ಬೆಂಗಳೂರು-ಮಂಗಳೂರು ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ; ಶೀಘ್ರದಲ್ಲೇ ವಿದ್ಯುತ್‌ ಎಂಜಿನ್‌ಗಳ ಓಡಾಟಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದಲ್ಲಿ ವಿದ್ಯುತ್ ರೈಲು ಸಂಚಾರಕ್ಕೆ ಸಿದ್ಧತೆ

Picture of Savistara

Savistara

Bureau Report

ಪುತ್ತೂರು : ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆಯಾಗುವ ಸಾಧ್ಯತೆಯಿದ್ದು, ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ 55 ಕಿ.ಮೀ. ಉದ್ದದ ಘಾಟ್ ವಿಭಾಗದಲ್ಲಿ ಶೀಘ್ರದಲ್ಲೇ ಸಂಪೂರ್ಣ ವಿದ್ಯುತ್ ಚಾಲಿತ ರೈಲು ಸಂಚಾರ ಆರಂಭಿಸಲು ನೈಋತ್ಯ ರೈಲ್ವೆ ಸಿದ್ಧತೆ ನಡೆಸುತ್ತಿದೆ.ಈ ಮಾರ್ಗದ ವಿದ್ಯುದ್ದೀಕರಣ ಕಾರ್ಯ ಪೂರ್ಣಗೊಂಡು ಸುಮಾರು ಒಂದು ವರ್ಷ ಕಳೆದಿದೆ. ಸದ್ಯ ಸಕಲೇಶಪುರದಲ್ಲಿ ಟ್ರ್ಯಾಕ್ಷನ್‌ ಸಬ್‌ಸ್ಟೇಷನ್‌ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ವಿದ್ಯುತ್ ಎಂಜಿನ್‌ಗಳ ಪ್ರಾಯೋಗಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.ವಂದೇ ಭಾರತ್ ರೈಲುಗಳ ಸಂಚಾರಕ್ಕೆ ಸಂಬಂಧಿಸಿದ ಪರೀಕ್ಷೆಗಳು ಕಳೆದ ತಿಂಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಈ ಮಾರ್ಗದಲ್ಲಿ ವಿದ್ಯುತ್ ರೈಲುಗಳ ಕಾರ್ಯಾಚರಣೆಗೆ ಅಗತ್ಯ ಸಿದ್ಧತೆಗಳು ಮುಂದುವರಿದಿವೆ.ಏಳು ಪ್ರಮುಖ ರೈಲುಗಳಿಗೆ ವಿದ್ಯುತ್ ಎಂಜಿನ್ನಾಟ್ ವಿಭಾಗದಲ್ಲಿ ಸಂಚರಿಸುವ ಏಳು ಪ್ರಮುಖ ರೈಲುಗಳನ್ನು ಸಂಪೂರ್ಣ ವಿದ್ಯುತ್ ಚಾಲನೆಗೆ ಬದಲಾಯಿಸಲು ನೈಋತ್ಯ ರೈಲ್ವೆ ಯೋಜಿಸಿದೆ.

