ಪುತ್ತೂರಿನಲ್ಲೂ ‘ಗ್ಯಾಸ್ ಟ್ರಬಲ್’ : ಸಿಲಿಂಡರ್ ಗಾಗಿ ಮುಗಿಬಿದ್ದ ಜನತೆ – ಕಟ್ಟಿಗೆ ಸ್ಟಾಕ್..! ಹೊಟೇಲ್ ನಲ್ಲಿ ‘ತವಾ’ ಬಂದ್ – ವಿದ್ ಸ್ಕಿನ್ ಕೋಳಿಯೂ ಸ್ಥಗಿತ..!

Picture of Savistara

Savistara

Bureau Report

ಪುತ್ತೂರು: ಇರಾನ್-ಇಸ್ರೇಲ್-ಅಮೆರಿಕಾಸಂಘರ್ಷದಿಂದ ಉಂಟಾದ ಜಾಗತಿಕ ಎಲ್‌ಪಿಜಿ (ಅಡುಗೆ ಅನಿಲ) ಪೂರೈಕೆಯಲ್ಲಿ ಅಡಚಣೆಯಿಂದ ಪುತ್ತೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ತೀವ್ರವಾಗಿದೆ. ಗಾಸಿಪ್ ಗಳನ್ನು ನಂಬಿ ಮನೆಗಳಿಗೆ ಸಿಲಿಂಡರ್‌ ತರಲು ಜನರು ಏಜೆನ್ಸಿಗಳ ಬಳಿ ಮುಗಿಬಿದ್ದು, ದೀರ್ಘ ಸರತಿ ಸಾಲುಗಳು ಕಂಡುಬಂದಿವೆ. ವಾಹನಗಳ ಸಾಲು ಕಿಮೀ ಗಟ್ಟಲೆ ನಿಂತಿದೆ.

ವಾಣಿಜ್ಯ ಬಳಕೆಯ ಸಿಲಿಂಡರ್‌ಗಳ ಪೂರೈಕೆ ಸ್ಥಗಿತಗೊಂಡಿದ್ದರಿಂದ ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳಲ್ಲಿ ಮೀನಿನ ತವಾ ಐಟಂಗಳನ್ನು ಬಂದ್‌ ಮಾಡಿವೆ. ದೋಸೆ ಚಪಾತಿಯೂ ನಿಲ್ಲುವ ಹಂತಕ್ಕೆ w໐໖໖.ಕೆಲವು ಹೋಟೆಲ್ ಮಾಲೀಕರು ಕಟ್ಟಿಗೆ ತರಿಸಿ ಸ್ಟಾಕ್ ಹಾಕುವ ಪ್ರಯತ್ನದಲ್ಲಿದ್ದಾರೆ.ಗ್ಯಾಸ್‌ ಸಿಲಿಂಡರ್‌ಗಳ ಕೊರತೆ ತೀವ್ರವಾದ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ನಡೆಯಬೇಕಾಗಿದ್ದ ಫುಡ್ ಫೆಸ್ಟ್ ಕಾರ್ಯಕ್ರಮಗಳು ರದ್ದಾಗಿವೆ.

ಕೋಳಿ ಫಾರಂಗಳಲ್ಲಿ (ಪೌಲ್ಟಿ ಫಾರ್ಮ್‌ಗಳಲ್ಲಿ) ವಿದ್ ಸ್ಕಿನ್ ಕೋಳಿಗಳಿಗೆ ಗ್ಯಾಸ್‌ ಉಪಯೋಗವಿರುವುದರಿಂದ ವಿದ್ ಸ್ಕಿನ್ ಮಾಂಸ ಮಾರಾಟ ಸ್ಥಗಿತಗೊಂಡಿದೆ.ಕೇಂದ್ರ ಸರ್ಕಾರವು ಗೃಹ ಬಳಕೆಗೆ ಆದ್ಯತೆ ನೀಡಿ ವಾಣಿಜ್ಯ ಪೂರೈಕೆ ಕಡಿಮೆ ಮಾಡಿದ್ದು, ದೇಶಾದ್ಯಂತ (ಬೆಂಗಳೂರು, ಮಂಗಳೂರು, ಪುತ್ತೂರು ಸೇರಿದಂತೆ) ಈ ಬಿಕ್ಕಟ್ಟು ತಲೆದೋರಿದೆ. ಸರ್ಕಾರ ತುರ್ತು ಅಧಿಕಾರ ಬಳಸಿ ರಿಫೈನರಿಗಳಲ್ಲಿ ಉತ್ಪಾದನೆ ಹೆಚ್ಚಿಸುವಂತೆ ಆದೇಶಿಸಿದೆ, ಆದರೆ ಸದ್ಯಕ್ಕೆ ಪರಿಸ್ಥಿತಿ ಸುಧಾರಣೆಯಾಗಿಲ್ಲ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!