ರಾಜಕೀಯ ನಿಂತ ನೀರಲ್ಲ. ಇಂದು ಅಧಿಕಾರ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡುತ್ತಾ, “ನೌಟಂಕಿ, ನವರಂಗಿ, ಕುಚೋದ್ಯ” ಎಂದು ಏಕವಚನದಲ್ಲಿ ನಿಂದಿಸಿದರೆ ಅದನ್ನು ಕೇಳಿಸಿಕೊಂಡು ಸುಮ್ಮನೆ ಕೂರುವವನು ನಾನಲ್ಲ ವೆಂದು ಬಿಜೆಪಿ ಕೊಡಗು ವಕ್ತಾರ,ಮಾಜಿ ಜಿ.ಪಂ ಅಧ್ಯಕ್ಷ ರವಿ ಕುಶಾಲಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾನು ಕೊಡಗಿನ ವೀರರ ನಾಡಿನಲ್ಲಿ ಹುಟ್ಟಿದವನು. ನನಗೂ ರೋಷವಿದೆ, ಆವೇಶವಿದೆ. ಯಾರಿಗೂ ಹೆದರಿ ಹಿಂದೆ ಸರಿಯುವ ಸ್ವಭಾವ ನನ್ನದಲ್ಲ.
ನಾನು ನಿರಂತರವಾಗಿ ಜನರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅವರಿಗೆ ಆಗುತ್ತಿರುವ ತೊಂದರೆಗಳನ್ನು ಬಿತ್ತರಿಸುತ್ತಿದ್ದೇನೆ. ಯಾರ ಮನೆಯ ಆಸ್ತಿಯನ್ನೂ ಕೇಳಿಲ್ಲ, ಯಾರ ವೈಯಕ್ತಿಕ ಬದುಕಿನ ಬಗ್ಗೆಯೂ ಮಾತನಾಡಿಲ್ಲ, ಯಾರನ್ನೂ ಏಕವಚನದಲ್ಲಿ ನಿಂದಿಸಿಲ್ಲ.
ತೆನ್ನಿರ ಮೈನಾ, ಇದು ನಿನಗೆ ನನ್ನ ಕೊನೆಯ ಎಚ್ಚರಿಕೆ. ರಾಜಕೀಯ ವಿಚಾರಗಳ ಬಗ್ಗೆ ಪರಸ್ಪರ ಚರ್ಚೆ, ಟೀಕೆ ಹಾಗೂ ವಾದ–ವಿವಾದಕ್ಕೆ ನಾನು ಯಾವಾಗಲೂ ಸಿದ್ಧನಿದ್ದೇನೆ. ಆದರೆ ಅದನ್ನು ಬಿಟ್ಟು ವೈಯಕ್ತಿಕ ನಿಂದನೆ, ಅವಹೇಳನ ಹಾಗೂ ಏಕವಚನದ ಮಾತುಗಳಿಗೆ ಇಳಿದರೆ, ಅದಕ್ಕೆ ನನ್ನ ಪ್ರತಿಕ್ರಿಯೆಯೂ ಅದೇ ಮಟ್ಟದಲ್ಲಿ ತೀಕ್ಷ್ಣವಾಗಿರುತ್ತದೆ.ಮಾತಿನ ಮಿತಿ ಮೀರುವ ಮುನ್ನ ಎಚ್ಚರಿಕೆ ಇರಲೆಂದು ಪತ್ರಿಕಾ ಹೇಳಿಕೆಯಲ್ಲಿ ರವಿ ಕುಶಾಲಪ್ಪ ತಿಕ್ಷವಾಗಿ ತಿಳಿಸಿದ್ದಾರೆ

















































