ಪಂಜ: ಪಂಜ ಸೀಮೆಯ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ ಯೆನ್ನಲಾದ ಆರ್ಥಿಕ ಶಿಸ್ತು ಮತ್ತು ಪಾರದರ್ಶಕತೆ ಬಗ್ಗೆ ನಿನ್ನೆ ದೇವಾಲಯದ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು.
ಪಂಜ ಸೀಮೆಯ ವ್ಯಾಪ್ತಿಯ 500 ಕ್ಕೂ ಮಿಕ್ಕಿ ಭಕ್ತರು ಈ ಸಭೆಯಲ್ಲಿ ಭಾಗವಹಿಸಿ ದೇವಾಲಯದ ವ್ಯವಸ್ಥೆ,ನೌಕರರ ನೇಮಕಾತಿ,
ಲೆಕ್ಕಪತ್ರ ಕುರಿತು ಭಕ್ತರ ಪ್ರಶ್ನೆಗೆ ಆಡಳಿತ ಸಮಿತಿ ಸಮರ್ಪಕ ಉತ್ತರ ನೀಡದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ ಠೇವಣಿ ವಿಚಾರ ದ ಬಗ್ಗೆ ಪೂರ್ಣ ಮಾಹಿತಿ ನೀಡಬೇಕೆಂದು ಭಕ್ತರು ಪಟ್ಟು ಹಿಡಿದಿದ್ದು ಸೂಕ್ತ ತನಿಖೆಗೆ ಒತ್ತಾಯಿಸಿದ್ದಾರೆ ಕೊನೆಗೆ ಯಾವ ತೀರ್ಮಾನಕ್ಕೆ ಬರಲು ಸಭೆ ವಿಫಲಗೊಂಡಿದ್ದು ಇವತ್ತು ನಡೆದಂತ ಭಕ್ತಾದಿಗಳ ಸಭೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಸದಸ್ಯರಿಂದ ಯಾವುದೇ ವಿಚಾರಕ್ಕೂ ಸ್ಪಷ್ಟನೆ ಹಾಗೂ ಲೆಕ್ಕಾಚಾರದ ವಿಷಯದಲ್ಲಿ ಒಮ್ಮತದ ನಿರ್ಣಯ ಬರದ ಕಾರಣ ಪಂಚಲಿಂಗೇಶ್ವರ ದೇವರ ನಡೆಯಲ್ಲಿ ಮುಂದಿನ ಆಗುಹೋಗುಗಳಿಗೆ ಆಡಳಿಯ ಕಮಿಟಿಯೇ ಹೊಣೆಯಾಗಲಿ ಎಂದು ನೂರಾರು ಭಕ್ತರ ಸಮ್ಮುಖದಲ್ಲಿ ಪ್ರಾರ್ಥಿಸಲಾಯಿತು..
ಸಾವಿರ ಸೀಮೆಯ ಭಕ್ತರು ಸದಾಶಿವ ಪರಿವಾರ ಪಂಚಲಿಂಗೆಶ್ವರ ದೇವಸ್ಥಾನ ಪಂಜ ತೀರ್ಮಾನಿಸಿದರು











































