ಆಸ್ಕ‌ರ್ ಪ್ರಶಸ್ತಿ ಘೋಷಣೆ: ಭಾರತದ ಚಿತ್ರಗಳಿಗೆ ನಿರಾಸೆ

Picture of Savistara

Savistara

Bureau Report

ಲಾಸ್‌ ಏಂಜಲೀಸ್ (ಅಮೆರಿಕ): ಚಲನಚಿತ್ರೋದ್ಯಮದ ಅತ್ಯಂತಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾದ ‘ಆಸ್ಕರ್’ ಘೋಷಣೆಯಾಗಿದೆ.2026ನೇ ಸಾಲಿನ ಪ್ರಶಸ್ತಿ ರೇಸ್‌ನಲ್ಲಿದ್ದ ‘ಕಾಂತಾರ ಅಧ್ಯಾಯ-1 ಸೇರಿದಂತೆ ಭಾರತದ ಯಾವುದೇ ಚಿತ್ರಗಳಿಗೆ ಪ್ರಶಸ್ತಿ ಲಭಿಸಿಲ್ಲ.

ರಿಷಬ್‌ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಅಧ್ಯಾಯ-1” ಚಿತ್ರವು ವಿಶ್ವದಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ₹818 ಕೋಟಿಗೂ ಗಳಿಕೆ ಮಾಡಿತ್ತು. ಈ ಚಿತ್ರವು ಆಸ್ಕ‌ರ್ ಅಕಾಡೆಮಿ ಪ್ರಶಸ್ತಿಯಲ್ಲಿ ‘ಅತ್ಯುತ್ತಮ ಚಿತ್ರ’ ವಿಭಾಗದಲ್ಲಿ ಪ್ರಶಸ್ತಿಗೆ ಅರ್ಜಿ ಸಲ್ಲಿಸಿತ್ತು.

ಜಾನ್ವಿ ಕಪೂರ್ ನಟನೆಯ, ಕರಣ್ ಜೋಹರ್ ಮತ್ತು ಅದಾ‌ರ್ ಪೂನಾವಾಲಾ ನಿರ್ಮಿಸಿರುವ ‘ಹೋಮ್‌ಬೌಂಡ್’ ಚಿತ್ರವು 15 ಚಿತ್ರಗಳ ಕಿರುಪಟ್ಟಿಯಲ್ಲಿ ಸ್ಥಾನ ಪಡೆದಿತ್ತು. ಆದರೆ ಅಂತಿಮ ಐದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಯಿತು.ಆಸ್ಕ‌ರ್ ಅಕಾಡೆಮಿ ಪ್ರಶಸ್ತಿಯ ‘ಅತ್ಯುತ್ತಮ ಚಿತ್ರ’ ವಿಭಾಗದ ರೇಸ್‌ನಲ್ಲಿದ್ದ ‘ತನ್ವಿ ದಿ ಗ್ರೇಟ್’ ಹಾಗೂ ಅಶ್ವಿಕ್ ಕುಮಾರ್ ನಿರ್ದೇಶನದ ‘ಮಹಾವತಾರ ನರಸಿಂಹ’ ಚಿತ್ರಕ್ಕೂ ಪ್ರಶಸ್ತಿ ಸಿಕ್ಕಿಲ್ಲ.

News Updates

ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡೋಕೆ ಆಗಿಲ್ಲ, ನಿಮ್ಮಿಂದ ಆಗುತ್ತಾ? ಅಧಿಕಾರದಲ್ಲಿ ಮೆರೆದವರಿಗೆ ಬಂಗಾಳದ ಜನ್ನು ಅಟ್ಟಾಡಿಸಿ ಹೊಡೆಯುತ್ತಿದ್ದಾರೆ, ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಸಿಟಿ ರವಿ ವಾಗ್ದಾಳಿ

[t4b-ticker]
error: Content is protected !!