ʻಕೆಜಿಎಫ್ʼ ಚಿತ್ರದಲ್ಲಿ ʻಚಾಚಾʼ ಪಾತ್ರದ ಮೂಲಕ ಖ್ಯಾತರಾದ ನಟ ಹರೀಶ್ ರಾಯ್ ಅವರು ಇಂದು (ನ.6) ಬೆಳಗ್ಗೆ ನಿಧನರಾದರು. ಥೈರಾಯ್ಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು 55ನೇ ವಯಸ್ಸಿನಲ್ಲಿ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಈ ದುಃಖದ ಕ್ಷಣದಲ್ಲಿ ನಟ ಯಶ್ ಅವರು, ಹರೀಶ್ ರಾಯ್ ಅವರ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಹರೀಶ್ ರಾಯ್ ಅವರ ಅಂತಿಮ ದರ್ಶನ ಪಡೆದು, ಕುಟುಂಬಸ್ಥರಿಗೆ ನೆರವಿನ ಭರವಸೆ ನೀಡಿದ್ದಾರೆ ಯಶ್.ಹರೀಶ್ ರಾಯ್ ಅಂತಿಮ ದರ್ಶನಕ್ಕೆ ಬಂದ ಯಶ್!ʻಓಂʼ ಸಿನಿಮಾದಲ್ಲಿ ʻಡಾನ್ ರಾಯ್ʼ ಪಾತ್ರದ ಮೂಲಕ ಗುರುತಿಸಿಕೊಂಡ ಹರೀಶ್ ರಾಯ್ ಅವರು, ಯಶ್ ಅಭಿನಯದ ʻಕೆಜಿಎಫ್ʼ ಸಿನಿಮಾದಲ್ಲಿ ʻಚಾಚಾʼ ಪಾತ್ರದ ಮೂಲಕ ಮತ್ತಷ್ಟು ಜನಪ್ರಿಯರಾದರು. ಕ್ಯಾನ್ಸರ್‌ನ ಚಿಕಿತ್ಸೆಯ ಸಂದರ್ಭದಲ್ಲೂ ಯಶ್ ಅವರು ತಮಗೆ ಸಹಾಯ ಮಾಡಿದ್ದರು ಎಂದು ಈ ಹಿಂದೆ ಹರೀಶ್ ರಾಯ್ ಅವರೇ ಸಂದರ್ಶನದಲ್ಲಿ ಹೇಳಿದ್ದರು. ಹರೀಶ್ ರಾಯ್ ಅವರ ನಿಧನದ ನಂತರ ಕೂಡ ಯಶ್ ಅವರ ಮಾನವೀಯತೆ ಮುಂದುವರೆದಿದೆ.ಹರೀಶ್ ರಾಯ್ ಅವರು ಕ್ಯಾನ್ಸರ್‌ನಿಂದ ನಿಧನ ಹೊಂದಿದರು. ಅವರ ಚಿಕಿತ್ಸೆಗೆ ಧ್ರುವ ಸರ್ಜಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು, ಕಿರುತೆರೆ ನಟ-ನಟಿಯರು ಸಹಾಯ ಮಾಡಿದ್ದರು. ಆದರೆ, ಇದೀಗ ಯಶ್ ಅವರು ಹರೀಶ್ ರಾಯ್ ಅವರ ಕಿರಿಯ ಪುತ್ರ ರೋಷನ್‌ಗೆ ಸಂತೈಸುವ ಕೆಲಸ ಮಾಡಿದ್ದಾರೆ. ಹರೀಶ್ ರಾಯ್ ಅಂತಿಮ ದರ್ಶನ ಪಡೆದ ನಂತರ ಯಶ್ ಅವರು ರೋಷನ್‌ನನ್ನ ತಮ್ಮ ಕಾರಿನೊಳಗೆ ಕರೆಸಿಕೊಂಡು, “ನಾನಿದ್ದೇನೆ” ಎಂದು ಭರವಸೆ ನೀಡಿ ಸಮಾಧಾನ ಮಾಡಿದ್ದಾರೆ. ಜೊತೆಗೆ ಆರ್ಥಿಕ ಸಹಾವನ್ನೂ ನೀಡಿ ಕುಟುಂಬಕ್ಕೆ ಧೈರ್ಯ ಹೇಳಿದ್ದಾರೆ.ಹರೀಶ್ ರಾಯ್ ಪುತ್ರನಿಗೆ ಧೈರ್ಯ ತುಂಬಿದ ಯಶ್!ಹರೀಶ್ ರಾಯ್ ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿತ್ತು. ಆಗಲೇ ಯಶ್ ಅವರು ಸಹಾಯ ಮಾಡಿದ್ದರು ಎಂದು ಸ್ವತಃ ಹರೀಶ್ ರಾಯ್ ಅವರೇ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಅವರ ನಿಧನದ ನಂತರ ಕೂಡ ಯಶ್ ಅವರು ಕುಟುಂಬದೊಂದಿಗೆ ನಿಂತಿದ್ದು, ರೋಷನ್‌ಗೆ ತಂದೆಯ ನೆನಪು ತುಂಬಾ ಆಘಾತ ನೀಡಿರುವ ಸಂದರ್ಭದಲ್ಲಿ ಅವರನ್ನ ಕಾರಿನಲ್ಲಿ ಕೂರಿಸಿಕೊಂಡು ಮಾತನಾಡಿ, ಹಣಕಾಸಿನ ಸಹಾಯ ನೀಡಿ ಯಶ್ ಅವರು ಧೈರ್ಯ ತುಂಬಿದ್ದಾರೆ.
ʻಕೆಜಿಎಫ್ʼ ಚಾಚಾ ಅಂತಿಮ ದರ್ಶನ ಪಡೆದ ಯಶ್; ಹರೀಶ್ ರಾಯ್ ಕುಟುಂಬಕ್ಕೆ ನೆರವಿನ ಭರವಸೆ ನೀಡಿದ ರಾಕಿಂಗ್ ಸ್ಟಾರ್!
Savistara
Bureau Report
[t4b-ticker]












































