ರಾಜ್ಯದ ಲಕ್ಷಾಂತರ ನಂದಿನಿ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಮತ್ತೊಂದು ದರ ಏರಿಕೆ ಆಘಾತ ನೀಡಿದೆ. ಇತ್ತೀಚೆಗೆ ಜಿಎಸ್‌ಟಿ ಇಳಿಕೆಯಿಂದಾಗಿ ಹಾಲಿನ ಉತ್ಪನ್ನಗಳ ದರವನ್ನು ಕಡಿಮೆ ಮಾಡಿದ್ದ ಕೆಎಂಎಫ್, ಇದೀಗ ಏಕಾಏಕಿ ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ (ಕೆ.ಜಿ.ಗೆ) ₹90 ಮತ್ತು ಕೆ.ಜಿ. ಬೆಣ್ಣೆಗೆ ₹26 ಹೆಚ್ಚಿಸಿದ್ದು, ಗ್ರಾಹಕರ ಜೇಬಿಗೆ ಭಾರಿ ಹೊಡೆತ ಬಿದ್ದಿದೆ. ಈ ನೂತನ ದರಗಳು ಬುಧವಾರ (ನವೆಂಬರ್ 5) ದಿಂದಲೇ ಜಾರಿಗೆ ಬಂದಿದೆ.
ಬೆಂಗಳೂರು: ರಾಜ್ಯದ ಲಕ್ಷಾಂತರ ನಂದಿನಿ ಗ್ರಾಹಕರಿಗೆ ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಮತ್ತೊಂದು ದರ ಏರಿಕೆ ಆಘಾತ ನೀಡಿದೆ. ಇತ್ತೀಚೆಗೆ ಜಿಎಸ್‌ಟಿ ಇಳಿಕೆಯಿಂದಾಗಿ ಹಾಲಿನ ಉತ್ಪನ್ನಗಳ ದರವನ್ನು ಕಡಿಮೆ ಮಾಡಿದ್ದ ಕೆಎಂಎಫ್, ಇದೀಗ ಏಕಾಏಕಿ ನಂದಿನಿ ತುಪ್ಪದ ದರವನ್ನು ಪ್ರತಿ ಲೀಟರ್‌ಗೆ (ಕೆ.ಜಿ.ಗೆ) ₹90 ಮತ್ತು ಕೆ.ಜಿ. ಬೆಣ್ಣೆಗೆ ₹26 ಹೆಚ್ಚಿಸಿದ್ದು, ಗ್ರಾಹಕರ ಜೇಬಿಗೆ ಭಾರಿ ಹೊಡೆತ ಬಿದ್ದಿದೆ. ಈ ನೂತನ ದರಗಳು ಬುಧವಾರ (ನವೆಂಬರ್ 5) ದಿಂದಲೇ ಜಾರಿಗೆ ಬಂದಿವೆ.
ಇಳಿಕೆಯಾಗಿದ್ದ ದರಗಳು ಮತ್ತೆ ಗಗನಕ್ಕೆ!
ಜಿಎಸ್‌ಟಿ ದರ ಇಳಿಕೆಯಾದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 20 ರಂದು ಕೆಎಂಎಫ್ ಹಲವು ಹಾಲು ಉತ್ಪನ್ನಗಳ ದರವನ್ನು ಇಳಿಕೆ ಮಾಡಿತ್ತು. ಆಗ ಒಂದು ಕೆ.ಜಿ. ತುಪ್ಪದ (ಪೌಚ್) ದರ ₹650 ರಿಂದ ₹610ಕ್ಕೆ ಇಳಿದಿತ್ತು. ಹಾಗೆಯೇ, ಅರ್ಧ ಕೆ.ಜಿ. ಉಪ್ಪುರಹಿತ ಬೆಣ್ಣೆಯ ದರ ₹305 ರಿಂದ ₹286ಕ್ಕೆ ಇಳಿಸಲಾಗಿತ್ತು. ಆದರೆ, ಈಗ ಈ ದರಗಳು ಮತ್ತೆ ಏರಿಕೆಯಾಗಿದ್ದು, ಒಂದು ಕೆ.ಜಿ. ತುಪ್ಪ ₹700ಕ್ಕೆ ಮತ್ತು ಒಂದು ಕೆ.ಜಿ. ಬೆಣ್ಣೆ ₹570ಕ್ಕೆ ತಲುಪಿದೆ.
ದರ ಹೆಚ್ಚಳಕ್ಕೆ ಕಾರಣವೇನು?
ಕೆಎಂಎಫ್ ಸ್ಪಷ್ಟನೆದರ ಏರಿಕೆಯ ಕುರಿತು ‘ಕನ್ನಡಪ್ರಭ’ ಪತ್ರಿಕೆಗೆ ಸ್ಪಷ್ಟನೆ ನೀಡಿರುವ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಶಿವಸ್ವಾಮಿ ಅವರು, “ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹4 ಹೆಚ್ಚಳ ಮಾಡಿದಾಗಿನಿಂದ ಪ್ರತಿದಿನ | ಕೋಟಿಗೂ ಹೆಚ್ಚು ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಇದರಿಂದ ಹಾಲು ಒಕ್ಕೂಟಗಳಿಗೆ ಆರ್ಥಿಕವಾಗಿ ಸ್ವಲ್ಪ ಪ್ರಮಾಣದಲ್ಲಿ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉತ್ಪನ್ನಗಳ ದರದಲ್ಲಿ ಸ್ವಲ್ಪ ಪರಿಷ್ಕರಣೆ ಮಾಡಿದ್ದೇವೆ. ರೈತರಿಂದ ಖರೀದಿಸುತ್ತಿರುವ ಹಾಲಿನ ದರದಲ್ಲಿ ಯಾವುದೇ ರೀತಿಯ ಕಡಿತವಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಈ ದರ ಹೆಚ್ಚಳ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
ಹಾಲಿನ ಹೆಚ್ಚುವರಿ ಸಂಗ್ರಹ ಮತ್ತು ಒಕ್ಕೂಟಗಳ ಆರ್ಥಿಕ ಹೊರೆ ಕಡಿಮೆ ಮಾಡಲು ಕೆಎಂಎಫ್ ಈ ನಿರ್ಧಾರ ಕೈಗೊಂಡಿದೆ ಎಂದು ಹೇಳಲಾಗುತ್ತಿದ್ದರೂ, ಹಬ್ಬಗಳ ಸೀಸನ್‌ನಲ್ಲಿ ಅಗತ್ಯ ಉತ್ಪನ್ನಗಳ ದರ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ.












































