ಆರೋಗ್ಯ ವ್ಯವಸ್ಥೆಯೇ ರಾಜ್ಯದಲ್ಲಿ ಸ್ತಬ್ದವಾಗುವ ಆತಂಕ | ರಾಜ್ಯಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಒಪಿಡಿ ಸೇವೆ ನಾಳೆಯಿಂದ ಬಂದ್‌?

Picture of Savistara

Savistara

Bureau Report

ಔಷಧ ಪೂರೈಕೆ, ವರ್ಗಾವಣೆ ನೀತಿ, ಹುದ್ದೆಗಳ ಭರ್ತಿಗೆ ವೈದ್ಯರ ಮುಷ್ಕರ ಸರ್ಕಾರದಿಂದ ನಮ್ಮನ್ನು ಯಾರೂ ಸಂಧಾನಕ್ಕೆ ಕರೆದಿಲ್ಲ: ವೈದ್ಯರ ಸಂಘ

ಸಮರ್ಪಕ ಔಷಧ ಪೂರೈಕೆ, ಜೇಷ್ಠತಾ ಪಟ್ಟಿ ಪರಿಷ್ಕರಣೆ, ವರ್ಗಾವಣೆ ನೀತಿ, ಖಾಲಿ ಹುದ್ದೆ ಭರ್ತಿ, ವೈದ್ಯರ ಮೇಲಿನ ಶೋಷಣೆ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ನಾಳೆಯಿಂದ (ಮಾ.11) ಮಾ. 15ರವರೆಗೆ ಹೊರರೋಗಿಗಳ (ಒಪಿಡಿ) ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ.ಈ ಕುರಿತು ಮಾಹಿತಿ ನೀಡಿದ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ কেন। ರವೀಂದ್ರನಾಥ್ ಎಂ.ಮೇಟಿ ಅವರು, ರಾಜ್ಯ ಸರ್ಕಾರಕ್ಕೆ ನಮ್ಮ ಬೇಡಿಕೆಗಳನ್ನು ಒಂದು ತಿಂಗಳ ಹಿಂದೆಯೇ ತಿಳಿಸಿದ್ದೇವೆ. ಈವರೆಗೆ ನಮ್ಮ ಬೇಡಿಕೆಗಳಿಗೆ ಸ್ಪಂದಿಸುವ ಸ್ಪಷ್ಟ ಭರವಸೆ ಸಿಕ್ಕಿಲ್ಲ. ನಾಳೆಯೂ (ಮಾ.10) ನಮ್ಮನ್ನು ಯಾರೂ ಸಂಧಾನಕ್ಕೆ ಕರೆದಿಲ್ಲ. ಹೀಗಾಗಿ ನಮ್ಮ ನಿರ್ಧಾರ ಅಚಲವಾಗಿದ್ದು ಮಾ.11 ರಿಂದ ಒಪಿಡಿ ಸೇವೆ ಬಂದ್ ಸ್ಪಷ್ಟಪಡಿಸಿದರು. ಮಾಡಲಿದ್ದೇವೆ. ಎಂದುರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ఔషధ ಕೊರತೆ ಉಂಟಾಗುತ್ತಿದ್ದು ಸಮರ್ಪಕವಾಗಿ ಔಷಧಿ ಸರಬರಾಜು ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮತಿದ್ದುಪಡಿಮಾಡಬೇಕು.ಇಲಾಖೆಯ ಎಲ್ಲ ವೃಂದಗಳ ಜೈಷ್ಠತಾ ಪಟ್ಟಿಯನ್ನು ಕಾಲ ಕಾಲಕ್ಕೆ ಪ್ರಕಟಿಸಬೇಕು.

ಔಷಧ ಖರೀದಿಸದ ವೈದ್ಯರ ವಿರುದ್ಧ ಕ್ರಮ: ಸರ್ಕಾರ

ಬೆಂಗಳೂರು: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕಹಾಗೂ ಆರೋಗ್ಯ ರಕ್ಷಾ ಸಮಿತಿ (ಎಆರ್‌ಎಸ್) ನಿಧಿಯಿಂದ ಔಷಧ ಖರೀದಿಸಿ ಜನರಿಗೆ ಪೂರೈಸಲು ನಿರಾಕರಿಸುವ ವೈದ್ಯಾಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಔಷಧ ಖರೀದಿ ಮಾಡದಿದ್ದರೆ ಕೆಸಿಎಸ್‌ಆರ್ ನಿಯಮದಡಿ ದುರ್ನಡತೆ ಎಂದು ಪರಿಗಣಿಸಿ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಅವರಿಗೆ ನಿರ್ದೇಶನ ನೀಡಿದೆ.

ಔಷಧ ಪೂರೈಕೆ ಸರ್ಕಾರದ ಹೊಣೆ: ವೈದ್ಯರ ಆಕ್ರೋಶ

ಬೆಂಗಳೂರು: ವೈದ್ಯಾಧಿಕಾರಿಗಳು ಔಷಧ ಖರೀದಿಸಲುನಿರಾಕರಿಸಿದರೆ ಕ್ರಮ ಕೈಗೊಳ್ಳುವಂತೆ ಸರ್ಕಾರ ಆದೇಶಿಸಿದೆ. ಔಷಧ ಖರೀದಿಸಿ ಪೂರೈಸಬೇಕಾಗಿರುವುದು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ (ಕೆಎಸ್‌ಎಂಎಸ್‌ಸಿಎಲ್) ಜವಾಬ್ದಾರಿ. ಅವರು ಖರೀದಿಗೆ ವಿಫಲವಾದಾಗ ಕೆಎಸ್‌ಎಂಎಸ್‌ಸಿಎಲ್ ಅಧಿಕಾರಿಗಳ ಮೇಲೆ ಯಾಕೆ ಈವರೆಗೆ ಕ್ರಮ ಕೈಗೊಂಡಿಲ್ಲ ಎಂದು ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಡಾ.ರವೀಂದ್ರನಾಥ್ ಎಂ.ಮೇಟಿ ಪ್ರಶ್ನಿಸಿದ್ದಾರೆ.

[t4b-ticker]
error: Content is protected !!