ದಿನ ಭವಿಷ್ಯ, ಮಾರ್ಚ್ 6, 2026: ಇಂದು ಮುಖ್ಯವಾದ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ

Picture of Savistara

Savistara

Bureau Report

ವಿಶ್ವಾವಸು ನಾಮ ಸಂವತ್ಸರದ, ಉತ್ತರಾಯಣ, ಶರದೃತು, ಫಾಲ್ಗುಣ ಮಾಸೆ, ಹಸ್ತ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ‌ ರಾಶಿಗಳ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಮೇಷ ರಾಶಿ:

ಇಂದು ಹಸ್ತ ನಕ್ಷತ್ರ ಇದ್ದು, ಇದರ ಅಧಿಪತಿ ಚಂದ್ರ. ಹೀಗಾಗಿ ಹೆಚ್ಚಿನವರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಮೇಷ ರಾಶಿಯವರಿಗೆ ಅತೀ ಉತ್ತಮವಾದ ದಿನವಾಗಲಿದೆ.‌ ಸಾಮಾಜಿಕ ಚಟುವಟಿಕೆಯಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ.

ವೃಷಭ ರಾಶಿ:

ವೃಷಭ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಹಣಕಾಸಿನ ವಿಚಾರವಾಗಿ ತೊಂದರೆ ಕಾಡಬಹುದು. ಆದ್ದರಿಂದ ಇಂದು ಯಾವುದೇ ವ್ಯವಹಾರ ಬೇಡ‌. ಮಕ್ಕಳ ಜತೆ ಭಾವುಕತೆಯಿಂದ ವ್ಯವಹಾರ ಮಾಡುವುದು ಅಗತ್ಯ.

ಮಿಥುನ ರಾಶಿ:

ಮಿಥುನ ರಾಶಿಯಲ್ಲಿರುವವರಿಗೆ ಸಂಸಾರ, ಮನೆಯ ಬಗ್ಗೆ ಯೋಚನೆಗಳು ಕಾಡುತ್ತಿರುತ್ತವೆ. ಆಸ್ತಿ ಪಾಸ್ತಿ ವಿಚಾರವಾಗಿಯೂ ನಿಮಗೆ ಸಮಸ್ಯೆ ಕಾಡಬಹುದು. ಹಾಗಾಗಿ ಮುಖ್ಯ ನಿರ್ಧಾರ ಬೇಡ.

ಕಟಕ ರಾಶಿ:

ಕಟಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮಾಧ್ಯಮದಲ್ಲಿ ಕೆಲಸ ಮಾಡುವವರಿಗೆ ಉತ್ತಮ ದಿನವಾಗಲಿದೆ.

ಸಿಂಹ ರಾಶಿ:

ಸಿಂಹ ರಾಶಿಯವರ ಕುಟುಂಬದಲಿ ಮುಖ್ಯ ಘಟನೆ ನಡೆಯಲಿದೆ. ಹಾಗಾಗಿ ಕುಟುಂಬದ ಜತೆ ಸಮಯ ಕಳೆಯಬಹುದು.

ಕನ್ಯಾ ರಾಶಿ:.

ಕನ್ಯಾ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಹಿಂದಿನ ಎರಡು ಮೂರು ದಿನದಲ್ಲಿ ಇದ್ದ ನೋವೆಲ್ಲ ಮಾಯವಾಗಲಿದೆ.

ತುಲಾ ರಾಶಿ:

ತುಲಾ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮುಖ್ಯವಾದ ಯಾವುದೇ ನಿರ್ಧಾರಗಳು ಬೇಡ. ಪ್ರೀತಿ ಪಾತ್ರರಿಂದ ಯಾವುದೇ ಸಹಕಾರ ನಿಮಗೆ ಸಿಗುವುದಿಲ್ಲ.

ವೃಶ್ಚಿಕ ರಾಶಿ:

ವೃಶ್ಚಿಕ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿ ಇದ್ದು ಇಷ್ಟಾರ್ಥ ಸಿದ್ದಿಯಾಗಲಿದೆ. ಧನಾಗಮನದ ಸೂಚನೆ ಇದ್ದು ಮಿತ್ರರಿಂದ ಲಾಭ ಸಿಗಲಿದೆ.

ಧನಸ್ಸು ರಾಶಿ:

ಧನಸ್ಸು ರಾಶಿಯವರಿಗೆ ಉತ್ತಮ ದಿನವಾಗಲಿದೆ. ಕಾರ್ಯಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಜತೆಗೆ ಜವಾಬ್ದಾರಿಗಳು ಹೆಚ್ಚಾಗಿಯೇ ಇರಲಿದೆ.

ಮಕರ ರಾಶಿ:

ಮಕರ ರಾಶಿಯವರಿಗೆ ಉತ್ತಮ ದಿನವಾಗಲಿದೆ. ಇಂದು ಅದೃಷ್ಟ ತರಲಿದ್ದು, ಭಗವಂತನ ಆಶೀರ್ವಾದ ಹಾಗೂ ಹಿರಿಯರ ಆಶೀರ್ವಾದ ಪ್ರಾಪ್ತಿಯಾಗುತ್ತದೆ.

ಕುಂಭರಾಶಿ:.

ಈ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಮುಖ್ಯವಾದ ನಿರ್ಧಾರಗಳು ಬೇಡ. ಪ್ರೀತಿ ಪಾತ್ರರ ಸಹಕಾರ ಇಂದು ನಿಮಗೆ ಸಿಗುವುದಿಲ್ಲ.

ಮೀನ ರಾಶಿ:

ಮೀನ ರಾಶಿಯವರಿಗೆ ಉತ್ತಮ ದಿನವಾಗಲಿದೆ. ದಾಂಪತ್ಯದಲ್ಲಿ ನೆಮ್ಮದಿ ಸಿಗಲಿದ್ದು ಸಂತೋಷವಾಗಿ ದಿನ ಕಳೆಯುತ್ತೀರಿ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!