ಹಿಂದೂ ಸಂಗಮ ತಾಲೂಕು ಆಯೋಜನಾ ಸಮಿತಿ, ಧರ್ಮಸ್ಥಳ ಮಂಡಲ:ಹಿಂದೂ ಸಂಗಮ ಕಾರ್ಯಕ್ರಮ

Picture of Savistara

Savistara

Bureau Report

ಧರ್ಮಸ್ಥಳ: ಹಿಂದೂ ಸಂಗಮ ಆಯೋಜನಾ ಸಮಿತಿ, ಧರ್ಮಸ್ಥಳ, ಕಲ್ಮಂಜ ಗ್ರಾಮದ ಮಂಡಲದ ವತಿಯಿಂದ ಜ.18ರಂದು ಕನ್ಯಾಡಿ ಸುಪ್ರಜಾ ಸಭಾಂಗಣ ವಠಾರದಲ್ಲಿ ಹಿಂದೂ ಸಂಗಮ ಕಾರ್ಯಕ್ರಮ ನೆರವೇರಿತು.

ದೀಪ ಪ್ರಜ್ವಲನೆ ಮಾಡಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾಧ್ಯಕ್ಷತೆ ನಾರಾಯಣ ಮಲೆಕುಡಿಯ ವಹಿಸಿದ್ದರು.

ಕಾರ್ಯಕ್ರಮದ ಮಹತ್ವದ ಬಗ್ಗೆ ಹರಿಕೃಷ್ಟ ಮಂಗಳೂರು ಮಾತನಾಡಿ ಹಿಂದೂ ಧರ್ಮದ ಜೋಡಿಸುವ ಸಂಸ್ಕಾರ ಹುಟ್ಟು ಹಬ್ಬವನ್ನು ದೀಪ ಬೆಳಗಿಸುವ ಮೂಲಕ ಆಚರಿಸಿ ಪ್ಲಾಸ್ಟಿಕ್ ಮುಕ್ತ ಗೊಳಿಸುವುದು ಹಿಂದೂ ಧರ್ಮದ ಗುರಿ ಆಗಬೇಕು ಎಂದರು.

ವೇದಿಕೆಯಲ್ಲಿ ದುರ್ಗಾ ಮಾತೃ ಮಂಡಳಿಯ ಅಧ್ಯಕ್ಷೆ ಮಮತ, ಆಯೋಜನೆ ಸಮಿತಿಯ ರವಿ ಭಟ್ ಉಪಸ್ಥಿತರಿದ್ದರು.ಕಲ್ಮಂಜ ಸತ್ಯನಪಲ್ಕೆ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿ, ಧರ್ಮಸ್ಥಳ ನಾರ್ಯ ಶ್ರೀ ಷಣ್ಮುಖ ಭಜನಾ ಮಂಡಳಿ, ಧರ್ಮಸ್ಥಳ ಸರ್ವ ಮಂಗಳ, ನಿಡಿಗಲ್ ಅಕ್ಷಯನಗರ ಶ್ರೀ ಕೃಷ್ಣ ಬಾಲ ಗೋಕುಲ, ಕನ್ಯಾಡಿ ವಿಭಕ್ತ ಪ್ರಿಯ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.ಮಂಡಲ ಕಾರ್ಯದರ್ಶಿ ಶಾಂತಪ್ಪ ಸ್ವಾಗತಿಸಿ, ಪೃಥ್ವಿಶ್ ಧರ್ಮಸ್ಥಳ ನಿರೂಪಿಸಿ, ವಿಕ್ರಮ್ ಧರ್ಮಸ್ಥಳ ವಂದಿಸಿದರು.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!