ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕರೆಯಂತೆ 80ನೇ ಸ್ವಾತಂತ್ರ್ಯ ಉತ್ಸವದ ಅಂಗವಾಗಿ ಆಗಸ್ಟ್ 13ರಿಂದ 15ರ ತನಕ ಎಲ್ಲಾ ನಾಗರಿಕರು ನಮ್ಮ ನಮ್ಮ ಮನೆಗಳಲ್ಲಿ, ವಾಣಿಜ್ಯ ಕಟ್ಟಡಗಳಲ್ಲಿ ರಾಷ್ಟ್ರದ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಹಂಚಿಕೊಳ್ಳಬೇಕಾಗಿ ಮಾಜಿ ನಗರ ಪಂಚಾಯತ್ ಅಧ್ಯಕ್ಷ ಹಾಗೂ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ ವಿನಂತಿಸಿಕೊಂಡಿದ್ದಾರೆ. ಈ ದೇಶದ ಸ್ವಾತಂತ್ರ್ಯ ಕ್ಕೋಸ್ಕರ ಸಾವಿರಾರು ಜನ ಬಲಿದಾನ ಮಾಡಿದ್ದಾರೆ. ಗಳಿಸಿಕೊಂಡ ಸ್ವಾತಂತ್ರ್ಯ ವನ್ನು ಉಳಿಸಿಕೊಳ್ಳುವುದಕ್ಕಾಗಿ, ದೇಶದ ಅಖಂಡತೆಯನ್ನು ಕಾಪಾಡುವುದಕ್ಕಾಗಿ ನೂರಾರು ವೀರ ಸೈನಿಕರು ಪ್ರಾಣಾರ್ಪಣೆ ಮಾಡಿದ್ದಾರೆ. ಅವರೆಲ್ಲರನ್ನು ನೆನಪಿಸಿಕೊಂಡು ದೇಶದ ಸಮಗ್ರತೆ ಹಾಗೂ ಅಖಂಡತೆಗಾಗಿ ಸಂಕಲ್ಪ ತೊಡುವುದು ನಾಗರಿಕರೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಮ್ಮ ದೇಶದ ಗೌರವದ ಸಂಕೇತವಾದ ರಾಷ್ಟ್ರದ್ವಜವನ್ನು ಮನೆಮನೆಗಳಲ್ಲಿ ಹಾರಿಸುವ ಮೂಲಕ ಸ್ವಾತಂತ್ರ್ಯದ ಸಂಭ್ರಮವನ್ನು ಆಚರಿಸಬೇಕಾಗಿ ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.
ಆಗಸ್ಟ್ 13ರಿಂದ 15- ಎಲ್ಲಾ ನಾಗರಿಕರು ರಾಷ್ಟ್ರದ್ವಜ ಹಾರಿಸಲು ಕರೆ
Savistara
Bureau Report
[t4b-ticker]







































