ದಿನ ಭವಿಷ್ಯ, ಮಾರ್ಚ್ 5, 2026: ಸಂಬಂಧದಲ್ಲಿ ಒಡಕು ಮೂಡುವ ಸಾಧ್ಯತೆ; ಎಚ್ಚರ

Picture of Savistara

Savistara

Bureau Report

ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ ಶರದೃತು, ಫಾಲ್ಗುಣ ಮಾಸದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಯವರಿಗೆ ಹೇಗಿದೆ, ಅವರ ಭವಿಷ್ಯ ಯಾವ ರೀತಿ ಇರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಮೇಷ ರಾಶಿ:

ಇಂದು ಉತ್ತರ ಫಾಲ್ಗುಣ ನಕ್ಷತ್ರ ಇದ್ದು, ಇದರ ಅಧಿಪತಿ ರವಿ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಮಧ್ಯಾಹ್ನ ಹಣಕಾಸಿನ ಸಮಸ್ಯೆಗಳು ಇರಬಹುದು. ಮಧ್ಯಾಹ್ನ ಬಳಿಕ ಇದು ಪರಿಹಾರವಾಗಲಿದೆ.

ವೃಷಭ ರಾಶಿ:

ಇಂದು ವೃಷಭ ರಾಶಿಯವರಿಗೆ ಮಧ್ಯಾಹ್ನವರೆಗೂ ಮನೆಯ ತಾಪತ್ರಯಗಳು ಹೆಚ್ಚಾಗಿ ಕಾಡುವ ಸಾಧ್ಯತೆ ಇದೆ. ತಾಯಿಯ ವಿಚಾರ ಹಾಗೂ ಆಸ್ತಿ ಪಾಸ್ತಿ ವಿಚಾರವಾಗಿ ಯೋಚನೆಗಳು ಕಾಡಬಹುದು. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ನೀವು ಬುದ್ಧಿವಂತಿಕೆಯನ್ನು ಬಳಸಿ ಯಶಸ್ಸು ಕಾಣಬಹುದು.

ಮಿಥುನ ರಾಶಿ:

ಮಿಥುನ ರಾಶಿಯಲ್ಲಿರುವವರಿಗೆ ಮಧ್ಯಾಹ್ನವರೆಗೂ ಉತ್ತಮವಾಗಿದ್ದು ಎಲ್ಲ ಕೆಲಸ ಕಾರ್ಯದಲ್ಲಿ ಯಶಸ್ಸು ಕಾಣುತ್ತೀರಿ. ಮಧ್ಯಾಹ್ನ ಬಳಿಕ ನೆಮ್ಮದಿ ಇಲ್ಲದೆ ಬೇರೆಯವರಿಂದ ಕಿರುಕುಳ ಉಂಟಾಗಬಹುದು‌.

ಕಟಕ ರಾಶಿ:

ಕಟಕ ರಾಶಿಯವರು ಮಧ್ಯಾಹ್ನವರೆಗೂ ಸಂಸಾರದ ತಾಪತ್ರಯ ಬಗ್ಗೆ ಗಮನ ನೀಡಬೇಕಾಗುತ್ತದೆ. ಮಧ್ಯಾಹ್ನ ಬಳಿಕ ನಿಮ್ಮ ಬಂಧು- ಬಳಗದವರ ಜತೆ ನೆಮ್ಮದಿಯಿಂದ ದಿನ ಕಳೆಯಬಹುದು.

ಸಿಂಹ ರಾಶಿ:

ಸಿಂಹ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಎಲ್ಲ ಕೆಲಸವೂ ನಿಮ್ಮ ಪರವಾಗಿ ನಡೆಯುತ್ತವೆ. ಮಧ್ಯಾಹ್ನ ಬಳಿಕ ನಿಮ್ಮ ಕುಟುಂಬದ ಜತೆ ಸಮಯ ಕಳೆಯುತ್ತೀರಿ.

ಕನ್ಯಾ ರಾಶಿ:

ಕನ್ಯಾ ರಾಶಿಯವರ ಮನಸ್ಸಿಗೆ ಮಧ್ಯಾಹ್ನವರೆಗೂ ನೆಮ್ಮದಿ ಇರುವುದಿಲ್ಲ. ಆದರೆ ಮಧ್ಯಾಹ್ನ ಬಳಿಕ ಉತ್ತಮ ಮಾರ್ಗದರ್ಶನ ಸಿಗಲಿದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ಮಧ್ಯಾಹ್ನವರೆಗೆ ಇಷ್ಟಾರ್ಥ ಸಿದ್ಧಿಯಾಗಲಿದೆ. ಆದರೆ ಮಧ್ಯಾಹ್ನ ಬಳಿಕ ಮುಖ್ಯವಾದ ಸಂಬಂಧದಲ್ಲಿ ಒಡಕು ಉಂಟಾಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಮಧ್ಯಾಹ್ನವರೆಗೂ ಕಾರ್ಯಕ್ಷೇತ್ರದಲ್ಲಿ ಜವಾಬ್ದಾರಿ ಜಾಸ್ತಿಯಾಗಿ ತಲೆಬಿಸಿಯಾಗಬಹುದು. ಮಧ್ಯಾಹ್ನ ಬಳಿಕ ಮನಸ್ಸಿಗೆ ನೆಮ್ಮದಿ ಇದ್ದು, ಇಷ್ಟಾರ್ಥ ಸಿದ್ಧಿಯಾಗಲಿದೆ.

ಧನಸ್ಸು ರಾಶಿ:.

ಧನಸ್ಸು ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ತೊಂದರೆಗಳು ಕಾಣಿಸಿಕೊಳ್ಳಬಹುದು. ಮಧ್ಯಾಹ್ನ ಬಳಿಕ ಕಾರ್ಯ ಕ್ಷೇತ್ರದಲ್ಲಿ ಜಯ ಕಾಣಬಹುದು.

ಮಕರ ರಾಶಿ:

ಮಕರ ರಾಶಿಯವರಿಗೆ ಮಧ್ಯಾಹ್ನವರೆಗೂ ನಾನಾ ತೊಂದರೆ ಕಾಡಬಹುದು. ಮಧ್ಯಾಹ್ನ ಅದೃಷ್ಟ ಕಂಡು ಬರಲಿದ್ದು, ಮನಸ್ಸಿಗೆ ನೆಮ್ಮದಿ ಇರಲಿದೆ.

ಕುಂಭರಾಶಿ:

ಈ ರಾಶಿಯವರಿಗೆ ಮಧ್ಯಾಹ್ನವರೆಗೆ ಉತ್ತಮ ಪಲ ಗೋಚರವಾಗಲಿದೆ. ಮಧ್ಯಾಹ್ನ ಬಳಿಕ ಸ್ವಲ್ಪ ಕಿರಿ ಕಿರಿ ಉಂಟಾಗಬಹುದು.

ಮೀನ ರಾಶಿ:

ಮೀನ ರಾಶಿಯವರಿಗೆ ಮಧ್ಯಾಹ್ನವರೆಗೆ ಯಾವುದೇ ಸಮಸ್ಯೆ ಎದುರಾಗಲಾರದು. ಮಧ್ಯಾಹ್ನ ಬಳಿಕ ಮನೆಯವರ ಜತೆ ಉತ್ತಮ ಸಮಯ ಕಳೆಯಲಿದ್ದೀರಿ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!