ಕದನ ವಿರಾಮದ ಮೊದಲ ಹಂತ ಮುಕ್ತಾಯ: 1,778 ಬಂಧಿತ ಪ್ಯಾಲೆಸ್ತೇನಿಗಳ ಬಿಡುಗಡೆ: 59 ಒತ್ತೆಯಾಳುಗಳ ಭವಿಷ್ಯ ಇನ್ಮೇಲೆ ನಿರ್ಧಾರ

Picture of Savistara

Savistara

Bureau Report

ಇಸ್ರೇಲ್​​ 1,778 ಬಂಧಿತ ಪ್ಯಾಲೆಸ್ತೀನ್​ ಭಯೋತ್ಪಾದಕರನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪ್ಯಾಲೆಸ್ತೀನ್​ ​ ಮತ್ತು ಇಸ್ರೇಲ್​ ನಡುವಣ ಕದನ ವಿರಾಮದ ಮೊದಲ ಹಂತ ಮುಗಿದಿದೆ.

ಟೆಲ್ ಅವಿವ್ ,ಇಸ್ರೇಲ್: ಕದನ ವಿರಾಮ ಒಪ್ಪಂದದ ಭಾಗವಾಗಿ ಇಸ್ರೇಲ್ ಅಧಿಕಾರಿಗಳು ಬುಧವಾರ 643 ಬಂಧಿತ ಪ್ಯಾಲೆಸ್ತೀನ್ ಭಯೋತ್ಪಾದಕರನ್ನು ಬಿಡುಗಡೆ ಮಾಡಿದ್ದಾರೆ ಎಂದು ಇಸ್ರೇಲ್​​ ನ ಜೈಲು ಸೇವಾ ವಿಭಾಗ ಗುರುವಾರ ದೃಢಪಡಿಸಿದೆ.ಜನವರಿ 19 ರಿಂದ ಪ್ಯಾಲಿಸ್ತೀನ್​ ​ಒಟ್ಟು 33 ಇಸ್ರೇಲ್​​ನ ಒತ್ತೆಯಾಳುಗಳನ್ನು ಹಂತ ಹಂತವಾಗಿ ಬಿಡುಗಡೆ ಮಾಡಿದೆ. ಇದಕ್ಕೆ ಬದಲಾಗಿ ಇಸ್ರೇಲ್, ಇದುವರೆಗೂ ಒಟ್ಟು 1,778 ಪ್ಯಾಲೆಸ್ತೇನಿಯನ್ನರನ್ನು ಬಿಡುಗಡೆ ಮಾಡಿದೆ.ಬುಧವಾರ ರಾತ್ರಿ ಪರಸ್ವರ ಒತ್ತೆಯಾಳುಗಳ ವಿನಿಮಯದ ಮೂಲಕ ಕದನ ವಿರಾಮ ಒಪ್ಪಂದದ ಮೊದಲ ಹಂತವನ್ನು ಯಶಸ್ವಿಯಾಗಿ ಪೂರೈಸಲಾಗಿದೆ. ಉಳಿದ 59 ಒತ್ತೆಯಾಳುಗಳ ಭವಿಷ್ಯವನ್ನು ಮಾತುಕತೆಯ ಮೂಲಕ ನಿರ್ಧರಿಸಲಾಗುತ್ತದೆ.

ಅಕ್ಟೋಬರ್ 7 ರಂದು ಗಾಜಾ ಗಡಿಯ ಸಮೀಪ ಇಸ್ರೇಲ್​​ ಮೇಲೆ ಹಮಾಸ್ ದಾಳಿ ಮಾಡಿ ಕನಿಷ್ಠ 1,200 ಜನರನ್ನು ಕೊಂದು ಹಾಕಿತ್ತು. ಅಷ್ಟೇ ಅಲ್ಲ 252 ಇಸ್ರೇಲಿಗಳು ಮತ್ತು ಕೆಲ ವಿದೇಶಿಯರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿತ್ತು. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್​​ ಪ್ಯಾಲಿಸ್ತೇನ್​ ಮೇಲೆ ಯುದ್ಧ ಘೋಷಿಸಿತ್ತು.ಈ ಪರಿಣಾಮ 40 ಸಾವಿರಕ್ಕೂ ಹೆಚ್ಚು ಪ್ಯಾಲಿಸ್ತೇನಿಯರು ಸಾವನ್ನಪ್ಪಿದ್ದಾರೆ. ಅಂತಿಮವಾಗಿ ಎರಡೂ ಬಣಗಳ ನಡುವೆ ಕಳೆದ ಜನವರಿಯಲ್ಲಿ ಕದನ ವಿರಾಮ ಘೋಷಣೆ ಆಗಿತ್ತು. ಆದ ಆದ ಒಪ್ಪಂದದಂತೆ ಹಂತ ಹಂತವಾಗಿ ಇಸ್ರೇಲ್​​ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಇಸ್ರೇಲ್​ ಪ್ಯಾಲಿಸ್ತೀನ್​ ಯುದ್ಧ ಕೈದಿಗಳನ್ನು ಬಿಡುಗಡೆ ಮಾಡಿತ್ತು. ಉಳಿದ 59 ಒತ್ತೆಯಾಳುಗಳಲ್ಲಿ 32 ಮಂದಿ ಸತ್ತಿದ್ದಾರೆ ಎಂದು ನಂಬಲಾಗಿದೆ.

[t4b-ticker]
error: Content is protected !!