ಸುಳ್ಯ: ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಅವಹೇಳಕಾರಿ ಪೋಸ್ಟ್ : ಸುಳ್ಯದಲ್ಲಿ ಬಿಜೆಪಿ ಪ್ರತಿಭಟನೆ | ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸಲು ಆಗ್ರಹ

Picture of Savistara

Savistara

Bureau Report

ಸುಳ್ಯ ವಿಧಾನ ಸಭಾ ಕ್ಷೇತ್ರ ಶಾಸಕರಾದ ಕು.ಭಾಗೀರಥಿ ಮುರುಳ್ಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಳ್ಯದಲ್ಲಿ ಬಿಜೆಪಿ ಮಂಡಲ ಸಮಿತಿ ಪ್ರತಿಭಟನೆ ನಡೆಸಿದೆ. ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸಬೇಕು ಎಂದು ಆಗ್ರಹಿಸಿದೆ. ಸುಳ್ಯ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆಯವರು, “ಶಾಸಕಿ ಭಾಗೀರಥಿ ಮುರುಳ್ಯರವರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವವರನ್ನು ಇನ್ನೂ ಬಂಧಿಸುವ ಕೆಲಸ ಇಲಾಖೆ ಮಾಡಿಲ್ಲ. ಶಾಸಕರೊಬ್ಬರಿಗೆ ಈ ರೀತಿ ಅವಮಾನ ಆಗುವಾಗ ಸರಕಾರ ಯಾಕೆ ಸುಮ್ಮನೆ ಕುಳಿತುಕೊಳ್ಳುತ್ತಿದೆ ಎಂದು ಅವರು ಪ್ರಶ್ನಿಸಿದರು. ಈ ಕೃತ್ಯದ ಹಿಂದೆ ಒಬ್ಬ ವ್ಯಕ್ತಿ ಇರಲು ಸಾಧ್ಯವಿಲ್ಲ. ಶಾಸಕರ ಜನಪ್ರಿಯತೆಯನ್ನು ಸಹಿಸದೇ ಈ ರೀತಿ ಮಾಡಿರಬೇಕು. ಆದ್ದರಿಂದ ಪೋಲೀಸ್ ಇಲಾಖೆ ಆರೋಪಿಯನ್ನು ಹಾಗೂ ಆತನ ಹಿಂದೆ ಇರುವವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸುವ ಕೆಲಸ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಶಾಸಕರ ವಿರುದ್ಧದ ಈ ಪೋಸ್ಟ್ ಸುಳ್ಯದ ಜನತೆಗೆ ಮಾಡಿದ ಅವಮಾನ” ಎಂದು ಅವರು ಹೇಳಿದರು. ಮಂಡಲ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ, ಶಾಸಕರೊಬ್ಬರು ಬದಕಿರುವಾಗಲೇ ಶ್ರದ್ಧಾಂಜಲಿ ಹಾಕುವ ಕೃತ್ಯ ಬಯಲು ಸೀಮೆ ಕಡೆಯಲ್ಲಿ ನಡೆಯುತ್ತಿದ್ದರೆ ಅಲ್ಲಿ ಊರೇ ಉರಿಯುವ ಸ್ಥಿತಿ ನಿರ್ಮಾಣವಾಗುತಿತ್ತು. ನಮಗೆ ಆಗುವುದಿಲ್ಲವೆಂದಲ್ಲ ಇಲ್ಲಿಯ ಜನ ಶಾಂತಿ ಪ್ರಿಯರು.