ಅವುಗಳೆಂದರೆ:ಎಸ್‌ಎಂವಿಟಿ ಬೆಂಗಳೂರು-ಮುರುಡೇಶ್ವರ ಎಕ್ಸ್‌ಪ್ರೆಸ್ಕೋಝಿಕ್ಕೋಡ್ ಎಕ್ಸ್‌ಪ್ರೆಸ್ಯಶವಂತಪುರ-ಕಾರವಾರ ಎಕ್ಸ್‌ಪ್ರೆಸ್ಯಶವಂತಪುರ-ಮಂಗಳೂರು ಜಂಕ್ಷನ್ ವಾರಸುತಿರಿ ಎಕ್ಸ್‌ಪ್ರೆಸ್ಕೊಮ್ಮಟೇಶ್ವರ ಎಕ್ಸ್‌ಪ್ರೆಸ್ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್‌ಪ್ರೆಸ್ಕೆಎಸ್‌ಆ‌ರ್ ಬೆಂಗಳೂರು-ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್‌ಈ ರೈಲುಗಳ ಪೈಕಿ ಕೆಲವು ಸಂಪೂರ್ಣವಾಗಿ ಡೀಸೆಲ್ ಎಂಜಿನ್‌ಗಳನ್ನು ಅವಲಂಬಿಸಿದ್ದರೆ, ಇನ್ನು ಕೆಲವು ಘಾಟ್ ವಿಭಾಗದಲ್ಲಿ ಡೀಸೆಲ್ ಎಂಜಿನ್‌ಗಳ ನೆರವಿನಿಂದ ಸಂಚರಿಸುತ್ತಿವೆ. ವಿದ್ಯುತ್‌ ಚಾಲನೆ ಆರಂಭವಾದ ಬಳಿಕ ಈ ರೈಲುಗಳು ಘಾಟ್ ವಿಭಾಗದಲ್ಲಿಯೂ ವಿದ್ಯುತ್ ಎಂಜಿನ್‌ಗಳ ಮೂಲಕ ಸಂಚರಿಸಲಿವೆ. ಇಂಧನ ಉಳಿತಾಯ, ಮಾಲಿನ್ಯ ಕಡಿತದ ನಿರೀಕ್ಷೆಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ನಡುವಿನ ಘಾಟ್ ಮಾರ್ಗವು ಕಡಿದಾದ ಏರುಪೇರುಗಳು, ಸುರಂಗಗಳು ಮತ್ತು ಸೇತುವೆಗಳನ್ನು ಹೊಂದಿದ್ದು, ರೈಲು ಸಂಚಾರಕ್ಕೆ ಸವಾಲಿನ ಪ್ರದೇಶವಾಗಿದೆ. ಈ ಹಿಂದೆ ಇಂತಹ ಕಠಿಣ ಹಾದಿಯನ್ನು ದಾಟಲು ಡೀಸೆಲ್ ಎಂಜಿನ್‌ಗಳ ನೆರವು ಅಗತ್ಯವಾಗಿತ್ತು.ಸಬ್‌ಸ್ಟೇಷನ್‌ ಕಾಮಗಾರಿ ಪೂರ್ಣಗೊಂಡು ಪ್ರಾಯೋಗಿಕ ಸಂಚಾರ ಯಶಸ್ವಿಯಾದರೆ, ಈ ಮಾರ್ಗದಲ್ಲಿ ಸಂಪೂರ್ಣ ವಿದ್ಯುತ್ ಚಾಲಿತ ರೈಲು ಕಾರ್ಯಾಚರಣೆಗೆ ದಾರಿ ಸುಗಮವಾಗಲಿದೆ. ಇದರಿಂದ ಇಂಧನ ಉಳಿತಾಯವಾಗುವುದರ ಜೊತೆಗೆ ರೈಲು ಸಂಚಾರದ ದಕ್ಷತೆ ಹೆಚ್ಚಿ, ಪರಿಸರ ಮಾಲಿನ್ಯವೂ ಕಡಿಮೆಯಾಗುವ ನಿರೀಕ್ಷೆಯಿದೆ.

News Updates

ಎಸ್‌ಐಆ‌ರ್ ವಿಚಾರದಲ್ಲಿ ಬಿಜೆಪಿ ಕಾರ್ಯಕರ್ತರ ಬೆದರಿಸಿದರೆ ಸುಮ್ಮನಿರಲ್ಲ: ಪೊಲೀಸರಿಗೆ ಸಂಸದ ಕ್ಯಾ. ಚೌಟ ಎಚ್ಚರಿಕೆ – ಕಾಂಗ್ರೆಸ್ ತನ್ನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲಿ ಅಕ್ರಮವಾಗಿ ಮತ ರದ್ದು -ಮಾಡಲಾದ ವ್ಯಕ್ತಿಯನ್ನು ತಂದು ಚುನಾವಣಾಧಿಕಾರಿ ಮುಂದೆ ನಿಲ್ಲಿಸಲಿ: ಸಂಸದ ಸವಾಲು

[t4b-ticker]
error: Content is protected !!