ಪಂಜ ಕೇಂದ್ರ ಯುವ ಸಂಗಮ ಸಮಾವೇಶ |ಆಮಂತ್ರಣ ಪತ್ರಿಕೆ ಬಿಡುಗಡೆ

Picture of Savistara

Savistara

Bureau Report

ಅರೆಸೆಸ್ ಶತಾಬ್ದಿ ಹಿನ್ನಲೆಯಲ್ಲಿ ಸುಳ್ಯ ತಾಲೂಕು ಪಂಜ ಕೇಂದ್ರದ ಯುವಸಂಗಮ ಸಮಾವೇಶ ನ.23 ರಂದು ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಲಿದೆ.ಈ ಪ್ರಯುಕ್ತ ಯುವಸಂಗಮ ಸಮಾವೇಶ ಕಾರ್ಯಕ್ರಮದ ಪೋಸ್ಟರ್ ನ್ನು ಪಂಜದ ಜೈ ಕರ್ನಾಟಕ ಯುವಕ ಮಂಡಲ(ರಿ) ಮತ್ತು ಕೃಪಾ ಯುವತಿ ಮಂಡಲ(ರಿ) ಐವತ್ತೊಕ್ಲು ಪಂಜ ಇದರ 24ನೇ ವರ್ಷದ ವಾರ್ಷಿಕೋತ್ಸವ ಮತ್ತು ನೂತನ ಪದಾಧಿಕಾರಿಗಳ ಹಾಗೂ 13ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಪರಿವಾರ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು

[t4b-ticker]
error: Content is protected !!