ವಿಧಾನಮಂಡಲ ಅಧಿವೇಶನ: ವಿಧಾನಸಭೆ ಬಾಗಿಲು, ಸಿಎಂ ಪೀಠಕ್ಕೆ ನಮಸ್ಕರಿಸಿದ ಶಿವಕುಮಾ‌ರ್

Picture of Savistara

Savistara

Bureau Report

ಬೆಂಗಳೂರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕಮೊದಲ ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್, ವಿಧಾನಸಭೆ ಪ್ರವೇಶಿಸುವ ಮುನ್ನ ಬಾಗಿಲಿಗೆ ಹಾಗೂ ಮುಖ್ಯಮಂತ್ರಿಯವರ ಪೀಠಕ್ಕೆ ನಮಸ್ಕರಿಸಿದರು.

ಅಧಿವೇಶನದ ಕಲಾಪದಲ್ಲಿ ಭಾಗವಹಿಸಲು ವಿಧಾನಸೌಧಕ್ಕೆ ಆಗಮಿಸಿದ ಅವರು, ಸದನದ ಒಳ ಪ್ರವೇಶಿಸುವ ಬಾಗಿಲಿಗೆ ಶಿರಬಾಗಿ ನಮಸ್ಕರಿಸಿದರು. ಬಳಿಕ ಮುಖ್ಯಮಂತ್ರಿಯವರಿಗೆ ಮೀಸಲಾದ ಆಸನದ ಬಳಿಗೆ ತೆರಳಿ, ಆ ಪೀಠಕ್ಕೆ ಭಕ್ತಿಯಿಂದ ನಮಸ್ಕಾರ ಸಲ್ಲಿಸಿ ತಮ್ಮ ಜವಾಬ್ದಾರಿಯ ಮೇಲಿನ ಗೌರವವನ್ನು ಪ್ರದರ್ಶಿಸಿದರು.

ಈ ವಿಶೇಷ ಕ್ಷಣದ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್‌’ ನಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿರುವ ಶಿವಕುಮಾ‌ರ್ ಅವರು, ‘ಕೋಟ್ಯಂತರ ಕನ್ನಡಿಗರ ಆಶೀರ್ವಾದದೊಂದಿಗೆ, ಪ್ರಜಾಪ್ರಭುತ್ವದ ಆಶಯಕ್ಕೆ ಶಿರಬಾಗಿ ಸದನಕ್ಕೆ ಮುಖ್ಯಮಂತ್ರಿಯಾಗಿ ನನ್ನ ಮೊದಲ ಹೆಜ್ಜೆ’ ಎಂದು ಬರೆದುಕೊಂಡು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.

ಶಿವಕುಮಾ‌ರ್ ಅವರ ಈ ನಡೆ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ನಾಡಿನ ಜನತೆಯ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡುವ ಸಂಕಲ್ಪವನ್ನು ಇದು ಬಿಂಬಿಸುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

[t4b-ticker]
error: Content is protected !!