ಸುಳ್ಯ ತಾಲೂಕಿನ ಕನಕಮಜಲಿನ ನರಿಯೂರು ಕುಟುಂಬದ ಧರ್ಮದೈವ ಹಾಗೂ ಸಪರಿವಾರ ದೈವಗಳ ತರವಾಡು ಸೇವಾ ಟ್ರಸ್ಟ್(ರಿ) ವತಿಯಿಂದ ನರಿಯೂರು ತರವಾಡು ಮನೆಯಲ್ಲಿ ಧರ್ಮದೈವ ಶ್ರೀ ಉದ್ರಾಂಡಿ ಮತ್ತು ಶ್ರೀ ಜುಮಾದಿ ಹಾಗೂ ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಮಹೋತ್ಸವ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಮಾ.14 ಮತ್ತು 15 ರಂದು ನಡೆಯಿತು.
ಮಾ.14 ರಾತ್ರಿ ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ದಿ, ರಾಕ್ಷೋಗ್ನಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ ನಡೆಯಿತು.ಮಾ.15 ರಂದು ಪೂರ್ವಾಹ್ನ ಗಣಪತಿ ಹೋಮ ನಡೆದು ಬ್ರಹ್ಮಕಲಶಪೂಜೆ, ಪ್ರತಿಷ್ಠೆ,ಬ್ರಹ್ಮಕಲಶಾಭಿಷೇಕ, ಮಹಾಪೂಜೆ, ನಿತ್ಯನೈಮಿತ್ಯಾದಿಗಳ ನಿರ್ಣಯ ಹಾಗೂ ಶ್ರೀ ವೆಂಕಟ್ರಮಣ ದೇವರ ಹರಿಸೇವೆ ಮತ್ತು ಪ್ರಸಾದ ವಿತರಣೆ ನಡೆಯಿತು.ಈ ಸಂದರ್ಭದಲ್ಲಿ ಕುಟುಂಬದ ಹಿರಿಯರಾದ ನರಿಯೂರು ದುಗ್ಗಪ್ಪ ಗೌಡ, ನರಿಯೂರು ತರವಾಡು ಸೇವಾ ಟ್ರಸ್ಟ್ ನ ಅಧ್ಯಕ್ಷ ಲಿಂಗಪ್ಪ ಗೌಡ ಕೊಳ್ದುಮಜಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಲ್ಯಣ್ಣ ಗೌಡ ಕಾರಿಂಜ ನರಿಯೂರು, ತರವಾಡು ಮನೆಯ ಮುಖ್ಯಸ್ಥ ಪರಮೇಶ್ವರ ಗೌಡ ನರಿಯೂರು ಸೇರಿದಂತೆ ನರಿಯೂರು ಕುಟುಂಬಸ್ಥರು, ಬಂಧುಮಿತ್ರರು, ಭಕ್ತಾದಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರು ಆಶೀರ್ವಚನ ನೀಡಿ, “ನಮ್ಮ ಆಚಾರ, ಸಂಪ್ರದಾಯ, ತರವಾಡು ಉಳಿಯಬೇಕು. ತರವಾಡು ಉಳಿಯಬೇಕೆಂದರೆ ತರವಾಡಿನಲ್ಲಿ ದೀಪ ಬೆಳಗಬೇಕು. ದೀಪ ಬೆಳಗಿದರೂ ನಿತ್ಯ ನಿರಂತರವಾಗಿ ಉಳಿಯಬೇಕೆಂದರೆ ದೀಪ ಇರಿಸುವವರ ಬಗ್ಗೆಯೂ ನಮಗೆ ಪೂಜನೀಯವಾದಂತಹ ಭಾವನೆ ಇರಬೇಕು.ಕುಟುಂಬ ಆಚಾರ ವಿಚಾರಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಕುಟುಂಬದಲ್ಲಿ ಇರುವ ಹಿರಿಯವರ ಮೇಲೆಯೂ ಗೌರವ ಇರಬೇಕು. ಗೌಜಿಯಲ್ಲಿ ಪ್ರತಿಷ್ಠೆ ಆಗಿದೆ. ಇನ್ನೀಗ ಸ್ವಲ್ಪ ದಿನದಲ್ಲಿ ಮುಂದುವರಿದ ಭಾಗವಾಗಿ ನೇಮೋತ್ಸವ ನಡೆದರೆ ನಮ್ಮ ಜವಾಬ್ದಾರಿ ಮುಗಿಯಿತು ಎಂಬ ಭಾವನೆ ಬೇಡ. ಬದಲಾಗಿತರವಾಡಿನಲ್ಲಿ ಆಗುವ ಕಾರ್ಯಕ್ರಮದಲ್ಲಿ ನಿರಂತರ ಭಾಗವಹಿಸಿದಾಗ ಶ್ರೇಯಸ್ಸು ಲಭಿಸುತ್ತದೆ” ಎಂದರು. ನ.ಸೀತಾರಾಮರವರು ಕಾರ್ಯಕ್ರಮ ನಿರ್ವಹಿಸಿದರು.













































