ಸುಳ್ಯ: ಸೇವಾ ಸಂಕಲ್ಪ ಕಾರ್ಯಕ್ರಮದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ವತಿಯಿಂದ ಆಯೋಜಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಗಾಥೆ ಆಧಾರಿತ ಬೀದಿ ನಾಟಕ ಕಡಬ ತಾಲೂಕಿನಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿದೆ.

ಕಡಬ ತಾಲೂಕಿನ 4 ಮಹಾಶಕ್ತಿ ಕೇಂದ್ರಗಳ ವ್ಯಾಪ್ತಿಯ 21 ಶಕ್ತಿ ಕೇಂದ್ರಗಳಲ್ಲಿ ಒಟ್ಟು 21 ಪ್ರದರ್ಶನಗಳು ನಡೆದಿದ್ದು, 2 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಅವರು ಬೀದಿ ನಾಟಕಕ್ಕೆ ಚಾಲನೆ ನೀಡಿ, ಸುಳ್ಯ ಮಂಡಲ ಕಾರ್ಯಕರ್ತರ ಈ ನವೀನ ಪ್ರಯತ್ನವನ್ನು ಶ್ಲಾಘಿಸಿದರು.

ಸುಳ್ಯ ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿತ್ತು. ಕುಸುಮಧಾರ ಎ.ಟಿ. ಅವರು ನಾಟಕವನ್ನು ರಚಿಸಿ ನಿರ್ದೇಶನ ಮಾಡಿದ್ದು, ರಾಜ್ ಮುಖೇಶ್ ಸುಳ್ಯ ರಂಗ ಸಂಯೋಜನೆ ಮಾಡಿದ್ದಾರೆ. ಪ್ರದೀಪ್ ರೈ ಮನವಳಿಕೆ ಅವರು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಕುಸುಮಧಾರ ಎ.ಟಿ, ರಾಜ್ ಮುಖೇಶ್, ಪುಷ್ಪರಾಜ್ ಏನೇಕಲ್ಲು, ಕೇಶವ ಮಾಸ್ಟರ್, ನಾರಾಯಣ ಎಸ್.ಎಂ, ಚಿದಾನಂದ ವಿದ್ಯಾನಗರ, ದುಷ್ಯಂತ್ ಕಂಜಿಪಿಲಿ, ಚಿನ್ಮಯ್ ಅವರು ಪಾತ್ರ ನಿರ್ವಹಿಸಿದ್ದಾರೆ.ಈ ಸಂದರ್ಭದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಎಸ್.ಅಂಗಾರ, ಪ್ರಮುಖರಾದ ಪ್ರದೀಪ್ ರೈ ಮನವಳಿಕೆ, ಹರೀಶ್ ಕಂಜಿಪಿಲಿ, ಕೃಷ್ಣ ಶೆಟ್ಟಿ ಕಡಬ, ರಾಕೇಶ್ ರೈ ಕಡಬ, ಪುಷ್ಪಾ ಮೇದಪ್ಪ, ವಿನಯ್ ಕಂದಡ್ಕ, ಸುಬೋಧ್ ಶೆಟ್ಟಿ ಮೇನಾಲ ಮತ್ತಿತರರು ಉಪಸ್ಥಿತರಿದ್ದರು.–










































