ಸುಳ್ಯ ನಿಜ ಮಹಾತ್ಮ ಬಾಬಾಸಾಹೇಬ ನಾಟಕ | ಜೈ ಮೀಮ್ ಪದ ಬಳಕೆ ಆರೋಪ, ಸ್ಥಳೀಯರಿಂದ ಆಕ್ಷೇಪ

Picture of Savistara

Savistara

Bureau Report

ರಾಷ್ಟ್ರ ಚಿಂತನ ವೇದಿಕೆ ಸುಳ್ಯ, ಸುಳ್ಯ ತಾಲೂಕು ಅಟೋ ರಿಕ್ಷಾ ಚಾಲಕರ ಸಂಘ ಭಾರತೀಯ ಮಜ್ದೂರು ಸಂಘ ಸಂಯೋಜಿತ, ರಂಗಭೂಮಿ ಟ್ರಸ್ಟ್ ಕೊಡಗು ಪ್ರಸ್ತುತ ಪಡಿಸಿದ ನಾಟಕ ನಿಜಮಹಾತ್ಮ ಬಾಬಾಸಾಹೇಬ ಡಿ.16ರಂದು ಸಂಜೆ ಸುಳ್ಯದ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ನಡೆಯಿತು.ಮೈಸೂರು ರಂಗಾಯಣದ ನಿಕಟಪೂರ್ವ ಅಧ್ಯಕ್ಷ ಅಡ್ಡಂಡ ಕಾರ್ಯಪ್ಪರು ಈ ನಾಟಕ ನಿರ್ದೇಶಿಸಿದ್ದರು.ನಾಟಕ ಮುಕ್ತಾಯದ ಬಳಿಕ ನಾಟಕದ ನಿರ್ದೇಶಕ ಅಡ್ಡಂಡ ಕಾರ್ಯಪ್ಪರು ನಾಟಕದ ಕುರಿತು ಜಿಲ್ಲಾಧಿಕಾರಿಗಳಿಗೆ, ಪೊಲೀಸ ಅಧಿಕಾರಿಗಳಿಗೆ ಕೆಲವು ಕಾಂಗ್ರೆಸ್ಸಿಗರು ದೂರು ನೀಡುತ್ತಿರುವುದನ್ನು ಪ್ರಸ್ತಾಪಿಸಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಜೈ ಮೀಮ್ ಪದ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದರು. ನಾಟಕ ಮುಕ್ತಾಯದ ಸ್ವಲ್ಪ ಹೊತ್ತಿನ ಬಳಿಕ ಸತೀಶ್ ಬೂಡು ಮಕ್ಕಿ ಎಂಬವರು ಸಂಘಟಕರೊಬ್ಬರಿಗೆ ದೂರವಾಣಿ ಕರೆ ಮಾಡಿ ಜೈ ಮೀಮ್ ಎನ್ನುವ ಪದದ ಮೂಲಕ ಜೈ ಭೀಮ್ ಪದಕ್ಕೆ ಅವಮಾನ ಮಾಡಲಾಗಿದೆ ಎಂದು ದೂರಿದರು. ಜೈ ಭೀಮ್ ಬೇರೆ ಜೈ ಮೀಮ್ ಬೇರೆ ಎಂದು ಸಮಜಾಯಿಸಿ ನೀಡಿದರು ಒಪ್ಪದಿದ್ದಾಗ ನಾಟಕದ ಸ್ಥಳಕ್ಕೆ ಬರುವಂತೆ ಹೇಳಿದರು. ಸ್ವಲ್ಪ ಹೊತ್ತಿನ ಬಳಿಕ ಸತೀಶ್ ಬೂಡುಮಕ್ಕಿ, ಶೇಖರ್ ಪಲ್ಲತಡ್ಕ ಮತ್ತಿತರ ಐದಾರು ಮಂದಿ ಬಂದು ಅಡ್ಡಂಡ ಕಾರ್ಯಪ್ಪರಲ್ಲಿ ಜೈ ಮೀಮ್ ಅನ್ನುವ ಪದದ ಮೂಲಕ ಜೈ ಭೀಮ್ ಪದಕ್ಕೆ ಅವಮಾನ ಮಾಡಿದ್ದೀರಿ ಎಂದು ವಾದಿಸಿದರು. ವಾಸ್ತವದಲ್ಲಿ ಜೈ ಮೀಮ್ ಅನ್ನುವ ಪದವನ್ನು ದಲಿತರನ್ನು ಹಿಂದುಗಳಿಂದ ಬೇರ್ಪಡಿಸಿ ಮುಸಲ್ಮಾನರ ಜೊತೆ ಸೇರಿಸಲು ಅಸಾಧುದಿನ್ ಓವೈಸಿ ಅವರು ‘ ಜೈ ಭೀಮ್ ಜೈ ಮೀಮ್’ ಅನ್ನುವ ಪದವನ್ನು ಬಳಕೆ ಮಾಡಿದ್ದರ ಕುರಿತು, ಚಿತ್ತಾಪುರದಲ್ಲಿ ಅದೇ ಘೋಷಣೆ ಕೂಗಿದ್ದರ ಕುರಿತಾಗಿ ತಿಳುವಳಿಕೆ ನೀಡಲು ಯತ್ನಿಸಿದರು ಮುಖಂಡರು ಅದನ್ನು ಒಪ್ಪಲಿಲ್ಲವನ್ನಲಾಗಿದೆ. ಜೈ ಮೀಮ್ ಅನ್ನುವ ಪದದ ಮೂಲಕ ಜೈ ಭೀಮ್ ಪದಕ್ಕೆ ಅವಮಾನ ಮಾಡಿದ್ದಕ್ಕೆ ಕ್ಷಮೆ ಕೇಳಬೇಕು ಎಂದು ವಾದಿಸ ತೊಡಗಿದರು. ತಪ್ಪೇ ಮಾಡದಿದ್ದಾಗ ಕ್ಷಮೆ ಕೇಳುವ ಪ್ರಶ್ನೆ ಇಲ್ಲವೆಂದು ಸಂಘಟಕರು ಈ ಸಂದರ್ಭ ಹೇಳಿದ್ದು, ದಲಿತ ಮುಖಂಡರು ಈ ಕುರಿತು ಮುಂದಿನ ಕ್ರಮದ ಬಗ್ಗೆ ಮತ್ತೆ ತೀರ್ಮಾನ ತೆಗೆದುಕೊಳ್ಳುವ ಎಂದು ಹೇಳಿ ಅಲ್ಲಿಂದ ತೆರಳಿದರೆನ್ನಲಾಗಿದೆ.

