ದೆಹಲಿಯಲ್ಲಿ ಸೋನಿಯಾ, ರಾಹುಲ್, ಪ್ರಿಯಾಂಕಾ ಭೇಟಿಯಾದ ಸಿಎಂ ಡಿಕೆಶಿ

Picture of Savistara

Savistara

Bureau Report

ನವದೆಹಲಿ: ದೆಹಲಿಗೆ ತೆರಳಿರುವ ಸಿಎಂ ಡಿ ಕೆ ಶಿವಕುಮಾ‌ರ್ಅವರು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರನ್ನು ನವದೆಹಲಿಯ 10, ಜನಪತ್ ನಿವಾಸದಲ್ಲಿ ಬುಧವಾರ ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.

ಇದಕ್ಕೂ ಮೊದಲು, ದೆಹಲಿಯಲ್ಲಿನ ರಾಷ್ಟ್ರೀಯ ಯುವ ಕಾಂಗ್ರೆಸ್ ಕಚೇರಿಗೆ ಬುಧವಾರ ಸೌಜನ್ಯದ ಭೇಟಿ ನೀಡಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಬಿ.ವಿ. ಶ್ರೀನಿವಾಸ್‌, ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಉದಯ್ ಭಾನು ಚಿಬ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ, ಕಾಂಗ್ರೆಸ್ ಮುಖಂಡರಾದ ಎಂಎಲ್ಸಿ ಬಸನಗೌಡ ಬಾದರ್ಲಿ, ಇನಾಯತ್ ಅಲಿ, ನಾಗೇಶ್ ಕರಿಯಪ್ಪ ಮತ್ತಿತರರು ಉಪಸ್ಥಿತರಿದ್ದರು.

ಛತ್ತೀಸಗಢ ಮಾಜಿ ಸಿಎಂ ಭೂಪೇಶ್ ಬಫೇಲ್ ಅವರು ಸಿಎಂ ಡಿ ಕೆ ಶಿವಕುಮಾ‌ರ್ ಅವರನ್ನು ದೆಹಲಿಯ ಕರ್ನಾಟಕ ಭವನದಲ್ಲಿ ಬುಧವಾರ ಅಭಿನಂದಿಸಿ, ಸಮಾಲೋಚನೆ ನಡೆಸಿದರು.

[t4b-ticker]
error: Content is protected !!