ಸುಳ್ಯ ರೋಟರಿ ಶಾಲೆಯ ಶೌಚಾಲಯ ನಿರ್ಮಾಣಕ್ಕಾಗಿ CAMPCO ಸಾಮಾನ್ಯ ಉತ್ತಮ ನಿಧಿ (Common Good Fund) ಯಲ್ಲಿ ಒಂದು ಲಕ್ಷ ಸಹಾಯ ಧನ ನೀಡಲಾಗಿದೆ.ಈ ಬಗ್ಗೆ ರೋಟರಿ ಅಧ್ಯಕ್ಷ ಡಾ. ರಾಮ್ ಮೋಹನ್ ಕೆ. ಏನ್ ಪ್ರತಿಕ್ರಿಯೆ ನೀಡಿದ್ದು CAMPCO ಸಂಸ್ಥೆಯಿಂದ ರೂ. 1,00,000 (ಒಂದು ಲಕ್ಷ) ಮೊತ್ತದ ಧನಸಹಾಯ ದೊರೆತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಈ ಮೊತ್ತವನ್ನು ಶಾಲೆಯ ಮಹಿಳಾ ಶೌಚಾಲಯ ನಿರ್ಮಾಣಕ್ಕಾಗಿ ನೀಡಲಾಗಿದೆ. CAMPCO ಸಾಮಾನ್ಯ ಉತ್ತಮ ನಿಧಿ (Common Good Fund ) ಮೂಲಕ ಸುಸಜ್ಜಿತ ಮತ್ತು ಸ್ವಚ್ಛ ಶೌಚಾಲಯದ ಸೌಲಭ್ಯ ಲಭ್ಯವಾಗಲಿದೆ.ಈ ಮಹತ್ವದ ಸಹಾಯವನ್ನು ನಮ್ಮ ಶಾಲೆಗೆ ಒದಗಿಸಲು CAMPCO ನಿರ್ದೇಶಕ ಶ್ರೀ ಕೃಷ್ಣ ಪ್ರಸಾದ್ ಮಡ್ತಿಲ ಅವರ ಅಮೂಲ್ಯ ಸಹಕಾರವನ್ನು ನೀಡಿದ್ದು ಅತ್ಯಂತ ಶ್ಲಾಘನೀಯವಾಗಿದೆ. ಅವರ ಪ್ರಯತ್ನದಿಂದ ಈ ಧನಸಹಾಯ ಸಿಗುವಂತಾಯಿತು. ಶಾಲೆಯ ಆಡಳಿತ ಮಂಡಳಿ ಮತ್ತು ಎಲ್ಲಾ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪಾಲಕರು ಅವರ ತ್ಯಾಗಮಯ ಸೇವೆಗೆ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.CAMPCO ಸಂಸ್ಥೆಯಂತಹ ಸಾಮಾಜಿಕ ಬದ್ಧತೆಯ ಕಂಪನಿಗಳು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ನೀಡುತ್ತಿರುವ ಸಹಕಾರವು ನಿಜಕ್ಕೂ ಪ್ರೇರಣಾದಾಯಕ. ಈ ಧನಸಹಾಯದಿಂದ ಶಾಲೆಯ ಮೂಲಸೌಕರ್ಯ ಮತ್ತಷ್ಟು ಬಲಗೊಂಡಿದ್ದು, ವಿದ್ಯಾರ್ಥಿಗಳ ಆರೋಗ್ಯ ಹಾಗೂ ಹಿತಕ್ಕಾಗಿ ಬಹುಮುಖ್ಯವಾದ ಹೆಜ್ಜೆ ಇಟ್ಟಿದೆಯೆಂದು ತಿಳಿಸಿದ್ದಾರೆ
ಕ್ಯಾಂಪ್ಕೋ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ಮುತುವರ್ಜಿ | ಕ್ಯಾಂಪ್ಕೋ ಸಾಮಾನ್ಯ ಉತ್ತಮ ನಿಧಿ ಯೋಜನೆ ರೋಟರಿ ಶಾಲೆಗೆ ಒಂದು ಲಕ್ಷ ಅನುದಾನ
Savistara
Bureau Report
[t4b-ticker]












































