ಅಟ್ಲಾಂಟಿಕ್ ಸಾಗರದಲ್ಲಿ ಹೈಡ್ರಾಮಾ: ರಷ್ಯಾದ ತೈಲ ಟ್ಯಾಂಕರ್ ವಶಪಡಿಸಿಕೊಂಡ ಅಮೆರಿಕೆ ಮಿಲಿಟರಿ

Picture of Savistara

Savistara

Bureau Report

ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಅಮೆರಿಕದ ನಿರ್ಬಂಧಗಳನ್ನು ಉಲ್ಲಂಘಿಸಿ ತೈಲ ಸಾಗಿಸುತ್ತಿದ್ದ ಆರೋಪದ ಮೇಲೆ, ರಷ್ಯಾದ ಧ್ವಜ ಹೊಂದಿರುವ ‘ಮರಿನೆರಾ’ (Marinera) ಎಂಬ ಬೃಹತ್ ತೈಲ ಟ್ಯಾಂಕ‌ರ್ ಅನ್ನು ಅಮೆರಿಕ ಮಿಲಿಟರಿ ವಶಪಡಿಸಿಕೊಂಡಿದೆ. ಸ್ಕಾಟ್ಲಂಡ್‌ನ ವಾಯುವ್ಯ ಭಾಗದ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಅಮೆರಿಕದ ಯುರೋಪಿಯನ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಫೆಡರಲ್ ನ್ಯಾಯಾಲಯ ಹೊರಡಿಸಿದ ವಾರಂಟ್‌ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ರಷ್ಯಾದ ಸಾರಿಗೆ ಸಚಿವಾಲಯವು ಅಮೆರಿಕದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿದೆ.

  • ರಷ್ಯಾದ ವಾದ: “ಯಾವುದೇ ದೇಶಕ್ಕೆ ಅಂತರಾಷ್ಟ್ರೀಯ ಜಲಪ್ರದೇಶದಲ್ಲಿ ಮತ್ತೊಂದು ದೇಶದ ನೋಂದಾಯಿತ ಹಡಗಿನ ಮೇಲೆ ಬಲಪ್ರಯೋಗ ಮಾಡುವ ಹಕ್ಕಿಲ್ಲ. ಮರಿನೆರಾ ಹಡಗು ಕಳೆದ ತಿಂಗಳು ರಷ್ಯಾದ ಧ್ವಜದ ಅಡಿಯಲ್ಲಿ ಚಲಿಸಲು ತಾತ್ಕಾಲಿಕ ಅನುಮತಿ ಪಡೆದಿತ್ತು” ಎಂದು ರಷ್ಯಾ ಹೇಳಿದೆ.
  • ಅಮೆರಿಕದ ಪಡೆಗಳು ಹಡಗನ್ನು ಪ್ರವೇಶಿಸಿದ ನಂತರ ಹಡಗಿನೊಂದಿಗಿನ ಸಂಪರ್ಕ ಕಡಿತಗೊಂಡಿದೆ ಎಂದು ರಷ್ಯಾ ಆತಂಕ ವ್ಯಕ್ತಪಡಿಸಿದೆ.

ಇದೇ ಸಮಯದಲ್ಲಿ ಕೆರಿಬಿಯನ್ ಸಮುದ್ರದಲ್ಲಿ ಕಾರ್ಯಾಚರಣೆ ನಡೆಸಿದ ಅಮೆರಿಕದ ಸದರ್ನ್ ಕಮಾಂಡ್, ‘ಸೋಫಿಯಾ’ (Sophia) ಎಂಬ ಹೆಸರಿನ ಮತ್ತೊಂದು ಅಕ್ರಮ ತೈಲ ಟ್ಯಾಂಕ‌ರ್ ಅನ್ನು ವಶಪಡಿಸಿಕೊಂಡಿದೆ. ಈ ಹಡಗು ಯಾವುದೇ ದೇಶದ ಧ್ವಜ ಹೊಂದಿರದ (stateless) ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿದ್ದ ಹಡಗಾಗಿದೆ ಎಂದು ಅಮೆರಿಕ ತಿಳಿಸಿದೆ.

News Updates

ಮಂಗಳೂರಿನಲ್ಲಿ ನ. 6ಕ್ಕೆ ಬಿಜೆಪಿ ಬೃಹತ್ ಪಾದಯಾತ್ರೆ: ಕೇಂದ್ರ ಸಚಿವ ಸುರೇಶ್ ಗೋಪಿ, ಸಂಸದ ತೇಜಸ್ವಿ ಸೂರ್ಯ ಭಾಗಿ |ಲೋಕತಂತ್ರ ಉಳಿಸಿ, ಅರಾಜಕತೆ ಅಳಿಸಿ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಸಂಸದ ಕ್ಯಾ. ಚೌಟ ಕರೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

News Updates

ಕೇಂದ್ರದ ಯೋಜನೆಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಅಡ್ಡಗಾಲು: ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಆರೋಪ |ಪುತ್ತೂರಿನಲ್ಲಿ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ, ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆ

[t4b-ticker]
error: Content is protected !!