ರಿಕ್ಕಿ ರೈ ಶೂಟೌಟ್ ಪ್ರಕರಣ: ಬಾಡಿಗಾರ್ಡ್ ಮೋನಪ್ಪ ಅರೆಸ್ಟ್

Picture of Savistara

Savistara

Bureau Report

ರಾಮನಗರದಲ್ಲಿ ಕೆಲವು ದಿನಗಳ ಹಿಂದೆ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮೇಲೆ ಗುಂಡು ಹಾರಿಸಲಾಗಿತ್ತು. ಈ ಕೇಸಲ್ಲಿ. ಈಗ ರಿಕ್ಕಿ ರೈ ಅವರ ಬಾಡಿಗಾರ್ಡ್ ಆಗಿದ್ದ ಮೋನಪ್ಪ ವಿಠಲ ಎಂಬುವವರನ್ನು ಬಿಡದಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ರಾಮನಗರದಲ್ಲಿ ಕೆಲವು ದಿನಗಳ ಹಿಂದೆ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮೇಲೆ ಗುಂಡು ಹಾರಿಸಲಾಗಿತ್ತು. ಈ ಕೇಸಲ್ಲಿ, ಈಗ ರಿಕ್ಕಿ ರೈ ಅವರ ಬಾಡಿಗಾರ್ಡ್ ಆಗಿದ್ದ ಮೋನಪ್ಪ ವಿಠಲ ಎಂಬುವವರನ್ನು ಬಿಡದಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಅರೆಸ್ಟ್ ಮಾಡಿದ ಮೋನಪ್ಪನನ್ನು ಕೋರ್ಟಿಗೆ ಹಾಜರುಪಡಿಸಿ, 10 ದಿನಗಳ ಕಾಲ ಹೆಚ್ಚಿನ ವಿಚಾರಣೆ ಮಾಡಲು ಪೊಲೀಸರು ತಮ್ಮ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಎರಡು ದಿನಗಳ ಹಿಂದೆ ವಿಚಾರಣೆಗೆ ಕರೆದಾಗ, ಮೋನಪ್ಪ ಅವರಿಗೆ ಎದೆ ನೋವು ಬಂದಿತ್ತು. ಆಸ್ಪತ್ರೆಗೆ ಸೇರಿಸಿದ್ದರು. ಈಗ ಹುಷಾರಾದ ಮೇಲೆ ಅರೆಸ್ಟ್ ಮಾಡಲಾಗಿದೆ.

ಯಾಕೆ ಅರೆಸ್ಟ್?ಪೊಲೀಸರಿಗೆ ಮೋನಪ್ಪನ ಮೇಲೆ ಅನುಮಾನ ಬಂದಿದೆ. ಅವರ ಹತ್ತಿರ ಇದ್ದ ಗನ್ (ಬಂದೂಕು) ತೆಗೆದುಕೊಂಡಿದ್ದಾರೆ. ಆ ಗನ್‌ನಲ್ಲಿ ಇರಬೇಕಾದಷ್ಟು ಗುಂಡುಗಳು ಇರಲಿಲ್ಲ. ಅಲ್ಲದೇ ಆತನ ನಡವಳಿಕೆಯೂ ಸರಿ ಇರಲಿಲ್ಲ. ಅದಕ್ಕಾಗಿ ಅವನನ್ನು ಅರೆಸ್ಟ್ ಮಾಡಿದ್ದಾರೆ.

ರಿಕ್ಕಿ ರೈ ಜೊತೆ ಇದ್ದ ಬೇರೆ ಬಾಡಿಗಾರ್ಡ್‌ಗಳ 7 ಗನ್‌ಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಯಾವ ಗನ್‌ನಿಂದ ಗುಂಡು ಹಾರಿಸಿದ್ದು ಎಂದು ಲ್ಯಾಬ್ ರಿಪೋರ್ಟ್ ಬಂದ ಮೇಲೆ ತಿಳಿಯುತ್ತದೆ.

ಪೊಲೀಸರು ಮುತ್ತಪ್ಪ ರೈ ಅವರ ಹಳೆಯ ಸ್ನೇಹಿತ ರಾಕೇಶ್ ಮಲ್ಲಿ ಮತ್ತು ಇನ್ನೊಬ್ಬ ಆರೋಪಿ ನಿತೀಶ್ ಶೆಟ್ಟಿಯನ್ನು ವಿಚಾರಣೆ ಮಾಡಿದ್ದಾರೆ. ಇನ್ನೂ ಇಬ್ಬರು ಆರೋಪಿಗಳಾದ ಅನುರಾಧಾ ಮತ್ತು ವೈದ್ಯನಾಥನ್ ವಿಚಾರಣೆಗೆ ಬರಲು ಸ್ವಲ್ಪ ಸಮಯ ಬೇಕು ಎಂದು ಕೇಳಿದ್ದಾರೆ ಎಂದು ಎಸ್.ಪಿ. ತಿಳಿಸಿದ್ದಾರೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

[t4b-ticker]
error: Content is protected !!