ಯುದ್ಧದ ಪರಿಣಾಮದಿಂದ ದೇಶದ ಹಲವು ರಾಜ್ಯಗಳಲ್ಲಿ ಗ್ಯಾಸ್ ಸಿಲಿಂಡರ್ ಕೊರತೆ ಉಂಟಾಗಿದ್ದು, ಇದರ ಪರಿಣಾಮ ಬೆಂಗಳೂರಿನ ಹೋಟೆಲ್ ಮತ್ತು ಬೀದಿ ಬದಿ ವ್ಯಾಪಾರಿಗಳಿಗೆ ತೀವ್ರವಾಗಿ ತಟ್ಟಿದೆ. ಸುಮಾರು 15 ಸಾವಿರ ಬೀದಿ ಬದಿ ವ್ಯಾಪಾರಿಗಳು ಗ್ಯಾಸಿನ ಕೊರತೆಯಿಂದ ತಮ್ಮ ವ್ಯವಹಾರ ಸ್ಥಗಿತಗೊಳಿಸಿದ್ದರೆ, 3 ಸಾವಿರಕ್ಕೂ ಹೆಚ್ಚು ಸ್ಟ್ರೀಟ್ ವೆಂಡರ್ಸ್ ಉದ್ಯಮ ಬಂದ್ ಆಗಿದ್ದಾರೆ.ರಾಜ್ಯದಲ್ಲಿ ಒಟ್ಟು 1.60 ಲಕ್ಷ ಬೀದಿ ಬದಿ ವ್ಯಾಪಾರಿಗಳು ಇದ್ದಾರೆ. ಜಿಬಿಎ ಪಟ್ಟಿಯ 10 ಸಾವಿರ ವ್ಯಾಪಾರಿಗಳಲ್ಲಿ 3 ಸಾವಿರಕ್ಕೂ ಹೆಚ್ಚು ವ್ಯವಹಾರ ಸಿಲಿಂಡರ್ ಇಲ್ಲದೆ ಬಂದ್ ಆಗಿದ್ದರೆ, ಮೆಜೆಸ್ಟಿಕ್, ವಿಜಯನಗರ, ಜಯನಗರ, ಗಾಂಧಿಬಜಾರ್, ಶಿವಾಜಿನಗರ, ಮಾಗಡಿ ರಸ್ತೆ, ರಾಜಾಜಿನಗರ, ಮಾರತಹಳ್ಳಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಚಿಕ್ಕ ಹೋಟೆಲ್‌ಗಳು ಮತ್ತು ಬೀದಿ ಬದಿ ಅಂಗಡಿಗಳು ಮುಚ್ಚಿರುವುದು ಕಂಡುಬಂದಿದೆ.
ಕೇಂದ್ರ ಸರ್ಕಾರ ಪ್ಯಾನಿಕ್ ಬುಕ್ಕಿಂಗ್ ಸಮಸ್ಯೆ ಎಂದಾದರೂ, ಜನರು ಮುಂಚಿತವಾಗಿ ಸಿಲಿಂಡರ್ ಬುಕ್ ಮಾಡುತ್ತಿರುವುದರಿಂದ ಅವಶ್ಯಕತೆಗೆ ತಕ್ಕ ಪ್ರಮಾಣದಲ್ಲಿ ಗ್ಯಾಸಿನ ಲಭ್ಯತೆ ಕಡಿಮೆಯಾಗಿದ್ದು, ವ್ಯಾಪಾರಿಗಳ ಜೀವನ ನಿರ್ವಹಣೆ ಸಂಕಷ್ಟಕ್ಕೆ ಸಿಲುಕಿದೆ.ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಇಲಾಖೆ ಅನಗತ್ಯ ಬುಕ್ಕಿಂಗ್ ತಡೆಯಲು ರಾಜ್ಯಗಳಿಗೆ ಸೂಚನೆ ನೀಡಿದ್ದು, ಅಗತ್ಯವಿರುವವರಿಗೆ ಮಾತ್ರ ಸಿಲಿಂಡರ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.













































