ಹೆಚ್ಚು ಕಾಲ ಆಡುವುದರ ಬಗ್ಗೆ ಖಚಿತವಿಲ್ಲ: ತಂದೆಯ ನಿಧನದ ನಂತರ ಮೆಸ್ಸಿ ಹೇಳಿಕೆ

Picture of Savistara

Savistara

Bureau Report

ಬ್ಯೂನಸ್ ಐರಿಸ್ (ಅರ್ಜೆಂಟೀನಾ): ಇನ್ನೂ ಹೆಚ್ಚು ಕಾಲಫುಟ್‌ಬಾಲ್ ಆಟವನ್ನು ಮುಂದುವರಿಸುವ ಬಗ್ಗೆ ಅನುಮಾನಗಳಿವೆ ಎಂದು ಲಯೊನೆಲ್ ಮೆಸ್ಸಿ ಹೇಳಿದ್ದಾರೆ.

2022ರ ಫಿಫಾ ವಿಶ್ವಕಪ್ ಗೆಲುವಿನ ರೂವಾರಿಯಾಗಿರುವ ಅರ್ಜೆಂಟೀನಾದ ಸೂಪರ್‌ಸ್ಟಾರ್ ಲಯೊನೆಲ್ ಮೆಸ್ಸಿ ಅವರ ತಂದೆ ಜಾರ್ಜ್ ಮೆಸ್ಸಿ ಕಳೆದ ವಾರ ನಿಧನರಾಗಿದ್ದರು. ಅವರಿಗೆ 68 ವರ್ಷವಾಗಿತ್ತು.“ನೀವು ಇಲ್ಲದೆ ನಾನು ಏನು ಮಾಡುತ್ತೇನೆಂದು ನನಗೆ ಗೊತ್ತಿಲ್ಲ, ಮುಂದೆ ಹೇಗೆ ಸಾಗಬೇಕೆಂದು ತಿಳಿಯುತ್ತಿಲ್ಲ. ನಾನು ಕೇವಲ ಫುಟ್‌ಬಾಲ್ ಆಡಿದೆ ಮತ್ತು ಈಗ ಇದನ್ನು ಇನ್ನು ಹೆಚ್ಚು ಕಾಲ ಮುಂದುವರಿಸುವ ಬಗ್ಗೆ ನನಗೆ ಗಂಭೀರ ಅನುಮಾನಗಳಿವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

2026ರ ಫಿಫಾ ವಿಶ್ವಕಪ್ ವೇಳೆ, ನಾವು ಫೈನಲ್‌ಗೆ ತಲುಪುತ್ತೇವೆ. ನೀವು ಇಲ್ಲಿಗೆ ಪ್ರವಾಸ ಮಾಡಬಹುದು ಎಂದು ನಾನು ನಿಮಗೆ ಹೇಳುತ್ತಲೇ ಇದ್ದೆ. ನಾವು ಫೈನಲ್ ತಲುಪಿದೆವು, ಆದರೆ ನೀವು ಅಲ್ಲಿರಲು ಸಾಧ್ಯವಾಗಲಿಲ್ಲ. ಅದನ್ನು ಗೆದ್ದು ನಿಮ್ಮ ಬಳಿಗೆ ತಂದು ಹೊಸ ಕಪ್ ತೋರಿಸಬೇಕೆಂದು ಬಯಸಿದ್ದೆ. ಆದರೆ ನನ್ನಿಂದ ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.

ನ್ಯೂಜೆರ್ಸಿಯಲ್ಲಿ ನಡೆದ ಫೈನಲ್‌ನಲ್ಲಿ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಸ್ಪೇನ್ ವಿರುದ್ಧ 1-0 ಅಂತರದಲ್ಲಿ ಸೋಲು ಅನುಭವಿಸಿತ್ತು.ಲಯೊನೆಲ್ ಮೆಸ್ಸಿ ಅವರು ಮೇಜರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಇಂಟರ್ ಮಿಯಾಮಿ ತಂಡದೊಂದಿಗೆ 2028ರ ಸೀಸನ್ ಕೊನೆಯವರೆಗೆ ಒಪ್ಪಂದ ಹೊಂದಿದ್ದಾರೆ. ಹಾಗಾಗಿ, ಅಲ್ಲಿಯವರೆಗೆ ಆಡುವ ನಿರೀಕ್ಷೆಯಿದೆ.

[t4b-ticker]
error: Content is protected !!