ಜನ ವಿಶ್ವಾಸವೇ ಆರ್‌ಎಸ್‌ಎಸ್‌ಗೆ ಶಕ್ತಿ, ನೋಂದಣಿ ಅಗತ್ಯವಿಲ್ಲ: ಬಿ.ಎಲ್. ಸಂತೋಷ್

Picture of Savistara

Savistara

Bureau Report

ಬೆಂಗಳೂರು: ಅಸ್ತಿತ್ವ ಸಾಬೀತುಪಡಿಸಲು ರಾಷ್ಟ್ರೀಯಸ್ವಯಂಸೇವಕ ಸಂಘಕ್ಕೆ (ಆರ್‌ಎಸ್‌ಎಸ್) ನೋಂದಣಿ ಅಗತ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್. ಸಂತೋಷ್ ಹೇಳಿದ್ದಾರೆ.

ಆರ್‌ಎಸ್‌ಎಸ್‌ ನೋಂದಣಿ ಮಾಡಿಸಬೇಕು ಎಂಬ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ಸಂತೋಷ್, ಆರ್‌ಎಸ್ಎಸ್ ಲಕ್ಷಾಂತರ ಜನರ ವಿಶ್ವಾಸದ ಮೂಲಕ ಕಾರ್ಯನಿರ್ವಹಿಸುತ್ತಿರುವ ಸಂಘಟನೆ ಎಂದು ಹೇಳಿದ್ದಾರೆ.ಬೆಂಗಳೂರಿನಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ “ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಿಭಜನೆಯ ಸಂದರ್ಭದಲ್ಲಿ ಆರ್‌ಎಸ್‌ಎಸ್ ಹಿಂದೂಗಳ ಪರವಾಗಿ ನಿಂತಿತ್ತು ಎಂದು ಪ್ರತಿಪಾದಿಸಿದರು.

“ಆಗಲೂ ಆರ್‌ಎಸ್‌ಎಸ್ ನೋಂದಣಿಯಾಗಿರಲಿಲ್ಲ. ಇಂದಿಗೂ ನೋಂದಣಿಯಾಗಿಲ್ಲ. ನೋಂದಣಿಯಿಂದ ಸಂಘಟನೆಯ ಅಸ್ತಿತ್ವ ನಿರ್ಧಾರವಾಗುವುದಿಲ್ಲ. ಲಕ್ಷಾಂತರ ಜನರ ವಿಶ್ವಾಸದ ಮೂಲಕ ಅದು ಕಾರ್ಯನಿರ್ವಹಿಸುತ್ತಿದೆ’ ಎಂದು ಅವರು ಹೇಳಿದರು.

ಭಾರತದ ಸ್ವಾತಂತ್ರ್ಯವು ಕೇವಲ ಉಪ್ಪಿನ ಸತ್ಯಾಗ್ರಹ ಅಥವಾ ಚರಕದಿಂದ ಬಂದದ್ದಲ್ಲ. ಸಾವಿರಾರು ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗದಿಂದ ಸ್ವಾತಂತ್ರ್ಯ ದೊರೆಯಿತು ಎಂದು ಸಂತೋಷ್ ಹೇಳಿದರು.ಮದನ್‌ಲಾಲ್ ಧಿಂಗ್ರಾ, ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರಂತಹ ಕ್ರಾಂತಿಕಾರಿಗಳ ತ್ಯಾಗವನ್ನು ಸ್ಮರಿಸಬೇಕು ಎಂದರು.

[t4b-ticker]
error: Content is protected !!