ಆರೋಪಿಯನ್ನು ಇಲಾಖೆ ಬಂಧಿಸಬೇಕೆಂದು ನಾವು ಆಗ್ರಹಿಸುತ್ತೇವೆ. ಸರಕಾರ ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದ ಅವರು, ಹಿಂದೆ ಬೆಳ್ಳಾರೆಯ ವ್ಯಕ್ತಿಯೊಬ್ಬರು ವಿದ್ಯುತ್ ಇಲ್ಲವೆಂದು ಡಿ.ಕೆ. ಶಿವಕುಮಾರ್ ರಿಗೆ ಕರೆ ಮಾಡಿದರೆಂಬ ಕಾರಣಕ್ಕೆ ರಾತ್ರೋರಾತ್ರಿ ಆ ವ್ಯಕ್ತಿಯ ಮನೆಗೆ ಪೋಲೀಸರು ಬಂದು ಮನೆಯ ಹಂಚು ತೆಗೆದು ಬಂಧಿಸುವ ಕೆಲಸ ಮಾಡಿದ್ದಾರೆ. ಆದರೆ ಈ ಪ್ರಕರಣದಲ್ಲಿ ಯಾಕೆ ಸುಮ್ಮನಿದ್ದಾರೆ. ಪೋಸ್ಟ್ ಹಾಕಿ ೨ ದಿನವಾದರೂ ಕ್ರಮ ಕೈಗೊಂಡಿಲ್ಲ.

