ಭಾರತದಲ್ಲಿ ಮೊದಲೇ ಹಣದುಬ್ಬರ, ಬೆಲೆಏರಿಕೆಗಳು ತಾಂಡವವಾಡುತ್ತಿವೆ. ಈ ನಡುವೆ ಚಿನ್ನದ ಬೆಲೆ ಕೂಡ ಏರತೊಡಗಿದರೆ ಅದು ದೇಶಿಯ ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ಈಗ ಹೂಡಿಕೆಯ ಪ್ರಮುಖ ಮಾದರಿಯಾದ ಚಿನ್ನ ಮತ್ತು ಬೆಲೆಯನ್ನು ಕಮ್ಮಿ ಮಾಡಬೇಕು ಎನ್ನುವುದರ ಕಡೆ ಗಮನಹರಿಸಲಾಗುತ್ತಿದೆ.
ದೇಶಿಯ ಮಾರುಕಟ್ಟೆಯಲ್ಲಿ ಸ್ಥಿರವಾಗಿರಲು ಬೇರೆ ದೇಶಗಳ ಜೊತೆ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದಗಳು ಪ್ರಮುಖ ಪಾತ್ರವಹಿಸುತ್ತಿವೆ. ಈ ನಿಟ್ಟಿನಲ್ಲಿ ಭಾರತ ಮುಂಬರುವ ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ (FTA) ಚಿನ್ನ ಮತ್ತು ಬೆಳ್ಳಿಯ ಬಗ್ಗೆ ಹೆಚ್ಚು ಜಾಗರೂಕವಾಗಿರಬೇಕೆಂದು ನಿಶ್ಚಯಿಸಿದೆ. ಕೇಂದ್ರ ಸರ್ಕಾರದ ಅಧಿಕಾರಿಯೊಬ್ಬರು ನೀಡುವ ಮಾಹಿತಿಯ ಪ್ರಕಾರ ನಿಯಮಗಳ ದುರುಪಯೋಗದ ಅಪಾಯವಿರುವ ಒಪ್ಪಂದಗಳಲ್ಲಿ ಚಿನ್ನ ಹಾಗು ಬೆಳ್ಳಿಯನ್ನು ಸುಂಕ ರಿಯಾಯಿತಿಗಳ ವ್ಯಾಪ್ತಿಗೆ ತರವುದಿಲ್ಲ.
ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಜೊತೆಗೆ ಮಾಡಿಕೊಂಡಿರುವ ಒಪ್ಪಂದದಲ್ಲಿ ಭಾರತಕ್ಕೆ ಕಹಿ ಅನುಭವ ಆಗಿದ್ದು, ಮುಂದೆ ಈ ತಪ್ಪನ್ನು ತಿದ್ದುಕೊಳ್ಳಲು ನಿಶ್ಚಯಿಸಲಾಗಿದೆ. ಭಾರತ-ಯುಎಇ ನಡುವಿನ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) 2022ರಲ್ಲಿ ಜಾರಿಗೆ ಬಂದಿತ್ತು. ಆ ಒಪ್ಪಂದದಲ್ಲಿ ಚಿನ್ನ ಆಮದು ಮಾಡಿಕೊಳ್ಳಲು ವಿಧಿಸುವ ಕಸ್ಟಮ್ಸ್ ಸುಂಕಕ್ಕೆ ಶೇಕಡಾ 1 ರಷ್ಟು ಹಾಗು ಬೆಳ್ಳಿಗೆ ಶೇಕಡಾ 7ರಷ್ಟು ರಿಯಾಯಿತಿ ನೀಡಲಾಗಿತ್ತು. ಇದಾದ ಮೇಲೆ ಚಿನ್ನ ಹಾಗು ಬೆಳ್ಳಿಯ ಆಮದು ಗಮನಾರ್ಹವಾಗಿ ಹೆಚ್ಚಾಗಿದೆ.
ಸದ್ಯ ಯುಎಇಯಿಂದ ಭಾರತಕ್ಕೆ ಆಮದಾಗುವ ಚಿನ್ನದ ಪ್ರಮಾಣ ಶೇ. 188 ರಷ್ಟು ಹೆಚ್ಚಾಗಿದೆ. ಇದು 2022ರಲ್ಲಿ 5.8 ಬಿಲಿಯನ್ ಡಾಲರ್ ನಿಂದ 2025 ರಲ್ಲಿ ಸುಮಾರು 16.8 ಬಿಲಿಯನ್ ಡಾಲರ್ ಗೆ ಏರಿದೆ. ಬೆಳ್ಳಿ ಆಮದು ಶೇಕಡಾ 4,500 ರಷ್ಟು ಹೆಚ್ಚಾಗಿದೆ. ಈ ದಿಢೀರ್ ಏರಿಕೆ ಭಾರತದ ದೇಶೀಯ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಭಾರತದ ವ್ಯಾಪಾರ ನೀತಿ ತಜ್ಞರು, ಭಾರತ-ಯುಎಇ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಅಡಿಯಲ್ಲಿ ಕೆಲವು ಬೆಳ್ಳಿಯ ಆಮದುಗಳು ಕಟ್ಟುನಿಟ್ಟಾದ ಮೂಲ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಗಮನಸೆಳೆದಿದ್ದಾರೆ. ಬಳಿಕ ಭಾರತ ಎಚ್ಛೆತ್ತುಕೊಂಡು ಕ್ರಮ ಕೈಗೊಳ್ಳಲು ಮುಂದಾಗಿದೆ.
