ಭಾರತದಲ್ಲಿ ಕೈಕೊಡಲಿದೆಯೇ ಮಳೆ? ಸಾಮಾನ್ಯ ಮುಂಗಾರು ಭರವಸೆಗೆ ‘ಎಲ್ ನಿನೋ’ ಭೀತಿ

Picture of Savistara

Savistara

Bureau Report

ವಿಶ್ವದ ಹವಾಮಾನ ವ್ಯವಸ್ಥೆಯನ್ನೇ ಏರುಪೇರು ಮಾಡುವ ‘ಎಲ್ ನಿನೋ’ (El Nino) ಹವಾಮಾನ ಪ್ರಕ್ರಿಯೆ ಪೆಸಿಫಿಕ್ ಮಹಾಸಾಗರದಲ್ಲಿ ಅಧಿಕೃತವಾಗಿ ಆರಂಭವಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ಘೋಷಿಸಿದೆ. ಈ ಪ್ರಕಟಣೆಯು ಭಾರತದ ರೈತರು ಹಾಗೂ ಹವಾಮಾನ ತಜ್ಞರಲ್ಲಿ ತೀವ್ರ ಆತಂಕ ಮೂಡಿಸಿದೆ.

ಸಾಮಾನ್ಯವಾಗಿ ಭಾರತದಲ್ಲಿ ಸುಡುವ ಬೇಸಿಗೆ ಮತ್ತು ದುರ್ಬಲ ಮುಂಗಾರು ಮಳೆಗೆ ಕಾರಣವಾಗುವ ಈ ಎಲ್ ನಿನೋ, ಈ ಬಾರಿ ಭಾರತದ ಕೃಷಿ ವಲಯದ ಮೇಲೆ ನೇರ ಪರಿಣಾಮ ಬೀರಲು ಹೊಂಚು ಹಾಕುತ್ತಿದೆ.

ಜಾಗತಿಕ ವಿಜ್ಞಾನಿಗಳ ಕಣ್ಣು ಪೆಸಿಫಿಕ್ ಸಾಗರದತ್ತ ಪೆಸಿಫಿಕ್ ಮಹಾಸಾಗರದ ಮೇಲ್ಮ ಭಾಗದಲ್ಲಿನ ತಾಪಮಾನವು ನಿಗದಿತ ಮಿತಿಗಿಂತ ಹೆಚ್ಚಾಗಿದ್ದು, ವಾತಾವರಣದಲ್ಲೂ ಅದಕ್ಕೆ ಪೂರಕವಾದ ಬದಲಾವಣೆಗಳು ಕಾಣಿಸಿಕೊಂಡಿವೆ ಎಂದು ಜಪಾನ್ ವಿಜ್ಞಾನಿಗಳು ಧೃಡಪಡಿಸಿದ್ದಾರೆ. ಮತ್ತೊಂದೆಡೆ ಆಸ್ಟ್ರೇಲಿಯಾ ಹವಾಮಾನ ಇಲಾಖೆಯು ಪರಿಸ್ಥಿತಿ ತೀರಾ ಹತ್ತಿರದಲ್ಲಿದೆ ಎಂದು ಎಚ್ಚರಿಸಿದೆ. ಇನ್ನು ಭಾರತೀಯ ಹವಾಮಾನ ಇಲಾಖೆ (IMD) ಈ ಬಗ್ಗೆ ಇಷ್ಟರಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.56ಎಲ್‌ ನಿನೋ ಎಫೆಕ್ಟ್‌ನಿಂದಾಗಿ ಈ ಬಾರಿ ಭಾರತದ ಮುಂಗಾರು ಮಳೆ ಸರಾಸರಿಗಿಂತ ತೀರಾ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ. ಇಲಾಖೆಯು ತನ್ನ ಹಳೆಯ ಮುನ್ಸೂಚನೆಯನ್ನು ಬದಲಾಯಿಸಿದ್ದು, ಈ ಬಾರಿ ಶೇಕಡಾ 90 ರಷ್ಟು ಮಾತ್ರ ಮಳೆಯಾಗಬಹುದು ಎಂದು ಅಂದಾಜಿಸಿದೆ. ಅಷ್ಟೇ ಅಲ್ಲದೆ, ಶೇಕಡಾ 60 ರಷ್ಟು ಮಳೆ ಕೊರತೆಯಾಗುವ ಆತಂಕಕಾರಿ ಮುನ್ಸೂಚನೆಯನ್ನೂ ನೀಡಲಾಗಿದೆ. ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶ ತಡವಾಗಿದ್ದು, ಜೂನ್ ತಿಂಗಳ ಮಳೆ ಪ್ರಮಾಣ ತೀರಾ ಇಳಿಮುಖವಾಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳ ನಂತರ ಮಳೆ ಮತ್ತಷ್ಟು ಕುಂಠಿತವಾಗುವ ಸಾಧ್ಯತೆ ದಟ್ಟವಾಗಿದೆ.

ಭಾರತದಲ್ಲಿ ಶೇಕಡಾ 50 ರಷ್ಟು ಕೃಷಿ ಭೂಮಿ ಇಂದಿಗೂ |ಯಾವುದೇ ಕೃತಕ ನೀರಾವರಿ ಸೌಲಭ್ಯವಿಲ್ಲದೆ ಕೇವಲಮಳೆಯನ್ನೇ ನೆಚ್ಚಿಕೊಂಡಿದೆ. ಮಳೆ ಕೈಕೊಟ್ಟರೆ ಇಡೀ |ದೇಶದ ಆಹಾರ ಉತ್ತಾದನೆಗೆ ಧಕ್ಕೆಯಾಗಲಿದೆ. ಇದರ |ಜೊತೆಗೆ ದೇಶದ 91 ಪ್ರಮುಖ ಜಲಾಶಯಗಳುತುಂಬಬೇಕಾದರೆ ಈ ಮೂುಂಗಾರು ಮಳೆಯೇಆಧಾರವಾಗಿದೆ.ಜಲಾಶಯಗಳು ತುಂಬದಿದರೆ ಕುಡಿಯುವ ನೀರು ಮತ್ತು |ಜಲವಿದ್ಯುತ್ ಉತ್ತಾದನೆಗೆ ಭಾರಿ ಪೆಟ್ಟು ಬೀಳಲಿದೆ.ಇತ್ತೀಚೆಗಷ್ಟೇ ಜಾಗತಿಕ ಹವಾಮಾನ ಸಂಸ್ಥೆಗಳುಇತಿಹಾಸದಲ್ಲೇ ಅತ್ಯಂತ ಗರಿಷ ತಾಪಮಾನದ ಮೇ|ತಿಂಗಳನ್ನು ದಾಖಲಿಸಿದ್ದು, ಈ ಬಿಸಿ ಈಗ ಭಾರತದ |ಮುಂಗಾರಿಗೆ ಮುಳುವಾಗುವಂತೆ ಕಾಣುತಿದೆ.

[t4b-ticker]
error: Content is protected !!