ಹಾಕಿದ ವ್ಯಕ್ತಿ ಬಿಜೆಪಿಪಿಯವರ ಆಗುತ್ತಿದ್ದರೆ ಈಗಾಗಲೇ ಬಂಧನ ಆಗುತಿತ್ತು. ಅಥವಾ ಕಾಂಗ್ರೆಸ್‌ನವರಿಗೆ ಹಾಕುತಿದ್ದರೆ ಕೂಡಾ ಕ್ರಮ ಆಗುತಿತ್ತು. ಈಗ ಸರಕಾರ ಸುಮ್ಮನಿರುವುದು ಖಂಡನೀಯ” ಎಂದು ಹೇಳಿದರು. ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕರು ಮಾತನಾಡಿ, “ಕ್ಷೇತ್ರದ ಶಾಸಕರಿಗೆ ಅವಮಾನ ಮಾಡಿ ಪೋಸ್ಟ್ ಹಾಕಿದಾಗ ಎಲ್ಲರೂ ಖಂಡನೆ ವ್ಯಕ್ತ ಪಡಿಸುತ್ತಿದ್ದಾಗ ಕಾಂಗ್ರೆಸ್ ನಾಯಕರು ಖಂಡಿಸದೇ ಇದ್ದುದು ದುರಾದೃಷ್ಟ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವುದನ್ನು ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಆ ವ್ಯಕ್ತಿಯ ವಿರುದ್ಧ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಮಹಿಳಾ ಮೋರ್ಚಾ ಅಧ್ಯಕ್ಷೆ ಶ್ರೀಮತಿ ಇಂದಿರಾ ಬಿ.ಕೆ. ಮಾತನಾಡಿ “ಶಾಸಕಿ ಭಾಗೀರಥಿ ಮುರುಳ್ಯರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಖಂಡನೀಯ. ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕು. ಹಾಗೂ ಆ ಶಿಕ್ಷೆ ಮುಂದೆ ಈ ರೀತಿ ಪೋಸ್ಟ್ ಹಾಕುವವರಿಗೆ ಮುನ್ಸೂಚನೆ ಇರುವಂತೆ ಆಗಬೇಕು” ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬಿಜೆಪಿ ನಾಯಕರಾದ ಎಸ್.ಎನ್. ಮನ್ಮಥ, ಸುರೇಶ್ ಕಣೆಮರಡ್ಕ, ವೆಂಕಟ್ ದಂಬೆಕೋಡಿ, ಸಂತೋಷ್ ಕುತ್ತಮೊಟ್ಟೆ, ಚಂದ್ರಾ ಕೋಲ್ಚಾರ್, ಜಗದೀಶ್ ಸರಳಿಕುಂಜ, ಕೇಶವ ಅಡ್ತಲೆ, ಅಶೋಕ್ ಪೀಚೆ, ನಾರಾಯಣ ಶಾಂತಿನಗರ, ಗುರುದತ್ ಶೇಟ್, ವಸಂತ ನಡುಬೈಲು, ಶಿವರಾಮ ಕೇರ್ಪಳ, ಶಾಂತಾರಾಮ ಕಣಿಲೆಗುಂಡಿ, ಅನೂಪ್ ಬಿಳಿಮಲೆ, ಜಾನಕಿ ಮುರುಳ್ಯ, ಸುವರ್ಣಿನಿ ಪಂಜ, ಶಿಲ್ಪಾ ಸುದೇವ್, ಗಿರೀಶ್ ಕಲ್ಲುಗದ್ದೆ, ಜಯರಾಮ ರೈ ಜಾಲ್ಸೂರು, ಪ್ರಭೋದ್ ಶೆಟ್ಟಿ ಮೇನಾಲ, ಶಶಿಕಲಾ ನೀರಬಿದಿರೆ, ಕಿರಣ್ ಕುರುಂಜಿ, ಅಶೋಕ್ ಅಡ್ಕಾರು, ಶಂಕರ ಪೆರಾಜೆ, ಸೀತಾರಾಮ ಕೊಲ್ಲರಮೂಲೆ, ಅಬ್ದುಲ್ ಕುಂಞಿ ನೇಲ್ಯಡ್ಕ, ಸಂತೋಷ್ ಜಾಕೆ, ಶಾರದಾ ಡಿ. ಶೆಟ್ಟಿ, ಗುಣವತಿ ಕೊಲ್ಲಂತಡ್ಕ, ಎ.ಟಿ.