ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಆಡಳಿತ ಪಾರದರ್ಶಕತೆ ವಿಚಾರ |ನಾಳೆ( ಆಗಸ್ಟ್ 15)ಸೀಮೆಯ ಭಕ್ತಾದಿಗಳಿಂದ ಬೃಹತ್ ಸಾರ್ವಜನಿಕ ಸಭೆ

Picture of Savistara

Savistara

Bureau Report

ಪಂಜ :ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಕಾರ್ಯವೈಖರಿ, ಆರ್ಥಿಕ ಪಾರದರ್ಶಕತೆ, ಸಿಬ್ಬಂದಿಗಳ ವಜಾ ಹಾಗೂ ತೋಟದ ಗುತ್ತಿಗೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ಚರ್ಚಿಸಲು ಹಾಗೂ ಸೂಕ್ತ ಸ್ಪಷ್ಟನೆ ಪಡೆಯಲು ಆ.15ರ ಶನಿವಾರದಂದು ದೇವಾಲಯದ ಸಭಾಂಗಣದಲ್ಲಿ ಸಂಜೆ ಮೂರು ಗಂಟೆಗೆ ಬೃಹತ್ ಸಾರ್ವಜನಿಕ ಧಾರ್ಮಿಕ ಭಕ್ತಾದಿಗಳ ಮಹಾಸಭೆಯನ್ನು ಕರೆಯಲು ಭಕ್ತಾದಿಗಳು ನಿರ್ಧರಿಸಿದ್ದಾರೆ.ದೇವಸ್ಥಾನದ ಪಾವಿತ್ರ್ಯತೆ, ದಕ್ಷತೆ ಹಾಗೂ ಸಂಪೂರ್ಣ ಪಾರದರ್ಶಕತೆಯನ್ನು ಕಾಯ್ದುಕೊಳ್ಳುವುದು ಮಹತ್ವದ ಸಭೆ ಕರೆಯಲಾಗಿದೆಯೆಂದು ತಿಳಿದುಬಂದಿದೆ.

ಸಾವಿರಸೀಮೆಯ ಪ್ರತಿಯೊಂದು ಭಕ್ತಾದಿಗಳ ಮನೆಯಿಂದ ಕನಿಷ್ಠ ಒಬ್ಬರಾದರೂ ತಪ್ಪದೇ ಭಾಗವಹಿಸಬೇಕು.ಸಭೆಯು ನಿಗದಿತ ಸಮಯಕ್ಕೆ ಸರಿಯಾಗಿಪ್ರಾರಂಭವಾಗುವುದರಿಂದ, ಎಲ್ಲರೂ ಸಮಯಕ್ಕ ಮುಂಚಿತವಾಗಿ ದೇವಸ್ಥಾನದ ಆವರಣದಲ್ಲಿ ಉಪಸ್ಥಿತರಿರಬೇಕಾಗಿ ಕಳಕಳಿಯಿಂದ ಭಕ್ತರು ಅಗ್ರಹಿಸಿದ್ದಾರೆ.

[t4b-ticker]
error: Content is protected !!