ವಿಶ್ವ ಹಿಂದೂ ಪರಿಷತ್ ಬಜರಂಗದಳ ಸುಳ್ಯ ಪ್ರಖಂಡ, ಸುಳ್ಯ ನಗರ ಇದರ ಆಶ್ರಯದಲ್ಲಿ ಬೃಹತ್ ಪಂಜಿನ ಮೆರವಣಿಗೆಯು ಶಾಸ್ತ್ರಿ ವೃತ್ತದಿಂದ ಹೊರಟು ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಆ.14 ರಂದು ರಾತ್ರಿ ಸಮಾಪನಗೊಂಡಿತು.ಶಾಸ್ತ್ರಿ ವೃತ್ತದಿಂದ ಹೊರಟ ಪಂಜಿನ ಮೆರವಣಿಗೆಗೆ ನಾವೂರಿನ ಕಲ್ಕುಡ ದೈವಸ್ಥಾನದ ಆಡಳಿತ ಧರ್ಮದರ್ಶಿಗಳಾದ ಪಿ.ಕೆ ಉಮೇಶ ರವರು ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು.
ಬಳಿಕ ಮೆರವಣಿಗೆಯು ನಗರದ ಮುಖ್ಯ ರಸ್ತೆಯಲ್ಲಿ ಗಾಂಧಿನಗರದ ತನಕ ಸಾಗಿ ಬಂದು ಹಿಂತಿರುಗಿ ರಥಬೀದಿಯಾಗಿ ಬಂದು ಚೆನ್ನಕೇಶವ ದೇವಸ್ಥಾನದ ಎದುರಿನಲ್ಲಿಸಮಾಪನಗೊಂಡಿತು.ದೇವಸ್ಥಾನದರಾಜಗೋಪುರದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಹಿಂದೂ ಮುಖಂಡರಾದ ಮುರಳಿಕೃಷ್ಣ ಹಸಂತಡ್ಕ ರವರು ಮಾತನಾಡಿ “ಎರಡು ಸಾವಿರ ವರ್ಷಗಳ ಹಿಂದಿನ ಇತಿಹಾಸ ನೋಡಿದಾಗ ಇಡೀ ಜಗತ್ತೆ ಭಾರತವಾಗಿತ್ತು. ಇಂದಿಗೂ ಅನ್ಯ ದೇಶದಲ್ಲಿ ಪೂರಕವಾದ ಸಾಕ್ಷಿಗಳು ಗೋಚರವಾಗುತ್ತಿದೆ. ಅಹಿಂಸಾ ಚಳುವಳಿಯನ್ನು ಗಾಂಧೀಜಿಯವರು ಮಾಡಿದವರು. ಆದರೆ ಕ್ರಾಂತಿಕಾರಿ ವೀರರು ಸಾಕಷ್ಟು ಮಂದಿ ಬಲಿದಾನವನ್ನು ಮಾಡಿದ್ದಾರೆ. ಜ್ಯೋತಿ ಉರಿಸಿದ ಪಂಜು ಮುಂದೆ 365 ದಿನಗಳು ರಾಷ್ಟ್ರ ಜಾಗೃತಿ ಜ್ಯೋತಿಯಂತೆ ಹೃದಯದ ಮಂದಿರದಲ್ಲಿ ಪ್ರತಿ ಮನೆ, ಮನೆಗಳಲ್ಲಿ ಬೆಳಗುತ್ತಿರಬೇಕು. ಸಂಘಟಿತ ಶಕ್ತಿಯಿಂದ ಅಖಂಡ ಭಾರತ ನಿರ್ಮಾಣದ ಸಂಕಲ್ಪ ಮಾಡೋಣ. ಭಾರತ ವಿಶ್ವ ಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ದಿಕ್ಕೂಚಿ ಭಾಷಣ ಮಾಡಿದರು.
ಈ ಸಂದರ್ಭದಲ್ಲಿ ಭೂ ಸೇನೆಯ ನಿವೃತ್ತ ಯೋಧರಾದ ಗುರುಪ್ರಸಾದ್ ರೈ ಪೇರಾಲುಗುತ್ತು ರವರನ್ನು ಗೌರವಿಸಿ ಸನ್ಮಾನಿಸಲಾಯಿತು.
ಸುಳ್ಯ ನಗರದ ಸಂಘಟನೆಯ ಸಂಚಾಲಕರಾದ ಉಪೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿದ್ದರು.ಬಜರಂಗದಳ ಜಿಲ್ಲಾ ಸಾಪ್ತಾಹಿಕ್ ರೂಪೇಶ್ ಪೂಜಾರಿಮನೆ, ವ್ಯವಸ್ಥಾ ಪ್ರಮುಖ್ ರಾಜೇಶ್ ಕಲ್ಲುಮುಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಮುಖರಾದಹರೀಶ್ ಕಂಜಿಪಿಲಿ, ಪಿ.ಕೆ.ಉಮೇಶ, ವಿನಯಕುಮಾರ್ ಕಂದಡ್ಕ ಸುನಿಲ್ ಕೇರ್ಪಳ, ರಜತ್ ಅಡ್ಕಾರ್, ಕೇಶವ ನಾಯಕ್, ಕೌಶಲ್, ಶ್ರೀಮತಿ ಶಶಿಕಲಾ ನೀರಬಿದಿರೆ ಸೇರಿದಂತೆ ದುರ್ಗಾವಾಹಿನಿಯ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನೂರಾರು ಕಾರ್ಯಕರ್ತರು ಮಳೆಯನ್ನು ಲೆಕ್ಕಿಸದೆ ಪಂಜನ್ನು ಹಿಡಿದು ಮೆರವಣಿಗೆಯಲ್ಲಿ ಸಾಗಿ ಬಂದರು. ಶ್ರೀಮತಿ ಶುಭಾ ಕಾಡುತೋಟ ಪ್ರಾರ್ಥಿಸಿದರು. ನವೀನ್ ಎಲಿಮಲೆ ಅಖಂಡ ಭಾರತ ಸಂಕಲ್ಪ ಪ್ರತಿಜ್ಞಾ ವಿಧಿ ನೆರವೇರಿಸಿದರು. ಲುಕೇಶ್ ಸನ್ಮಾನ ಪತ್ರ ವಾಚಿಸಿದರು.ರಾಜೇಶ್ ಕಲ್ಲುಮುಟ್ಟುಸ್ವಾಗತಿಸಿದರು.ವರ್ಷಿತ್ ಚೊಕ್ಕಾಡಿ ವಂದಿಸಿದರು.ಗಿರೀಶ್ ಕುಂಟಿನಿ ಕಾರ್ಯಕ್ರಮ ನಿರೂಪಿಸಿದರು.













