ಕುಸುಮಾಧರ, ಶ್ಯಾಂ ಪಾನತ್ತಿಲ, ಸಾವಿತ್ರಿ ಅಡ್ಕಾರುಬೈಲು, ವಾಸುದೇವ ಪುತ್ತಿಲ, ಕೇಶವ ಮಾಸ್ತರ್ ಹೊಸಗದ್ದೆ, ಶ್ರೀಕಾಂತ್ ಮಾವಿನಕಟ್ಟೆ, ಶೀನಪ್ಪ ಬಯಂಬು, ಸಂಜಯ ಪೈಚಾರು, ಶಿವರಾಮ ಕೇರ್ಪಳ, ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು, ಚಿದಾನಂದ ಹಳೆಗೇಟು, ಜಯಂತಿ ಜನಾರ್ದನ ಅಜ್ಜಾವರ, ಪುಷ್ಪಾ ತಿಮ್ಮಪ್ಪ, ಜಯರಾಮ ಕುಕ್ಕೆಟ್ಟಿ, ಶಿವಪ್ರಸಾದ್ ಉಗ್ರಾಣಿಮನೆ, ಅವಿನಾಶ್ ಕುರುಂಜಿ, ಚನಿಯ ಕಲ್ತಡ್ಕ, ಭಾರತಿ ಉಳುವಾರು, ಜಯಪ್ರಕಾಶ್ ಕುಂಚಡ್ಕ, ಧನಂಜಯ ಕುಂಚಡ್ಕ, ಕೃಷ್ಣಯ್ಯು ಮೂಲೆತೋಟ, ರಾಜೇಶ್ ಶೆಟ್ಟಿ ಮೇನಾಲ, ಸುಭೋದ್ ಶೆಟ್ಟಿ ಮೇನಾಲ, ಶಿವಾನಂದ ಕುಕ್ಕುಂಬಳ, ಶ್ರೀದೇವಿ ನಾಘರಾಜ ಭಟ್, ಜಾಹ್ನವಿ ಕಾಂಚೋಡು, ಲೋಹಿತ್ ಕೊಡಿಯಾಲ, ಕೃಷ್ಣ ಶೆಟ್ಟಿ ಕಡಬ, ರಾಜೇಶ್ ಬಿ.ಎನ್. ಸುಬ್ರಹ್ಮಣ್ಯ, ವನಿತಾ ಸುವರ್ಣ, ಪುಷ್ಪಲತಾ ಕುಕ್ಕಟ್ಟೆ, ವೀಣಾ ಮೋಂಟಡ್ಕ, ಹರಿಣಾಕ್ಷಿ ಬೇಲ್ಯ, ಶಾರದಾ ಡಿ. ಶೆಟ್ಟಿ, ಚಂದ್ರಶೇಖರ ನೂಜಿಬಾಳ್ತಿಲ, ಮಧುಸೂಧನ ಕೊಂಬಾರು, ಚಂದ್ರಹಾಸ ಶಿವಾಲ, ವಿಜಯ ಅಂಙನ, ಪದ್ಮನಾಭ ಶೆಟ್ಟಿ ಪರುವಾಜೆ, ಕುಶಾಲಪ್ಪ ಪೆರುವಾಜೆ, ರಾಜೇಶ್ ಕಿರಿಭಾಗ, ದಿವ್ಯಾ ಮಡಪ್ಪಾಡಿ, ಪೂರ್ಣಿಮಾ ಸೂಂತೋಡು, ಶೀಲಾ ಕುರುಂಜಿ, ಪ್ರಮೀಳಾ ಜನಾರ್ಧನ, ಶಿವಪ್ರಸಾದ್ ನಡುತೋಟ, ಚಿದಾನಂದ ಕುದ್ಪಾಜೆ, ಪ್ರದೀಪ್ ಕೊಲ್ಲರಮೂಲೆ, ಲತೀಶ ಗುಂಡ್ಯ, ರಮಾನಂದ ಎಣ್ಣೆಮಜಲು, ಚಿನ್ನಪ್ಪ ಚೊಟ್ಟೆಮಜಲು, ಚಂದ್ರಶೇಖರ ದೇರಾಜೆ ಕುದ್ವಾ, ಸುಬ್ರಹ್ಮಣ್ಯ ಕುಳ, ಚಂದ್ರಶೇಖರ ಶಾಸ್ತ್ರಿ ಪಂಜ, ಲೋಕೇಶ್ ಬರೆಮೇಲು, ದಯಾನಂದ ಕುರುಂಜಿ, ಶ್ರೀಮತಿ ವಿನಯ, ಪ್ರಣೀತ್ ಕಣಕ್ಕೂರು, ನವೀನ್ ಚಾತುಬಾಯಿ, ಸುನಿಲ್ ಕೇರ್ಪಳ, ಚಿದಾನಂದ ಕುದ್ಪಾಜೆ, ಚಂದ್ರಶೇಖರ ಕೇರ್ಪಳ, ಸುಧಾಕರ ಕುರುಂಜಿಭಾಗ್, ಬುದ್ಧ ನಾಯ್ಕ್, ಶಿಲ್ಪಾ ಸುದೇವ್, ನಾರಾಯಣ ಬಂಟ್ರಬೈಲು, ಸೋಮನಾಥ ಪೂಜಾರಿ, ರಮೇಶ್ ಇರಂತಮಜಲು, ಜಯರಾಜ ಕುಕ್ಕೆಟ್ಟಿ, ಕಿಶೋರಿ ಶೇಟ್, ಕಿಶನ್ ಜಬಳೆ, ಶ್ರೀನಾಥ ರೈ ಬಾಳಿಲ, ಮಹೇಶ್ ರೈ ಮೇನಾಲ, ಪ್ರವೀಣ ಜಯನಗರ, ಶಿವಪ್ರಸಾದ್ ಉಗ್ರಾಣಿಮನೆ, ಕರುಣಾಕರ ಹುದೇರಿ, ವಿಜಯ ಆಲಡ್ಕ, ಜಗನ್ನಾಥ ಜಯನಗರಸೀತಾರಾಮ ಕೊಲ್ಲರಮೂಲೆ ಸೇರಿದಂತೆ ನೂರಾರು ಮಂದಿ ಕಾರ್ಯಕರ್ತರಿದ್ದರು.

[t4b-ticker]
error: Content is protected !!