜಗತ್ಪಸಿದ್ಧಶ್ರೀ ಕನಕದುರ್ಗಮ್ಮದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ರಾಷ್ಟ್ರಪತಿಗಳಿಗೆ ಪೂರ್ಣಕುಂಭಸ್ವಾಗತ

Advertisement

ವಿಜಯವಾಡದ ಕನಕದುರ್ಗಮ್ಮ ದೇವಸ್ಥಾನಕ್ಕೆ ಆಗಮಿಸಿದ ರಾಷ್ಟ್ರಪತಿ ದೌಪದಿ ಮುರ್ಮು ಅವರಿಗೆ ಆಂಧ್ರಪ್ರದೇಶದ ಉನ್ನತ ಅಧಿಕಾರಿಗಳು, ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಪೂರ್ಣಕುಂಭಸ್ವಾಗತ ಕೋರಿದರು. ವೇದಘೋಷಗಳೊಂದಿಗೆ ರಾಷ್ಟ್ರಪತಿಗಳನ್ನು ಗರ್ಭಗುಡಿಯೊಳಗೆ ಬರಮಾಡಿಕೊಳ್ಳಲಾಯಿತು. ಮುಖ್ಯ ಅರ್ಚಕರ ನೇತೃತ್ವದಲ್ಲಿ ದೌಪದಿ ಮುರ್ಮು ಅವರಿಗೆ ವಿಶೇಷ ಅರ್ಚನೆ ಮತ್ತು ದರ್ಶನ ಭಾಗ್ಯವನ್ನು ಕಲ್ಪಿಸಲಾಯಿತು.

Advertisement

ಅಮ್ಮನವರ ಶೇಷವಸ್ತ್ರ, ಪ್ರಸಾದ ನೀಡಿ ಗೌರವ

Advertisement

ದರ್ಶನದ ಬಳಿಕ ದೇವಸ್ಥಾನದ ಮಂಟಪದಲ್ಲಿ ರಾಷ್ಟ್ರಪತಿಗಳಿಗೆ ವೈದಿಕ ಆಶೀರ್ವಚನ ನೀಡಲಾಯಿತು. ದೇವಸ್ಥಾನದ ಆಡಳಿತಾಧಿಕಾರಿಗಳು ಅಮ್ಮನವರ ಪವಿತ್ರ ಶೇಷವಸ್ತ್ರ, ತೀರ್ಥಪ್ರಸಾದ ಹಾಗೂ ಕನಕದುರ್ಗಮ್ಮನವರ ಸ್ಮರಣಿಕೆಯನ್ನು ನೀಡಿ ಗೌರವಿಸಿದರು. ರಾಷ್ಟ್ರಪತಿಗಳ ಆಗಮನದ ಹಿನ್ನೆಲೆಯಲ್ಲಿ ಇಂದ್ರಕೀಲಾದ್ರಿ ಬೆಟ್ಟ ಹಾಗೂ ದೇವಸ್ಥಾನದ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿತ್ತು ಮತ್ತು ಸಾರ್ವಜನಿಕ ದರ್ಶನದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿತ್ತು. ಈ ಭೇಟಿಯೊಂದಿಗೆ ಅವರ ಆಂಧ್ರಪ್ರದೇಶದ ಪ್ರವಾಸಕ್ಕೆ ಯಶಸ್ವಿ ಮುನ್ನುಡಿ ಸಿಕ್ಕಂತಾಗಿದೆ.

Advertisement
News Updates

ಐವರ್ನಾಡು – ನನ್ಯಡ್ಕ ಎಸ್.ಸಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ಅನುದಾನ ಮಂಜೂರಾತಿಗೆ ಮನವಿ: ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಬಿಜೆಪಿ ಶಕ್ತಿ ಕೇಂದ್ರದಿಂದ ಒತ್ತಾಯ | ಸರ್ವೆ ಕಾರ್ಯ ಪೂರ್ಣ, ಶೀಘ್ರ ಅನುದಾನ ಬಿಡುಗಡೆಗೊಳಿಸುವಂತೆ ಕೋರಿಕೆ

[t4b-ticker]
error: Content is protected !!