ಪಂಜ: ಪ್ರಸಿದ್ಧ ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪಾರದರ್ಶಕತೆ ಮತ್ತು ಆರ್ಥಿಕ ಶಿಸ್ತಿನ ಕುರಿತು ತೀವ್ರ ಪ್ರಶ್ನೆಗಳು ಎದ್ದಿದ್ದು, ದೇವಳದ ಸಭಾಭವನದಲ್ಲಿ ನಡೆದ ಭಕ್ತಾದಿಗಳ ಸಭೆ ಕಾವು ಪಡೆದುಕೊಂಡಿದೆ.ದೇವಳದ ವ್ಯವಸ್ಥೆ ಹಾಗೂ ಲೆಕ್ಕಪತ್ರಗಳ ಕುರಿತು ಭಕ್ತರು ಕೇಳಿದ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಆಡಳಿತ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ವೇದಿಕೆಯಲ್ಲೇ ತಡಕಾಡಿದ ಪ್ರಸಂಗ ನಡೆಯಿತು.ಠೇವಣಿ ವಿಚಾರದಲ್ಲಿ ಅನುಮಾನ ದೇವಳದ ನಿಧಿ ಹಾಗೂ ಭಕ್ತರು ನೀಡಿದ ಠೇವಣಿ ಹಣದ ದುರ್ಬಳಕೆ ಮತ್ತು ಅವ್ಯವಹಾರ ನಡೆದಿರುವ ಬಗ್ಗೆ ಭಕ್ತಾದಿಗಳಲ್ಲಿ ತೀವ್ರ ಗುಮಾನಿ ವ್ಯಕ್ತವಾಗಿದೆ.ಅಸ್ಪಷ್ಟ ಮಾಹಿತಿಗೆ ಆಕ್ರೋಶ: ಆಡಳಿತ ಸಮಿತಿಯು ನೀಡಿದ ನೆಪಮಾತ್ರದ, ಅಸ್ಪಷ್ಟ ಸಮಜಾಯಿಷಿಯಿಂದ ಅಸಮಾಧಾನಗೊಂಡ ಭಕ್ತರು ಆಡಳಿತ ಮಂಡಳಿಯ ವಿರುದ್ಧ ತೀವ್ರವಾಗಿ ತಿರುಗಿಬಿದ್ದರು. ದೇವಳದ ಪ್ರತಿಯೊಂದು ಪೈಸೆ ಲೆಕ್ಕವನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು ಹಾಗೂ ಠೇವಣಿ ಹಣದ ಪೂರ್ಣ ವಿವರ ನೀಡಬೇಕೆಂದು ನೆರೆದಿದ್ದ ಜನಸ್ತೋಮ ಒಕ್ಕೊರಲಿನಿಂದ ಪಟ್ಟು ಹಿಡಿಯಿತು.ದೇವಳದ ಆಡಳಿತದಲ್ಲಿ ತಕ್ಷಣವೇ ಸಂಪೂರ್ಣ ಪಾರದರ್ಶಕತೆ ತರಬೇಕು ಮತ್ತು ಅನುಮಾನಾಸ್ಪದ ಹಣಕಾಸಿನ ವಹಿವಾಟಿನ ಕುರಿತು ಸೂಕ್ತ ತನಿಖೆಯಾಗಬೇಕು ಎಂದು ಭಕ್ತಾದಿಗಳು ಎಚ್ಚರಿಸಿದ್ದಾರೆ.
ಪಂಜ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಭಕ್ತರ ಸಭೆ | ಠೇವಣಿ ವಿಚಾರದಲ್ಲಿ ಆಸ್ಪಷ್ಟ ಮಾಹಿತಿ,ಭಕ್ತರ ಆಕ್ರೋಶ,ಸ್ಪಷ್ಟಣೆಗೆ ಪಟ್ಟು
Savistara
Bureau Report
[t4b-ticker]










