News Updates

ಪುತ್ತೂರು ಚಲೋ ಕಾರ್ಯಕ್ರಮ ಯಶಸ್ವಿ, ಸಾವಿರ ಸಂಖ್ಯೆಯಲ್ಲಿ ಆಗಮಿಸಿದ ಹಿಂದೂ ಬಾಂಧವರು : ಓಲೈಕೆ ರಾಜಕಾರಣದ ಪರಾಕಷ್ಟೇ ಮಿತಿ ಮೀರಿದ್ದು, ಗೃಹ ಇಲಾಖೆ ಬಳಸಿಕೊಂಡು ಹಿಂದೂಗಳನ್ನು ದಮನಿಸುವ ಯತ್ನವನ್ನು ಸಹಿಸಲು ಅಸಾಧ್ಯ – ಶ್ರೀಕಾಂತ್ ಶೆಟ್ಟಿ

News Updates

ಮಂಗಳೂರಿನಲ್ಲಿ ಸ್ಮರಣಿಕೆ ತಯಾರಿಕಾ ಸಂಸ್ಥೆಯಾದ ‘ಮೈಟ್ರೀ ಕಾರ್ವಿಂಗ್ಸ್’ ನ ನೂತನ ಘಟಕ “ದಕ್ಷಿಣಾ” ದ ಶುಭಾರಂಭ | ಅತ್ಯಾಕರ್ಷಕ ಮರದ ಕೆತ್ತನೆಗಳು, ವಿಶಿಷ್ಟ ಶೈಲಿಯ ಸ್ಮರಣಿಕೆಗಳು ಹಾಗೂ ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿದ ಕಲಾಕೃತಿಗಳು ಲಭ್ಯ: ಸುಜಿತ್ ಪ್ರತಾಪ್

[t4b-ticker]
error: Content is protected !!