ಇದೇ ಹಿನ್ನೆಲೆಯಲ್ಲಿ ಈಗ ಭಾರತ ಈಗ ಒಮಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕಳೆದ ಡಿಸೆಂಬರ್ 18 ರಂದು ಮಸ್ಕತ್‌ನಲ್ಲಿ ಒಮಾನ್ ಜೊತೆ ಒಪ್ಪಂದಕ್ಕೆ ಸಹಿ ಹಾಕಲಾದ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ)ದಲ್ಲಿ ಚಿನ್ನ ಮತ್ತು ಬೆಳ್ಳಿ ಗಟ್ಟಿಗಳನ್ನು ಸುಂಕ ರಿಯಾಯಿತಿ ವ್ಯಾಪ್ತಿಯಿಂದ ಹೊರಗಿಡಲಾಗಿದೆ. ದೇಶೀಯ ಹಿತಾಸಕ್ತಿಗಳನ್ನು ರಕ್ಷಿಸಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಇದೇ ರೀತಿ ಯುನೈಟೆಡ್ ಕಿಂಗ್‌ಡಮ್, ನ್ಯೂಜಿಲೆಂಡ್ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ ಜೊತೆ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ಸುಂಕ ರಿಯಾಯಿತಿ ವ್ಯಾಪ್ತಿಯಿಂದ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳನ್ನು ಹೊರಗಿಟ್ಟಿದೆ. ಹಾಗೆಯೇ ಪೆರು, ಚಿಲಿ ಮತ್ತು ಆಸ್ಟ್ರೇಲಿಯಾ ಮತ್ತಿತರ ದೇಶಗಳೊಂದಿಗೆ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದಗಳಲ್ಲೂ ಚಿನ್ನ ಮತ್ತು ಬೆಳ್ಳಿಯನ್ನು ಸುಂಕ ರಿಯಾಯಿತಿ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಿದೆ.
ಇದೇ ರೀತಿ ಯುನೈಟೆಡ್ ಕಿಂಗ್‌ಡಮ್, ನ್ಯೂಜಿಲೆಂಡ್ ಮತ್ತು ಯುರೋಪಿಯನ್ ಮುಕ್ತ ವ್ಯಾಪಾರ ಸಂಘ ಜೊತೆ ಮಾಡಿಕೊಂಡಿರುವ ಒಪ್ಪಂದಗಳಲ್ಲಿ ಸುಂಕ ರಿಯಾಯಿತಿ ವ್ಯಾಪ್ತಿಯಿಂದ ಕೃಷಿ ಮತ್ತು ಡೈರಿಯಂತಹ ಸೂಕ್ಷ್ಮ ವಲಯಗಳನ್ನು ಹೊರಗಿಟ್ಟಿದೆ. ಹಾಗೆಯೇ ಪೆರು, ಚಿಲಿ ಮತ್ತು ಆಸ್ಟ್ರೇಲಿಯಾ ಮತ್ತಿತರ ದೇಶಗಳೊಂದಿಗೆ ಮಾಡಿಕೊಳ್ಳುವ ವ್ಯಾಪಾರ ಒಪ್ಪಂದಗಳಲ್ಲೂ ಚಿನ್ನ ಮತ್ತು ಬೆಳ್ಳಿಯನ್ನು ಸುಂಕ ರಿಯಾಯಿತಿ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಿದೆ.
ಒಟ್ಟಿನಲ್ಲಿ ಭಾರತವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳನ್ನು ಇಳಿಸಲು ಅಗತ್ಯ ಕ್ರಮ ಕೈಗೊಳ್ಳುತ್ತಿದೆ. ವಿಶೇಷವಾಗಿ ವಿದೇಶಗಳಿಂದ ಬರುವ ಚಿನ್ನ ಹಾಗು ಬೆಳ್ಳಿಯ ಬಗ್ಗೆ ಗಮನ ಹರಿಸಿದೆ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.Disclaimer: ಈ ಪೋಸ್ಟ್ ಅನ್ನು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಬರೆಯಲಾಗಿದೆ. ಇದು ಯಾವುದೇ ರೀತಿಯ ಸರ್ಕಾರದ ವೇತನ ಹೆಚ್ಚಳ ಅಥವಾ ಪಿಂಚಣಿ ಏರಿಕೆಯನ್ನು ಖಾತರಿಪಡಿಸುವುದಿಲ್ಲ. ಇತ್ತೀಚಿನ ಮತ್ತು ನಿಖರವಾದ ಮಾಹಿತಿಗಾಗಿ ಅಧಿಕೃತ ಸರ್ಕಾರಿ ವೆಬ್‌ಸೈಟ್‌ಗಳನ್ನು ಸಂಪರ್ಕಿಸಲು ಶಿಫಾರಸು ಮಾಡಲಾಗಿದೆ.













































