ರೇಣುಕ ಸ್ವಾಮಿ ಕೊಲೆ ಪ್ರಕರಣ: ಪವಿತ್ರಾ ಗೌಡ ಮನೆ ಊಟಕ್ಕೆ ಹೈಕೋರ್ಟ್ ಕೊಕ್

Picture of Savistara

Savistara

Bureau Report

ಬೆಂಗಳೂರು: ಚಿತ್ರದುರ್ಗದ ರೇಣುಕ ಸ್ವಾಮಿ ಕೊಲೆ ಪ್ರಕರಣದಆರೋಪಿಗಳಾಗಿ ಸದ್ಯ ಜೈಲಿನಲ್ಲಿರುವ ಪವಿತ್ರಾ ಗೌಡ, ನಾಗರಾಜ್‌ ಮತ್ತು ಲಕ್ಷ್ಮಣ್ ಅವರಿಗೆ ವಾರಕೊಮ್ಮೆ ಮನೆಯಿಂದ ಊಟ ತರಿಸಿಕೊಳ್ಳಲು ಅನುಮತಿ ನೀಡಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಸಂಬಂಧ ನಗರದ 57ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ 2026ರ ಜನವರಿ 12ರಂದು ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದೆ.”ವಿಚಾರಣಾಧೀನ ಕೈದಿಗಳಿಗೆ ಮನೆ ಊಟ ಒದಗಿಸಲು ನಿಷೇಧವೇನೂ ಇಲ್ಲ. ಆದರೆ, ಜೈಲು ನಿಯಮಗಳು ಮತ್ತು ಪ್ರಕ್ರಿಯೆ ಅನುಸಾರ ಮಾತ್ರವೇ ಮನೆ ಊಟ ಪೂರೈಸಬಹುದಾಗಿದೆ. ಆದರೆ, ಅದಕ್ಕೆ ನಿಖರ ವೈದ್ಯಕೀಯ ವರದಿ ಅತ್ಯಗತ್ಯ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.”ತಾರತಮ್ಯದಿಂದ ಕೂಡಿದ ಇಂತಹ ವಿನಾಯಿತಿ ನೀಡುವುದು ಜೈಲು ನಿರ್ವಹಣೆಯಲ್ಲಿ ಗೊಂದಲಗಳಿಗೆ ನಾಂದಿಯಾಗಲಿದೆ. ನಾಳೆ ಇತರೆ ಕೈದಿಗಳೂ ಇದೇ ವಿನಾಯಿತಿಗೆ ಅರ್ಹರಾಗುತ್ತಾರೆ. ಹಾಗಾಗಿ, ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಲಾಗುತ್ತಿದೆ. ಆದರೆ, ಅರ್ಜಿದಾರರು ಪೂರಕ ವೈದ್ಯಕೀಯ ದಾಖಲೆಗಳಿದ್ದರೆ ಜೈಲು ನಿಯಮಗಳ ಅನ್ವಯ ಮನೆ ಊಟ ಪೂರೈಕೆಗೆ ಮನವಿ ಮಾಡುವ ಸ್ವಾತಂತ್ರ್ಯ ಹೊಂದಿದ್ದಾರೆ” ಎಂದು ನ್ಯಾಯಪೀಠ ಆದೇಶದಲ್ಲಿ ವಿವರಿಸಿದೆ.

ಸುತ್ತೋಲೆ: “ಕೈದಿಗಳ ಆಹಾರದ ಬಗ್ಗೆ ಅಹವಾಲುಗಳನ್ನುದಾಖಲಿಸಲು ವ್ಯವಸ್ಥೆ ಇಲ್ಲದಿದ್ದರೆ, ಅದನ್ನು ಜಾರಿಗೊಳಿಸಬೇಕು. ಕೈದಿಗಳಿಗೆ ತಯಾರಿಸುವ ಆಹಾರದ ಗುಣಮಟ್ಟದ ಕುರಿತು ಮೇಲಿಂದ ಮೇಲೆ ನಿಗದಿತ ವೈದ್ಯಾಧಿಕಾರಿ ಪರಿಶೀಲನೆ ನಡೆಸಿ ದಾಖಲೆ ಸಲ್ಲಿಸಬೇಕು. ಈ ನಿರ್ದೇಶನಗಳ ಅನುಪಾಲನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಬೇಕು” ಎಂದು ನ್ಯಾಯಪೀಠ ನಿರ್ದೇಶಿಸಿದೆ.

[t4b-ticker]
error: Content is protected !!